ಪ್ರಧಾನಿ ಮೋದಿ ರಾಜ್ಯ ಭೇಟಿ: ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಾಲಕನ ಕಪ್ಪು ಬಣ್ಣದ ಟಿ-ಶರ್ಟ್ ತೆಗೆಸಿದ ಭದ್ರತಾ ಸಿಬ್ಬಂದಿ
ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಗಾಗಿ ನಿಯೋಜನೆಗೊಂಡ ಪೊಲೀಸರು ಮತ್ತು ಏಜೆನ್ಸಿಗಳು ಭಾನುವಾರ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಬಾಲಕನೊಬ್ಬನ ಕಪ್ಪು ಬಣ್ಣದ ಟೀ ಶರ್ಟ್ ಅನ್ನು ತೆಗೆಸಿರುವ ಘಟನೆ ನಡೆದಿದೆ.
Published: 12th March 2023 02:20 PM | Last Updated: 12th March 2023 02:20 PM | A+A A-

ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ
ಮಂಡ್ಯ: ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಗಾಗಿ ನಿಯೋಜನೆಗೊಂಡ ಪೊಲೀಸರು ಮತ್ತು ಸಿಬ್ಬಂದಿ ಭಾನುವಾರ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಬಾಲಕನೊಬ್ಬನ ಕಪ್ಪು ಬಣ್ಣದ ಟೀ ಶರ್ಟ್ ಅನ್ನು ತೆಗೆಸಿರುವ ಘಟನೆ ನಡೆದಿದೆ.
ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರು-ಮೈಸೂರು ಎಕ್ಸಪ್ರೆಸ್ವೇಯನ್ನು ಉದ್ಘಾಟಿಸಲು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆಗೆ ಆಗಮಿಸಿದ್ದಾರೆ. ಹೀಗಾಗಿ ಕಾರ್ಯಕ್ರಮ ನಡೆಸುವ ವೇದಿಕೆ ಸುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಜನರನ್ನು ಪರಿಶೀಲಿಸಲಾಗುತ್ತಿದೆ.
ಈ ವೇಳೆ ಕಾರ್ಯಕ್ರಮಕ್ಕೆ ಬಾಲಕ ಕಪ್ಪು ಟೀ ಶರ್ಟ್ ಧರಿಸಿ ತನ್ನ ತಾಯಿಯೊಂದಿಗೆ ಬಂದಿದ್ದಾನೆ. ಈ ವೇಳೆ ಪೊಲೀಸರು ಆತನನ್ನು ತಡೆದು, ಟೀ ಶರ್ಟ್ ಕಪ್ಪಾಗಿರುವುದರಿಂದ ಅದನ್ನು ತೆಗೆಯುವಂತೆ ಆತನ ತಾಯಿಗೆ ಕೇಳಿದ್ದಾರೆ.
ಇದನ್ನೂ ಓದಿ: ರಾಷ್ಟ್ರದ ಬೆಳವಣಿಗೆ ನೋಡುವುದರಲ್ಲಿ ಯುವಕರು ಅಪಾರ ಹೆಮ್ಮೆ ಪಡುತ್ತಿದ್ದಾರೆ: ಮಂಡ್ಯದಲ್ಲಿ ಪ್ರಧಾನಿ ಮೋದಿ ಭಾಷಣ
'ತಾಯಿ ಅದನ್ನು ತೆಗೆದು ತನ್ನ ಮಗನನ್ನು ಟಾಪ್‌ಲೆಸ್ ಆಗಿ ವೇದಿಕೆ ಕಾರ್ಯಕ್ರಮ ನಡೆಯುತ್ತಿದ್ದ ಆವರಣದೊಳಗೆ ಕರೆದೊಯ್ದಿದ್ದಾರೆ. ಮೆಟಲ್ ಡಿಟೆಕ್ಟರ್‌ಗಳ ಮೂಲಕ ಹಾದುಹೋದ ನಂತರ ತಾಯಿ ಮತ್ತೆ ತನ್ನ ಮಗನಿಗೆ ಟೀ-ಶರ್ಟ್ ಹಾಕಿದ್ದಾರೆ. ಆದರೆ, ಪೊಲೀಸ್ ಸಿಬ್ಬಂದಿ ಮತ್ತೆ ಆಕೆಯ ಬಳಿಗೆ ಧಾವಿಸಿ, ಪ್ರೋಟೋಕಾಲ್‌ನಿಂದ ಕಪ್ಪು ಟಿ-ಶರ್ಟ್‌ನೊಂದಿಗೆ ಹುಡುಗನನ್ನು ಒಳಗೆ ಬಿಡಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.
ತಾಯಿ ಮತ್ತೆ ಮಗನ ಕಪ್ಪು ಟೀ ಶರ್ಟ್ ತೆಗೆದು ಟಾಪ್ ಲೆಸ್ ಆಗಿ ಒಳಗೆ ಕರೆದುಕೊಂಡು ಹೋಗಿದ್ದಾರೆ. ಯಾವುದೇ ಕಾರಣಕ್ಕೂ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ.