ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೆರೆಯ ಹೂಳು ತೆಗೆಯಲು ಪರಿಸರ ಅನುಮತಿ ಪಡೆಯಲು ವಿಫಲ: ನೀರಾವರಿ ಇಲಾಖೆಗೆ 50 ಕೋಟಿ ರೂ. ದಂಡ ವಿಧಿಸಿದ ಎನ್‌ಜಿಟಿ!

ಕೆರೆಗಳಲ್ಲಿ ಹೂಳು ತೆಗೆಯಲು ಪರಿಸರ ಅನುಮತಿ ಪಡೆಯಲು ವಿಫಲವಾದ ರಾಜ್ಯ ನೀರಾವರಿ ಇಲಾಖೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ರೂ.50 ಕೋಟಿ ದಂಡ ವಿಧಿಸಿದೆ.

ಬೆಂಗಳೂರು: ಕೆರೆಗಳಲ್ಲಿ ಹೂಳು ತೆಗೆಯಲು ಪರಿಸರ ಅನುಮತಿ ಪಡೆಯಲು ವಿಫಲವಾದ ರಾಜ್ಯ ನೀರಾವರಿ ಇಲಾಖೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ರೂ.50 ಕೋಟಿ ದಂಡ ವಿಧಿಸಿದೆ.

ಮಂಗಳೂರಿನ ಫಲ್ಗುಣಿ ನದಿಯ ಅದ್ಯಪಾಡಿ ಅಣೆಕಟ್ಟು ಮತ್ತು ಬಂಟ್ವಾಳದ ನೇತ್ರಾವತಿ ನದಿಯ ಶಂಬೂರು ಅಣೆಕಟ್ಟಿನ ಹಿನ್ನೀರಿನಿಂದ 14,51,680 ಮೆಟ್ರಿಕ್ ಟನ್ ಮರಳನ್ನು ತೆಗೆಯುವ ಪ್ರಕರಣದ ವಿಚಾರಣೆಯನ್ನು ಎನ್‌ಜಿಟಿ ನಡೆಸುತ್ತಿದೆ.

ವಾಣಿಜ್ಯ ಉದ್ದೇಶಕ್ಕಾಗಿ ಜಲಮೂಲಗಳಿಂದ ಮರಳು, ಹೂಳನ್ನು ತೆಗೆದರೆ, ಅದಕ್ಕೆ ಪರಿಸರದ ಅನುಮತಿ ಅಗತ್ಯವಿದೆ ಎಂದು ಹಲವು ಬಾರಿ ಸೂಚಿಸಲಾಗಿದೆ. ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಹೇಳಿದೆ.

ಇದೇ ವೇಳೆ ಮೇ 5, 2020 ರಂದು ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದ ಮರಳು ನೀತಿಯನ್ನು ನ್ಯಾಯಮಂಡಳಿ ಗಮನಿಸಿತು.

ಪರಿಸರ ಸಚಿವಾಲಯದ ಸುಸ್ಥಿರ ಮರಳು ಗಣಿಗಾರಿಕೆ ಮಾರ್ಗಸೂಚಿಗಳು 2016, ಗಣಿಗಾರಿಕೆ ಕಾರ್ಯಾಚರಣೆಯ ಮೂಲಕ ಮರಳು ತೆಗೆಯುವುದನ್ನು ಒಳಗೊಂಡಿರುವ ಮರಳು-ಹೂಳೆತ್ತುವ ಕಾರ್ಯಗಳನ್ನು ವಿವರಿಸುತ್ತದೆ. ಹೂಳು ತೆಗೆದ ವಸ್ತುಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿದಾಗ ಪರಿಸರ ತೆರವು ಅಗತ್ಯ ಎಂದು ಎನ್‌ಜಿಟಿ ಪದೇ ಪದೇ ಆದೇಶ ನೀಡಿದ್ದರೂ, ಜಿಲ್ಲಾಧಿಕಾರಿಗಳ ಪ್ರಸ್ತುತ ಆದೇಶಗಳು ಸಂಪೂರ್ಣ ಉಲ್ಲಂಘನೆಯಾಗಿದೆ.

ಇಐಎ ಅಧಿಸೂಚನೆ 2006 ಪ್ರಕಾರ ನಿರ್ವಹಣೆ ಮತ್ತು ವಿಪತ್ತು ನಿರ್ವಹಣೆಯ ಉದ್ದೇಶಕ್ಕಾಗಿ ಮಾತ್ರ ಅಣೆಕಟ್ಟುಗಳ ಹೂಳೆತ್ತುವಿಕೆ ಮತ್ತು ಮರಳು ತೆಗೆಯಲು ವಿನಾಯಿತಿ ಇದೆ. ಇಲ್ಲಿ ವಾಣಿಜ್ಯ ಉದ್ದೇಶಕ್ಕೆ ಮರಳು ಗಣಿಗಾರಿಕೆ ನಡೆಸಬಾರದು. ವಾಣಿಜ್ಯ ಉದ್ದೇಶಕ್ಕೆ ಮರಳು ಗಣಿಗಾರಿಕೆ ನಡೆಸಿದರೆ, ಅದಕ್ಕೆ ಪರಿಸರ ಅನುಮತಿ ಪಡೆಯಬೇಕು ಎಂದು ಹೇಳಿದೆ. ಅಲ್ಲದೆ, ಜಲ ಮೂಲಗಳಿಂದ ಹೂಳೆತ್ತುವುದು/ಮರಳು ತೆಗೆಯುವ ಮೊದಲು ಪರಿಸರ ಅನುಮತಿ ಪಡೆಯುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮುಖ್ಯ ಕಾರ್ಯದರ್ಶಿಗಳಿದೆ ಆದೇಶಿಸಿತು.

Related Stories

No stories found.

Advertisement

X
Kannada Prabha
www.kannadaprabha.com