ದೇವರ ಹೆಸರಲ್ಲಿ ಪಂಗನಾಮ: ಅದೃಷ್ಟದ ಸಾಲಿಗ್ರಾಮ ಎಂದು ನಕಲಿ ಕಲ್ಲನ್ನು 2 ಕೋಟಿಗೆ ಮಾರಲು ಯತ್ನಿಸಿದ ಇಬ್ಬರ ಬಂಧನ
ರಾಜಾಜಿನಗರದಲ್ಲಿ ನಕಲಿ ಸಾಲಿಗ್ರಾಮ ಕಲ್ಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Published: 18th March 2023 12:46 PM | Last Updated: 18th March 2023 12:46 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜಾಜಿನಗರದಲ್ಲಿ ನಕಲಿ ಸಾಲಿಗ್ರಾಮ ಕಲ್ಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮನೋಜ್, 57 ಮತ್ತು ಆದಿತ್ಯ ಸಾಗರ್ ಜವಾಲ್ಕರ್- 37 ಬಂಧಿತ ಆರೋಪಿಗಳು. ಈ ಕಲ್ಲುಗಳನ್ನು ಉತ್ತರ ಪ್ರದೇಶದ ಗೋಮತಿ ನದಿಯಿಂದ ತರಲಾಗಿದೆ ಎಂದು ಖರೀದಿದಾರರಿಗೆ ತಿಳಿಸಿದ್ದರು.
ಮಹಾರಾಷ್ಟ್ರ ಮೂಲದ ಮನೋಜ್ ಹಾಗೂ ಆದಿತ್ಯ ಸಾಗರ್ ಗೋಮತಿ ನದಿಯಿಂದ ತಂದ ಕಲ್ಲನ್ನು ನಿಜವಾದ ಸಾಲಿಗ್ರಾಮ ಎಂದು ನಂಬಿಸಿ ಎರಡು ಕೋಟಿಗೆ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಖಚಿತ ಮಾಹಿತಿ ಸಂಗ್ರಹಿಸಿದ ಸಿಸಿಬಿ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ. ಸಿಸಿಬಿ ಪೊಲೀಸರು ಆರೋಪಿಗಳ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.