ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೆಬಿಜೆಎನ್‌ಎಲ್ ಟೆಂಡರ್‌ಗಳ ತನಿಖೆಗೆ ಕಾಂಗ್ರೆಸ್ ಆಗ್ರಹ

ಕಳೆದ ಒಂದು ವರ್ಷದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ಲಿಮಿಟೆಡ್  (ಕೆಬಿಜೆಎನ್‌ಎಲ್) ಕರೆದಿರುವ ಟೆಂಡರ್‌ಗಳ ಕುರಿತು ತನಿಖೆ ನಡೆಸುವಂತೆ ಪ್ರತಿಪಕ್ಷ ಕಾಂಗ್ರೆಸ್ ಕರ್ನಾಟಕ ಲೋಕಾಯುಕ್ತವನ್ನು ಒತ್ತಾಯಿಸಿದೆ.

ಬೆಂಗಳೂರು: ಕಳೆದ ಒಂದು ವರ್ಷದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ಲಿಮಿಟೆಡ್  (ಕೆಬಿಜೆಎನ್‌ಎಲ್) ಕರೆದಿರುವ ಟೆಂಡರ್‌ಗಳ ಕುರಿತು ತನಿಖೆ ನಡೆಸುವಂತೆ ಪ್ರತಿಪಕ್ಷ ಕಾಂಗ್ರೆಸ್ ಕರ್ನಾಟಕ ಲೋಕಾಯುಕ್ತವನ್ನು ಒತ್ತಾಯಿಸಿದೆ.

ಈ ಕುರಿತು ಮಾತನಾಡಿರುವ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಅವರು, ಕೃಷ್ಣಾ ಭಾಗ್ಯ ಜಲ ನಿಗಮ ಲಿಮಿಟೆಡ್  ನಿಯಮ ಉಲ್ಲಂಘಿಸಿದ್ದು, 2,326 ಕೋಟಿ ರೂ.ಗೆ ಟೆಂಡರ್ ಕರೆದಿದೆ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ರಮೇಶ್ ಬಾಬು ಅವರು ಲೋಕಾಯುಕ್ತಕ್ಕೆ ಪತ್ರ ಬರೆದಿದ್ದು, ಕಳೆದ ಒಂದು ವರ್ಷದಿಂದ ನಿಯಮಗಳನ್ನು ಉಲ್ಲಂಘನೆ ಮಡಾಲಾಗಿದ್ದು, ಹಲವು ಟೆಂಡರ್‌ಗಳನ್ನು ಕರೆಯಲಾಗಿದೆ. ನೀರಾವರಿ ಯೋಜನೆಗಳು ಮತ್ತು ಪರಿಹಾರ ನೀಡುವಲ್ಲಿ ಎಲ್ಲ ಹಂತಗಳಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದಾರೆ.

ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದೆ ಬಡಾವಣೆಯ ಅಭಿವೃದ್ಧಿ ಸಾಧ್ಯವಿಲ್ಲ, ಆದರೂ, 2326 ಕೋಟಿ ರೂ. ಟೆಂಡರ್‌ ಕರೆದಿದ್ದಾರೆ. ಕೆಲವು ಗುತ್ತಿಗೆದಾರರಿಗೆ ಸಹಾಯ ಮಾಡಲು ಒಂದು ಟೆಂಡರ್ ನ್ನು ಏಳು ಟೆಂಡರ್‌ಗಳಾಗಿ ವಿಂಗಡಿಸಲಾಗಿದೆ. ಈ ಸಬಂಧ ಕರ್ನಾಟಕ ಲೋಕಾಯುಕ್ತರು ಕೂಡಲೇ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಂಡು ಅದರಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

Related Stories

No stories found.

Advertisement

X
Kannada Prabha
www.kannadaprabha.com