ಬೆಂಗಳೂರು: ಸ್ವಪ್ನಾ ಸುರೇಶ್‌ ಗೆ ಬೆದರಿಕೆ, ವಿಜೇಶ್ ಪಿಳ್ಳೈ ವಿರುದ್ಧ ಕೇಸ್ ದಾಖಲು, ಸಮನ್ಸ್

ಕೇರಳದ ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಕೆಆರ್ ಪುರಂ ಪೊಲೀಸರು ವಿಜೇಶ್ ಪಿಳ್ಳೈ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ಸ್ವಪ್ನಾ ಸುರೇಶ್
ಸ್ವಪ್ನಾ ಸುರೇಶ್

ಬೆಂಗಳೂರು: ಕೇರಳದ ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಕೆಆರ್ ಪುರಂ ಪೊಲೀಸರು ವಿಜೇಶ್ ಪಿಳ್ಳೈ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

ಅಂತಿಮ ಪರಿಹಾರವಾಗಿ ರೂ. 30 ಕೋಟಿ ನೀಡುವುದಾಗಿ ಹೇಳಿರುವ ಪಿಳೈ, ಒಂದು ವೇಳೆ ಅದನ್ನು ಒಪ್ಪಿಕೊಳ್ಳದಿದ್ದರೆ ಆಕೆಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ವಿಚಾರಣಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ಆತನಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಸ್ವಪ್ನಾ ಸುರೇಶ್ ಅವರ ದೂರಿನ ಆಧಾರದ ಮೇಲೆ ಪಿಳ್ಳೈ ವಿರುದ್ಧ ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇರಳದ ಯುಎಇ ಕಾನ್ಸುಲೇಟ್‌ನಲ್ಲಿ ಮಾಜಿ ಉದ್ಯೋಗಿಯಾಗಿರುವ ಮಹಿಳೆ, ಮಾರ್ಚ್ 4 ರಂದು ವೈಟ್‌ಫೀಲ್ಡ್ ಮುಖ್ಯ ರಸ್ತೆಯಲ್ಲಿರುವ ಸ್ಟಾರ್ ಹೋಟೆಲ್‌ನಲ್ಲಿ ತನ್ನನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದ ಪಿಳೈ, ಸಿಪಿಐ ಕಾರ್ಯದರ್ಶಿ ಗೋವಿಂದನ್ ತನನ್ನು ಕಳುಹಿಸಿದ್ದು, ಕೇರಳ ಮುಖ್ಯಮಂತ್ರಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ಅಂತಿಮ ಪರಿಹಾರವಾಗಿ ರೂ. 30 ಕೋಟಿ ಪಡೆದು ವಾರದೊಳಗೆ ದೇಶ ಬಿಡಬೇಕು ಎಂದು ಹೇಳಿ ನನ್ನ ಬ್ಯಾಗ್‌ನಲ್ಲಿ ಬಾಂಬ್ ಇಟ್ಟು ನಕಲಿ ಪ್ರಕರಣ ದಾಖಲಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ  ಆರೋಪಿಸಿದ್ದಾರೆ. 

ಆರಂಭದಲ್ಲಿ ನಾನ್ ಕಾಗ್ನಿಸಬಲ್ ವರದಿ(ವಾರಂಟ್ ಇಲ್ಲದೆ ಬಂಧಿಸಲು ಪೊಲೀಸ್ ಅಧಿಕಾರಿಗೆ ಅಧಿಕಾರವಿರಲ್ಲ) ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ನ್ಯಾಯಾಲಯದ ಅನುಮತಿ ಪಡೆದು ಸೋಮವಾರ ಪಿಳ್ಳೈ ವಿರುದ್ಧ ಐಪಿಸಿ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಮಾರ್ಚ್ 4 ರಂದು ಪಿಳ್ಳೈ ಭೇಟಿ ನೀಡಿದ್ದ ಹೋಟೆಲ್‌ಗೆ ಪೊಲೀಸರು ತೆರಳಿ, ಅಲ್ಲಿನ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ ನಂತರ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಪಿಳ್ಳೈ ಅವರಿಗೆ ಆರು ದಿನಗಳೊಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪೊಲೀಸರು ದೂರುದಾರರ (ಸ್ವಪ್ನಾ ಸುರೇಶ್) ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ ಮತ್ತು ತನಿಖಾ ಅಧಿಕಾರಿಯ ಮುಂದೆ ಹಾಜರಾಗುವಂತೆ ಪಿಳ್ಳೈಗೆ ನೋಟಿಸ್ ನೀಡಿದ್ದಾರೆ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಎಸ್ ಗಿರೀಶ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಸಾಕ್ಷ್ಯವನ್ನು ಸಂಗ್ರಹಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com