ನಿಗಮದ ಬದಲು ಉದ್ಯೋಗ ಮೀಸಲಾತಿ ನೀಡಿ: ಸರ್ಕಾರಕ್ಕೆ ಬಲಿಜ ಸಮುದಾಯ ಆಗ್ರಹ

ನಿಗಮದ ಬದಲು ನಮಗೆ ಉದ್ಯೋಗ ಮೀಸಲಾತಿ ನೀಡಿ ಎಂದು ಬಲಿಜ ಸಮುದಾಯದ ಸದಸ್ಯರು ಸರ್ಕಾರಕ್ಕೆ ಶುಕ್ರವಾರ ಒತ್ತಾಯಿಸಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಿಗಮದ ಬದಲು ನಮಗೆ ಉದ್ಯೋಗ ಮೀಸಲಾತಿ ನೀಡಿ ಎಂದು ಬಲಿಜ ಸಮುದಾಯದ ಸದಸ್ಯರು ಸರ್ಕಾರಕ್ಕೆ ಶುಕ್ರವಾರ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ, ಕರ್ನಾಟಕ ಕೆಪಿಸಿಸಿ ಉಪಾಧ್ಯಕ್ಷ ಎಂ.ಆರ್.ಸೀತಾರಾಂ ಅವರು, ಉದ್ಯೋಗ ಮೀಸಲಾತಿಗಾಗಿ ಸಮುದಾಯವು ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಬಿಜೆಪಿ ಘೋಷಿಸಿದ ಪ್ರತ್ಯೇಕ ಅಭಿವೃದ್ಧಿ ನಿಗಮದಿಂದ ಯಾವುದೇ ರೀತಿಯ ಪ್ರಯೋಜನವಾಗಲ್ಲ. ಇದೊಂದು ಚುನಾವಣಾ ಗಿಮಿಕ್ ಆಗಿದೆ. ಸಮುದಾಯವನ್ನು ಬಹುತೇಕ ಕಡೆಗಣಿಸಲಾಗಿದ್ದು, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿದ್ದಾರೆ ಎಂದು ಹೇಳಿದರು.

ಚಿನ್ನಪ್ಪ ರೆಡ್ಡಿ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗವು ಬಲಿಜ ಸಮುದಾಯವನ್ನು ಮೀಸಲು ವರ್ಗದಡಿ ಪರಿಗಣಿಸಿ ಶಿಕ್ಷಣ ಮತ್ತು ಉದ್ಯೋಗ ಸವಲತ್ತುಗಳಿಗೆ ಅರ್ಹರನ್ನಾಗಿಸಿತ್ತು. ಆದಾಗ್ಯೂ, 1994 ರಲ್ಲಿ, ರಾಜಕೀಯ ಒತ್ತಡದ ಮೇರೆಗೆ ಅವರನ್ನು ಮೀಸಲು ವರ್ಗ 2-A ನಿಂದ 3-A ಗೆ ವರ್ಗಾಯಿಸಲಾಯಿತು ಎಂದು ತಿಳಿಸಿದರು.

2011ರ ಜುಲೈ 16ರಂದು ಬಲಿಜ ಮತ್ತು ಇತರೆ ಉಪಜಾತಿಗಳನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ ‘ಪ್ರವರ್ಗ-2ಎ’ಗೆ ಸೇರಿಸಲಾಗಿದೆ. ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ‘ಪ್ರವರ್ಗ-3ಎ’ರಲ್ಲೇ ಮುಂದುವರಿಸಿರುವುದು ಶೋಚನೀಯ’ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com