ಹುಬ್ಬಳ್ಳಿ: ಗರ್ಭಿಣಿ ಮಹಿಳೆಗೆ ಕಚ್ಚಿದ ಹಾವು, ಕಿಮ್ಸ್ ನಲ್ಲಿ ಜೀವನ್ಮರಣದ ಹೋರಾಟ
ಹಾವೇರಿಯ 28 ವರ್ಷದ ಗರ್ಭಿಣಿ ಮಹಿಳೆಯೊಬ್ಬರಿಗೆ ವಿಷಕಾರಿ ಹಾವು ಕಚ್ಚಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಹಿಳೆ ಮತ್ತು ಮಗು ರಕ್ಷಿಸಲು...
Published: 13th June 2023 03:17 PM | Last Updated: 13th June 2023 03:17 PM | A+A A-

ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ಹಾವೇರಿಯ 28 ವರ್ಷದ ಗರ್ಭಿಣಿ ಮಹಿಳೆಯೊಬ್ಬರಿಗೆ ವಿಷಕಾರಿ ಹಾವು ಕಚ್ಚಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಹಿಳೆ ಮತ್ತು ಮಗು ರಕ್ಷಿಸಲು ವೈದ್ಯರ ತಂಡ ತೀವ್ರ ಪ್ರಯತ್ನ ನಡೆಸುತ್ತಿದೆ.
ಹಾವೇರಿಯ ದೇವಗಿರಿ ಗ್ರಾಮದಲ್ಲಿ ರೋಗಿ ಮಂಜುಳಾ ಹನುಮಂತಪ್ಪ ಅವರಿಗೆ ಅವರ ಮನೆಯಲ್ಲಿ ಮಲಗಿದ್ದ ವೇಳೆ ಹಾವು ಕಚ್ಚಿದೆ. ಹಾವು ಕಚ್ಚಿದ ತಕ್ಷಣ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಆಂಟಿ ಸ್ನೇಕ್ ವೆನಮ್ ನೀಡಲಾಗಿದೆ. ಆದರೆ ರಿಯಾಕ್ಷನ್ ಮತ್ತು ತೀವ್ರ ರಕ್ತಸ್ರಾವದ ಕಾರಣ ಮಹಿಳೆಯನ್ನು ಹುಬ್ಬಳಿಯ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಇದನ್ನು ಓದಿ: ಚಿಕ್ಕಮಗಳೂರು: ನಾಗರಹಾವು ಕಚ್ಚಿ ಉರಗ ತಜ್ಞ ಸ್ನೇಕ್ ನರೇಶ್ ಸಾವು!
"ಮಹಿಳೆಯನ್ನು ಕಿಮ್ಸ್‌ಗೆ ಕರೆತಂದಾಗ ರಿಯಾಕ್ಷನ್ ನಿಂದ ಅವರು ಪ್ರಜ್ಞಾಹೀನರಾಗಿದ್ದರು. ಆಂಟಿ ಸ್ನೇಕ್ ವೆನಮ್ ವ್ಯಕ್ತಿಯಿಂದ ವ್ಯಕ್ತಿಗೆ ಪ್ರತಿಕೂಲವಾಗಿ ಪ್ರತಿಕ್ರಿಯಿಸುತ್ತವೆ. ಮಹಿಳೆ ಇನ್ನೂ ಸಾಮಾನ್ಯ ಸ್ಥಿತಿಗೆ ಬಂದಿಲ್ಲ. ಆದರೆ ಮಗು ಆರೋಗ್ಯವಾಗಿದೆ. ನಮ್ಮ ಮೊದಲ ಆದ್ಯತೆತಾಯಿಯನ್ನು ಉಳಿಸಿಕೊಳ್ಳುವುದು ಎಂದು ಕಿಮ್ಸ್‌ನ ಹಿರಿಯ ಸ್ತ್ರೀರೋಗತಜ್ಞರು ಹೇಳಿದ್ದಾರೆ.
ಹಾವನ್ನು ಗುರುತಿಸುವುದು ಮುಖ್ಯವಾಗಿದ್ದು, ಕುಟುಂಬದ ಸದಸ್ಯರು ಹಾವನ್ನು ಪೆಟ್ಟಿಗೆಯಲ್ಲಿಟ್ಟಿದ್ದರಿಂದ ತಜ್ಞರ ಸಹಾಯ ಪಡೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. "ಕಚ್ಚಿದ ಕಾಮನ್ ಕ್ರೆಟ್ ಹಾವು ಹೆಚ್ಚು ವಿಷಕಾರಿಯಾಗಿದೆ. ನಾವು ವಿಯೋಲ್ಗಳನ್ನು ನೀಡಲು ಪ್ರಾರಂಭಿಸಿದ್ದೇವೆ. ಪ್ರಸ್ತುತ ರೋಗಿಯು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಮತ್ತು ಮುಂದಿನ ಎರಡು ದಿನ ನಿರ್ಣಾಯಕ ವೈದ್ಯರು ತಿಳಿಸಿದ್ದಾರೆ.
ಹಳ್ಳಿಗಳಲ್ಲಿ ಜಾಗೃತಿ ಅಗತ್ಯ
ಕಳೆದ ಎರಡು ವಾರಗಳಲ್ಲಿ ವರದಿಯಾಗುತ್ತಿರುವ ಎರಡನೇ ಕಾಮನ್ ಕ್ರೆಟ್ ಹಾವು ಕಚ್ಚಿದ ಪ್ರಕರಣ ಇದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಎರಡು ವಾರಗಳ ಹಿಂದೆ ಬೆಳಗಾವಿ ಜಿಲ್ಲೆಯ ಸೌಂದತ್ತಿಯ ರೋಗಿಯೊಬ್ಬರು ತಮ್ಮ ಮನೆಯಲ್ಲಿ ಮಲಗಿದ್ದಾಗ ಹಾವು ಕಚ್ಚಿತ್ತು. ಅವರನ್ನು ಕಿಮ್ಸ್‌ಗೆ ದಾಖಲಿಸಲಾಗಿದ್ದು, ಕೆಲ ದಿನಗಳ ನಂತರ ಚೇತರಿಸಿಕೊಂಡಿದ್ದರು. ಎರಡೂ ಪ್ರಕರಣಗಳಲ್ಲಿ ಮಲಗಿದ್ದ ವೇಳೆಯೇ ಹಾವು ಕಚ್ಚಿದೆ. ಹಾವುಗಳ ಬಗ್ಗೆ ಅದರಲ್ಲೂ ಹಾವುಗಳ ಹೆಚ್ಚಿರುವ ಹಳ್ಳಿಗಳಲ್ಲಿ ನೆಲದ ಮೇಲೆ ಮಲಗಬಾರದು ಎಂಬ ಅರಿವು ಮೂಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.