ಬೆಂಗಳೂರು: ಪತ್ನಿಯನ್ನು ಮನೆಗೆ ಕಳುಹಿಸದ ಅತ್ತೆಗೆ ಚಾಕು ಇರಿದು ಕೊಲೆಗೆ ಯತ್ನಿಸಿದ ಅಳಿಯನ ಬಂಧನ

ಪತ್ನಿಯನ್ನು ತನ್ನ ಮನೆಗೆ ಕಳುಹಿಸಲಿಲ್ಲವೆಂಬ ಕಾರಣಕ್ಕೆ ಅತ್ತೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಆರೋಪದಡಿ ಮನೋಜ್ ಕುಮಾರ್ (28) ಅವರನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪತ್ನಿಯನ್ನು ತನ್ನ ಮನೆಗೆ ಕಳುಹಿಸಲಿಲ್ಲವೆಂಬ ಕಾರಣಕ್ಕೆ ಅತ್ತೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಆರೋಪದಡಿ ಮನೋಜ್ ಕುಮಾರ್ (28) ಅವರನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇಬ್ಬಲೂರಿನಲ್ಲಿ ಜೂನ್ 8ರಂದು ನಡೆದಿರುವ ಘಟನೆಯಲ್ಲಿ ಗೀತಾ ಗಾಯಗೊಂಡಿದ್ದಾರೆ. ಅವರ ಹೇಳಿಕೆ ಹಾಗೂ ಮಗಳು ವರ್ಷಿತಾ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಅಳಿಯ ಮನೋಜ್‌ಕುಮಾರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮಂಡ್ಯದ ಗೀತಾ ಅವರ ಮಗಳು ವರ್ಷಿತಾ, ಕೋಲಾರದ ಮನೋಜ್‌ನನ್ನು ಪ್ರೀತಿಸಿ ಮದುವೆಯಾಗಿದ್ದರು. ಕ್ಯಾಬ್ ಚಾಲಕನಾಗಿದ್ದ ಮನೋಜ್, ಪತ್ನಿ ವರ್ಷಿತಾ ಜೊತೆ ಇಬ್ಬಲೂರಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಮದ್ಯವ್ಯಸನಿ ಆಗಿದ್ದ ಮನೋಜ್, ನಿತ್ಯವೂ ಕುಡಿದು ಬಂದು ಪತ್ನಿಗೆ ಹೊಡೆಯುತ್ತಿದ್ದ. ಬೇಸತ್ತ ಪತ್ನಿ, ವರ್ಷದ ಹಿಂದೆಯಷ್ಟೇ ಗಂಡನ ಮನೆ ತೊರೆದು ತವರು ಮನೆಗೆ ಹೋಗಿದ್ದರು.

ಮದುವೆ ಬಳಿಕ ತನ್ನ ವರಸೆ ಬದಲಿಸಿದ್ದ ಮನೋಜ್ ಕುಡಿದು ಬಂದು ಗಲಾಟೆ ಮಾಡಲು ಆರಂಭಿಸಿದ್ದನು. ಇದರಿಂದ ಬೇಸತ್ತಿದ್ದ ವರ್ಷಿತಾ ತವರು ಮನೆ ಸೇರಿದ್ದರು. ಪತ್ನಿಯನ್ನು ಕರೆಯಲು ಬಂದಿದ್ದ ಮನೋಜ್ ಅತ್ತೆಗೆ ಚಾಕುವಿನಿಂದ ಇರಿದಿದ್ದಾನೆ. ಸದ್ಯ ಚಾಕು ಇರಿತಕ್ಕೊಳಗಾದ ಗೀತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಕೆಲ ತಿಂಗಳ ಹಿಂದೆಯಷ್ಟೇ ವರ್ಷಿತಾ ಪತಿ ಜೊತೆ ಜಗಳ ಮಾಡಿ ತವರು ಮನೆಗೆ ಬಂದಿದ್ದರು. ವಾಪಸು ಹೋಗಲು ನಿರಾಕರಿಸಿದ್ದರು. ಜೂನ್ 8ರಂದು ಇಬ್ಬಲೂರಿನಲ್ಲಿರುವ ತವರು ಮನೆಗೆ ಬಂದಿದ್ದ ಆರೋಪಿ, ಪತ್ನಿಯನ್ನು ಕಳುಹಿಸುವಂತೆ ಒತ್ತಾಯಿಸಿದ್ದ. ಆದರೆ, ಅತ್ತೆ ಗೀತಾ ಒಪ್ಪಿರಲಿಲ್ಲ. ಕೋಪಗೊಂಡ ಮನೋಜ್, ಗೀತಾ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಎಂದು ಪೊಲೀಸರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com