ಆರ್‌ಎಸ್‌ಎಸ್‌ಗೆ ಭೂಮಿ ನೀಡಿರುವುದರ ಪರಿಶೀಲನೆ; ಕಾಂಗ್ರೆಸ್ ಸರ್ಕಾರ ಸೇಡಿನಿಂದ ವರ್ತಿಸಬಾರದು: ಅಶ್ವತ್ಥ್ ನಾರಾಯಣ
ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಆರ್‌ಎಸ್‌ಎಸ್‌ಗೆ ಮಂಜೂರು ಮಾಡಿದ ಭೂಮಿಯನ್ನು ಪರಿಶೀಲಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದ್ದು, ಕಾಂಗ್ರೆಸ್‌ನ ಈ ಕ್ರಮವನ್ನು ಬಿಜೆಪಿ ನಾಯಕ ಡಾ. ಸಿಎನ್ ಅಶ್ವತ್ಥ್ ನಾರಾಯಣ ಟೀಕಿಸಿದ್ದಾರೆ. ಸೇಡಿನಿಂದ ಈ ರೀತಿ ಮಾಡಬಾರದು ಎಂದು ಹೇಳಿದ್ದಾರೆ.
Published: 11th June 2023 09:13 AM | Last Updated: 11th June 2023 09:13 AM | A+A A-

ಅಶ್ವತ್ಥನಾರಾಯಣ
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಆರ್‌ಎಸ್‌ಎಸ್‌ಗೆ ಮಂಜೂರು ಮಾಡಿದ ಭೂಮಿಯನ್ನು ಪರಿಶೀಲಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದ್ದು, ಕಾಂಗ್ರೆಸ್‌ನ ಈ ಕ್ರಮವನ್ನು ಬಿಜೆಪಿ ನಾಯಕ ಡಾ. ಸಿಎನ್ ಅಶ್ವತ್ಥ್ ನಾರಾಯಣ ಟೀಕಿಸಿದ್ದಾರೆ. ಸೇಡಿನಿಂದ ಈ ರೀತಿ ಮಾಡಬಾರದು ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರವು ಪ್ರತಿಯೊಬ್ಬರಿಗೂ ಅನುಕೂಲಕಾರಿಯಾಗಿ ಕಾರ್ಯನಿರ್ವಹಿಸಬೇಕು ಮತ್ತು ಸರ್ಕಾರವು ಪಕ್ಷಪಾತ ಮಾಡದಂತೆ ಸಾಕಷ್ಟು ಜಾಗರೂಕರಾಗಿರಬೇಕು ಎಂದು ಹೇಳಿದರು.
'ಈ ವಿಷಯಗಳನ್ನು ಪರಿಶೀಲಿಸಲು ಮತ್ತು ಪರಿಷ್ಕರಿಸಲು ಸರ್ಕಾರಕ್ಕೆ ಎಲ್ಲಾ ಹಕ್ಕಿದೆ. ಆದರೆ, ಅದು ಸೇಡಿನ ಅಥವಾ ಪ್ರತೀಕಾರದಿಂದ ಕೂಡಿಕಬಾರದು. ಸರ್ಕಾರದ ನಡೆಯು ವಿನಾಶಕಾರಿಯಾಗಿರಬಾರದು ಮತ್ತು ಅನುಕೂಲಕಾರಿಯಾಗಿರಬೇಕು. ಸರ್ಕಾರದ ಉದ್ದೇಶಗಳು ಮುಖ್ಯವಾಗಿರಬೇಕು. ಸರ್ಕಾರ ಪಕ್ಷಪಾತ ಮಾಡುವಂತಿಲ್ಲ' ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿಯವರು RSS ಸೇರಿದಂತೆ ತಮ್ಮ ಸಂಸ್ಥೆಗಳಿಗೆ ಸರ್ಕಾರಿ ಭೂಮಿ ನೀಡಿದ್ದಾರೆ: ಸಚಿವ ದಿನೇಶ್ ಗುಂಡೂರಾವ್ ಗಂಭೀರ ಆರೋಪ
ಕರ್ನಾಟಕ ಸರ್ಕಾರವು ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರವು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್ಎಸ್) ಮತ್ತು ಅದರ ಅಂಗಸಂಸ್ಥೆಗಳು ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಭೂಮಿಯನ್ನು ಮಂಜೂರು ಮಾಡಿದ್ದು, ಅದನ್ನು ಪರಿಶೀಲಿಸಲಾಗುತ್ತದೆ ಎಂದಿತ್ತು.
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಬಿಜೆಪಿ ಅಧಿಕಾರಾವಧಿಯಲ್ಲಿ ಅನುಮೋದಿಸಿದ ಭೂಮಿ ಮತ್ತು ಬಜೆಟ್‌ಗಳನ್ನು ಪರಿಶೀಲಿಸುವ ನಿರ್ಧಾರವನ್ನು ಪ್ರಕಟಿಸಿತು. ಚುನಾವಣೆಗೂ ಮುನ್ನ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಆರೆಸ್ಸೆಸ್ ಅನ್ನು ನಿಷೇಧಿಸುವುದಾಗಿ ಭರವಸೆ ನೀಡಿತ್ತು.