ಮಾರ್ಚ್ 16ಕ್ಕೆ ಬೆಳಗಾವಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭೇಟಿ

ದಶಕಕ್ಕೂ ಹಿಂದೆಯೇ ಆರಂಭವಾಗಿದ್ದ ಬಹು ನಿರೀಕ್ಷಿತ ಶಿವ ಶಿವಸೃಷ್ಟಿ (ಶಿವ ಚರಿತ್ರೆ) ಕಾಮಗಾರಿ ಕೊನೆಗೂ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿದೆ.
ಸ್ಮೃತಿ ಇರಾನಿ
ಸ್ಮೃತಿ ಇರಾನಿ

ಬೆಳಗಾವಿ: ದಶಕಕ್ಕೂ ಹಿಂದೆಯೇ ಆರಂಭವಾಗಿದ್ದ ಬಹು ನಿರೀಕ್ಷಿತ ಶಿವ ಶಿವಸೃಷ್ಟಿ (ಶಿವ ಚರಿತ್ರೆ) ಕಾಮಗಾರಿ ಕೊನೆಗೂ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿದೆ.

ಶಾಸಕ ಅಭಯ್ ಪಾಟೀಲ್ ಅವರ ಕನಸಿನ ಯೋಜನೆಯನ್ನು ಮಾರ್ಚ್ 16ರಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅಲ್ಪಸಂಖ್ಯಾತರ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ಉದ್ಘಾಟನೆ ಮಾಡಲಿದ್ದಾರೆ.

ಶಿವಸೃಷ್ಟಿ ಯೋಜನೆಯು ಛತ್ರಪತಿ ಶಿವಾಜಿ ಮಹಾರಾಜರ ಜೀವನವನ್ನು ಆಧರಿಸಿದೆ. ಅವರ ಶೌರ್ಯದ ಘಟನೆಗಳನ್ನು ಈ ಯೋಜನೆ ವಿವರಿಸುತ್ತದೆ. ಯೋಜನೆಗೆ ರೂ.10 ಕೋಟಿಯನ್ನು ವೆಚ್ಚ ಮಾಡಲಾಗಿದೆ.

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) 2012ರ ನವೆಂಬರ್‌ನಲ್ಲಿ ಯೋಜನೆಯ ಕಾಮಗಾರಿ ಆರಂಭಿಸಿದ್ದು, 2013ರ ಏಪ್ರಿಲ್‌ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿತ್ತು. ಆದರೆ, ಕಾರಣಾಂತರಗಳಿಂದಾಗಿ ಕಾಮಗಾರಿ ವಿಳಂಬಗೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com