ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಬಣ್ಣ ಕಪ್ಪು ಎಂಬ ಕಾರಣಕ್ಕೆ ಪತ್ನಿಯನ್ನು ಕತ್ತು ಹಿಸುಕಿ ಹತ್ಯೆಗೈದ ಪತಿ!

‘ಕಪ್ಪು ಮೈಬಣ್ಣ’ ಎಂಬ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಯ ಕತ್ತು ಹಿಸುಕಿ ಹತ್ಯೆಗೈದಿರುವ ವಿಲಕ್ಷಣ ಘಟನೆ ಜೇವರ್ಗಿ ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ಬುಧವಾರ ನಡೆದಿದೆ.

ಕಲಬುರಗಿ: ‘ಕಪ್ಪು ಮೈಬಣ್ಣ’ ಎಂಬ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಯ ಕತ್ತು ಹಿಸುಕಿ ಹತ್ಯೆಗೈದಿರುವ ವಿಲಕ್ಷಣ ಘಟನೆ ಜೇವರ್ಗಿ ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ಬುಧವಾರ ನಡೆದಿದೆ.

ಹತ್ಯೆಯಾದ ಮಹಿಳೆಯನ್ನು ಫರ್ಜಾನಾ ಬೇಗಂ (28) ಎಂದು ಗುರ್ತಿಸಲಾಗಿದೆ. ಮೂಲತ ಯಾದಗಿರಿ ಜಿಲ್ಲೆಯ ಶಹಪೂರ್ ಮೂಲದ ಫರ್ಜಾನಾ ಬೇಗಂ ವಿವಾಹ, ಕೆಲ್ಲೂರು ಗ್ರಾಮದ ಖಾಜಾ ಪಟೇಲ್ ಜೊತೆ 7 ವರ್ಷಗಳ ಹಿಂದೆ ಆಗಿತ್ತು. ದಂಪತಿಗೆ ನಾಲ್ಕು ಮತ್ತು ಎರಡು ವರ್ಷದ ಇಬ್ಬರು ಮಕ್ಕಳಿದ್ದಾರೆಂದು ತಿಳಿದುಬಂದಿದೆ.

ಮದುವೆಗೂ ಮುನ್ನ ಚಿನ್ನ ರನ್ನ ಎಂದು ಮುದ್ದಿಸುತ್ತಿದ್ದ ಪತಿ, ಮದುವೆಯಾಗಿ ಮಕ್ಕಳಾದ ಬಳಿಕ ನಿನ್ನ ಮೈಬಣ್ಣ ಕಪ್ಪು ಎಂದು ಚಿತ್ರಹಿಂಸೆ ನೀಡಲು ಆರಂಭಿಸಿದ್ದಾನೆ. ನಿನ್ನೆ ಮುಖಕ್ಕೆ ಎಷ್ಟೇ ಪೌಡರ್ ಹಚ್ಚಿದರೂ ಹಿರೋಯಿನ್ ಆಗಲು ಆಗುವುದಿಲ್ಲ ಎಂದು ಸದಾ ನಿಂದಿಸಲು ಆರಂಭಿಸಿದ್ದಾನೆ. ಈ ವಿಷಯವನ್ನು ಫರ್ಜಾನಾ ತನ್ನ ಪೋಷಕರಿಗೆ ತಿಳಿಸಿ, ನೊಂದುಕೊಂಡಿದ್ದಾಳೆ.

ದಿನ ಕಳೆದಂತೆ ಪಟೇಲ್ ಪತ್ನಿಗೆ ವರದಕ್ಷಿಣಿ ಕಿರುಕುಳ ನೀಡಲು ಆರಂಭಿಸಿದ್ದಾರೆ. ನನ್ನ ಸ್ಥಾನಮಾನಕ್ಕೆ ನೀನು ಹೊಂದಿಕೆಯಾಗುವುದಿಲ್ಲ ಎಂದು ಕಿರುಕುಳ ನೀಡಿದ್ದಾನೆ. ಈ ಬೆಳವಣಿಗೆ ಬೆನ್ನಲ್ಲೇ ಬುಧವಾರ ರಾತ್ರಿ ಫರ್ಜಾನಾ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇದು ಮಹಿಳೆಯ ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ.

ಕೆಲ್ಲೂರಿನ ಹಾಲಿನ ವ್ಯಾಪಾರಿಯೊಬ್ಬರು ಸಾವಿನ ವಿಚಾರವನ್ನು ಫರ್ಜಾನಾ ಅವರ ಕುಟುಂಬಕ್ಕೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಬಳಿಕ ಘಟನೆ ಬೆಳಕಿಗೆ ಬಂದಿದೆ. ಶವದ ಪಕ್ಕದಲ್ಲಿ ಮಕ್ಕಳಿಬ್ಬರು ರೋಧಿಸಿರುವುದು ಕಂಡುಬಂದಿದ್ದು, ಈ ವೇಳೆ ಕುಟುಂಬಸ್ಥರು ಯಾರೂ ಕಂಡು ಬಂದಿಲ್ಲ. ಎಲ್ಲರೂ ಪರಾರಿಯಾಗಿದ್ದಾರೆಂದು ಫರ್ಜಾನಾ ಅವರ ಪೋಷಕರು ಹೇಳಿದ್ದಾರೆ.

ಇದೀಗ ಅಳಿಯ ಖಾಜಾ ಪಟೇಲ್ ವಿರುದ್ಧ ಫರ್ಜಾನಾ ಕುಟುಂಬಸ್ಥರು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ನಡುವೆ ಕಲಬುರಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶಹಾಪುರದಲ್ಲಿ ಮೃತಳ ಅಂತಿಮ ಸಂಸ್ಕಾರ ನಡೆಸಲಾಯಿತು. ಫರ್ಜಾನಾ ಅವರ ಮನೆಯವರು ಇಬ್ಬರು ಮಕ್ಕಳನ್ನು ಶಹಾಪುರಕ್ಕೆ ಕರೆತಂದಿದ್ದಾರೆ ಎಂದು ಫರ್ಜಾನಾ ಅವರ ಸಂಬಂಧಿ ಖುರ್ಷಿದ್ ಅವರು ಹೇಳಿದ್ದಾರೆ.

ಕಲಬುರಗಿ ಗ್ರಾಮಾಂತರ ಡಿವೈಎಸ್ಪಿ ಉಮೇಶ ಚಿಕ್ಕಮಠ ಮಾತನಾಡಿ, ಈ ಸಂಬಂಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ. ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಫರ್ಜಾನಾ ಸಾವಿನ ಹಿಂದಿನ ಕಾರಣಗಳನ್ನು ಕಂಡುಹಿಡಿಯಲು ಜೆಎಂಎಸ್ ತಂಡವನ್ನು ಕೆಲ್ಲೂರಿಗೆ ಕಳುಹಿಸಲಿದೆ ಎಂದು ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್) ರಾಜ್ಯ ಘಟಕದ ಉಪಾಧ್ಯಕ್ಷೆ ನೀಲಾ ಕೆ ಅವರು ತಿಳಿಸಿದ್ದಾರೆ.

"ಮೃತರು ಆತ್ಮಹತ್ಯೆ ಮಾಡಿಕೊಂಡಿದ್ದರೂ, ಚಿತ್ರಹಿಂಸೆ ಆರೋಪಗಳು ನಿಜವಾಗಿದ್ದರೂ ಆ ಸಾವನ್ನು ಕೊಲೆ ಎಂದೇ ಪರಿಗಣಿಸಲಾಗುತ್ತದೆ". ಮಹಿಳಾ ಹಕ್ಕುಗಳ ಆಯೋಗವು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿ ಘಟನೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com