ಏಪ್ರಿಲ್ 20ರಿಂದ ಕೆ.ಆರ್‌.ಕ್ಷೇತ್ರಕ್ಕೆ ಕಬಿನಿಯಿಂದ 20 ಎಂಎಲ್‌ಡಿ ಹೆಚ್ಚುವರಿ ನೀರು: ರಾಮದಾಸ್‌

ಏಪ್ರಿಲ್ 20 ರಿಂದ ಕೃಷ್ಣರಾಜ ಕ್ಷೇತ್ರಕ್ಕೆ ಕಬಿನಿಯಿಂದ ಹೆಚ್ಚುವರಿಯಾಗಿ 20 ಎಂಎಲ್ ಡಿ ನೀರು ಹರಿದು ಬರಲಿದೆ ಎಂದು ಶಾಸಕ ಎಸ್ ಎ ರಾಮದಾಸ್ ಅವರು ಗುರುವಾರ ಹೇಳಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಏಪ್ರಿಲ್ 20 ರಿಂದ ಕೃಷ್ಣರಾಜ ಕ್ಷೇತ್ರಕ್ಕೆ ಕಬಿನಿಯಿಂದ ಹೆಚ್ಚುವರಿಯಾಗಿ 20 ಎಂಎಲ್ ಡಿ ನೀರು ಹರಿದು ಬರಲಿದೆ ಎಂದು ಶಾಸಕ ಎಸ್ ಎ ರಾಮದಾಸ್ ಅವರು ಗುರುವಾರ ಹೇಳಿದರು.

ತಮ್ಮ ಕ್ಷೇತ್ರವನ್ನು ಬೋರ್‌ವೆಲ್ ರಹಿತ ಕ್ಷೇತ್ರವನ್ನಾಗಿ ಮಾಡುವ ಘೋಷಣೆ ಮಾಡಿದ್ದ ರಾಮದಾಸ್ ಅವರು, ಕ್ಷೇತ್ರಕ್ಕೆ ಹೆಚ್ಚವರಿ ನೀರು ತರುವ ಕುರಿತು ಬಿದರಗೂಡು ಸಮೀಪ ಇರುವ ಕಬಿನಿ ಜಲಾ ಸಂಗ್ರಹಣಾ ಘಟಕ್ಕೆ ಭೇಟಿ ನೀಡಿ, ನಗರಪಾಲಿಕೆ ಆಯುಕ್ತರು, ವಾಣಿವಿಲಾಸ, ಜಲಮಂಡಳಿ, ವಿದ್ಯುತ್‌ ಇಲಾಖೆ, ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಚರ್ಚೆ ನಡೆಸಿದರು, ಇದೇ ವೇಳೆ ವಿವಿಧ ಕಾಮಗಾರಿಗಳನ್ನೂ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಸದ್ಯ ಬಿದರಗೂಡಿನಿಂದ 60 ಎಂಎಲ್‌ಡಿ ನೀರು ಹರಿದುಬರುತ್ತಿದ್ದು, ಕೆಆರ್‌ ಕ್ಷೇತ್ರವನ್ನು ಬೋರ್‌ವೆಲ್‌ ಮುಕ್ತ ಮಾಡಲು ಹೆಚ್ಚುವರಿಯಾಗಿ 20-30 ಎಂಎಲ್‌ಡಿ ನೀರು ಅಗತ್ಯವಿದೆ ಎಂದು ಹೇಳಿದರು.

ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನು ಕೆಲವೇ ತಿಂಗಳುಗಳಲ್ಲಿ 120 ಎಂಎಲ್ ಡಿ ನೀರು ಹೆಚ್ಚುವರಿಯಾಗಿ ಲಭ್ಯವಾಗಲಿದ್ದು, ನೀರಿನ ಹರಿವಿನ ಲೆಕ್ಕಾಚಾರ ಮಾಡಬೇಕಾದ ಹಿನ್ನೆಲೆಯಲ್ಲಿ ಮಾ. 27ರಂದು ಕ್ಷೇತ್ರದಲ್ಲಿ 8 ಗಂಟೆಗಳ ಕಾಲ ನೀರಿನ ಸೇವೆಯಲ್ಲಿ ವ್ಯತ್ಯಯ ಆಗಲಿದೆ. ಅಂದು ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com