ಡಿಸಿಎಂ ಡಿ ಕೆ ಶಿವಕುಮಾರ್ ಇಂದು ಮಧ್ಯ ಪ್ರದೇಶ ಪ್ರವಾಸ: ದೇವಾಲಯಗಳಲ್ಲಿ ಪೂಜೆ, ನಾಳೆ ಬೆಂಗಳೂರಿಗೆ ವಾಪಸ್
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎರಡು ದಿನಗಳ ಮಧ್ಯ ಪ್ರದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ಗ್ವಾಲಿಯರ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ನಂತರ ಸುಮಾರು 70 ಕಿಮೀ ದೂರದ ಡಾಟಿಯಾಗೆ ತೆರಳುತ್ತಾರೆ.
Published: 10th June 2023 02:07 PM | Last Updated: 10th June 2023 02:07 PM | A+A A-

ಡಿ ಕೆ ಶಿವಕುಮಾರ್
ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎರಡು ದಿನಗಳ ಮಧ್ಯ ಪ್ರದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ಗ್ವಾಲಿಯರ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ನಂತರ ಸುಮಾರು 70 ಕಿಮೀ ದೂರದ ಡಾಟಿಯಾಗೆ ತೆರಳುತ್ತಾರೆ.
ರಾಜ್ಯ ಕಾಂಗ್ರೆಸ್‌ನಿಂದ ಬಂದ ಮಾಹಿತಿಯ ಪ್ರಕಾರ, ಶಿವಕುಮಾರ್ ಅವರು ದಾತಿಯಾದಲ್ಲಿರುವ ಪೀತಾಂಬರ ಪೀಠ ಎಂದೂ ಕರೆಯಲ್ಪಡುವ ಬಗ್ಲಾಮುಖಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಪೀತಾಂಬರ ಪೀಠದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಶಿವಕುಮಾರ್ 7.30ಕ್ಕೆ ಇಂದೋರ್‌ಗೆ ತೆರಳಲಿದ್ದಾರೆ.
ಇಂದೋರ್‌ನಿಂದ ಅವರು ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಉಜ್ಜಯಿನಿ ತಲುಪುತ್ತಾರೆ. ನಾಳೆ ಮುಂಜಾನೆ ನಡೆಯುವ ‘ಭಸ್ಮ ಆರತಿ’ಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಕಾಲಭೈರವ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ನಂತರ ನಾಳೆ ಬೆಳಗ್ಗೆ ಇಂದೋರ್ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಮರಳಲಿದ್ದಾರೆ.
ಕಳೆದ ಕೆಲವು ವಾರಗಳಿಂದ, ಶಿವಕುಮಾರ್ ಮಧ್ಯಪ್ರದೇಶದ ರಾಜಕೀಯದಲ್ಲಿ ಸಕ್ರಿಯರಾಗುತ್ತಾರೆ ಎಂದು ರಾಜಕೀಯ ವಲಯಗಳಲ್ಲಿ ಗುಸುಗುಸು ಇತ್ತು, ಆದರೆ, ಅವರ ಎರಡು ದಿನಗಳ ಭೇಟಿಯಲ್ಲಿ ಅವರು ಭೋಪಾಲ್ ಗೆ ತೆರಳುತ್ತಿಲ್ಲ. ಕೇವಲ ದೇವಾಲಯಗಳಲ್ಲಿ ಮಾತ್ರ ಪ್ರಾರ್ಥನೆ ಸಲ್ಲಿಸುತ್ತಾರೆ.