ಕೊಪ್ಪಳ: ರೈಲ್ವೆ ನಿಲ್ದಾಣದಿಂದ ಅನಧಿಕೃತ 'ಪೂಜಾ ಸ್ಥಳ' ತೆರವಿಗೆ ಬಿಜೆಪಿ ಸಂಸದ ಸಂಗಣ್ಣ ಕರಡಿ ಒತ್ತಾಯ
ಕೊಪ್ಪಳ ರೈಲು ನಿಲ್ದಾಣದಲ್ಲಿ ಅನಧಿಕೃತ ಪೂಜಾ ಸ್ಥಳವನ್ನು ತೆರವುಗೊಳಿಸುವಂತೆ ಬಿಜೆಪಿ ಸಂಸದ ಸಂಗಣ್ಣ ಕರಡಿ ನೈರುತ್ಯ ರೈಲ್ವೆಗೆ ಪತ್ರ ಬರೆದಿದ್ದಾರೆ. ಕೊಪ್ಪಳ ವಲಯಕ್ಕೆ ಹೊಸ ರೈಲುಗಳನ್ನು ಮಂಜೂರು ಮಾಡುವಂತೆಯೂ ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಗೆ ಬರೆದಿರುವ ಪತ್ರದಲ್ಲಿ ಕರಡಿ ಸಂಗಣ್ಣ ಒತ್ತಾಯಿಸಿದ್ದಾರೆ.
Published: 25th March 2023 09:03 PM | Last Updated: 25th March 2023 09:05 PM | A+A A-

ರೈಲ್ವೆ ನಿಲ್ದಾಣದಲ್ಲಿನ ಅನಧಿಕೃತ ಪೂಜಾ ಸ್ಥಳ
ಕೊಪ್ಪಳ: ಕೊಪ್ಪಳ ರೈಲು ನಿಲ್ದಾಣದಲ್ಲಿ ಅನಧಿಕೃತ ಪೂಜಾ ಸ್ಥಳವನ್ನು ತೆರವುಗೊಳಿಸುವಂತೆ ಬಿಜೆಪಿ ಸಂಸದ ಸಂಗಣ್ಣ ಕರಡಿ ನೈರುತ್ಯ ರೈಲ್ವೆಗೆ ಪತ್ರ ಬರೆದಿದ್ದಾರೆ. ಕೊಪ್ಪಳ ವಲಯಕ್ಕೆ ಹೊಸ ರೈಲುಗಳನ್ನು ಮಂಜೂರು ಮಾಡುವಂತೆಯೂ ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಗೆ ಬರೆದಿರುವ ಪತ್ರದಲ್ಲಿ ಕರಡಿ ಸಂಗಣ್ಣ ಒತ್ತಾಯಿಸಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ತಲೆ ಎತ್ತಿರುವ ಪೂಜಾ ಸ್ಥಳ ತೆರವಿನ ಬಗ್ಗೆ ದೂರು ದಾಖಲಿಸಿದ್ದರೂ ರೈಲ್ವೆ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ, ಅದನ್ನೂ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದಲ್ಲದೇ ಬಾಗ್ಯನಗರ ಪ್ರವೇಶದ ದ್ವಾರದ 3ನೇ ನಂಬರ್ ಪ್ಲಾಟ್ ಫಾರಂನಲ್ಲಿ ವಿಶ್ರಾಂತಿ ಹಾಲ್, ಟಿಕೆಟ್ ಕೌಂಟರ್ ನಿರ್ಮಿಸಬೇಕು, ಕರಟಗಿ ನಿಲ್ದಾಣದಲ್ಲಿ ಕುಡಿಯುವ ನೀರಿನ ಸೌಲಭ್ಯವನ್ನು ಹೆಚ್ಚಿಸಬೇಕು, ಗೂಡ್ಸ್ ಶೆಡ್ , ರಸ್ತೆ ನಿರ್ಮಾಣ ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಪತ್ರದಲ್ಲಿ ತಿಳಿಸಿದ್ದಾರೆ.
ಈ ವಿಚಾರವನ್ನು ರೈಲ್ವೆ ಆಡಳಿತದ ಗಮನಕ್ಕೆ ತರಲಾಗುವುದು, ತಮ್ಮ ಮನವಿಯನ್ನು ಪರಿಗಣಿಸುವಂತೆ ವೈಯಕ್ತಿಕವಾಗಿ ಮಾತುಕತೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. ಕೊಪ್ಪಳ ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂ ನಂಬರ್ 1ರಲ್ಲಿ ಇದಕ್ಕಿದ್ದಂತೆ ಪೂಜಾ ಸ್ಥಳವೊಂದು ತಲೆ ಎತಿತ್ತು. ಕೆಲವು ದಿನಗಳಲ್ಲಿ ಅಲ್ಲಿ ಕೆಲವರು ಪೂಜೆ ಸಲ್ಲಿಸುವುದು ನೋಡಿ ಪ್ರಶ್ನಿಸಿದಾಗ, ತಾವು ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿದಿನ ಪೂಜಾ ಸ್ಥಳಕ್ಕೆ ತೆರಳಲು ಸಾಧ್ಯವಾಗದ ಕಾರಣ ಇಲ್ಲಿಯೇ ಪೂಜಾ ಸ್ಥಳ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ತದನಂತರ ಪೂಜಾ ಸ್ಥಳಕ್ಕೆ ಬಣ್ಣ ಬಳಿದು ಹೆಚ್ಚಿನ ಜನರು ಪೂಜೆ ಸಲ್ಲಿಸಲು ಶುರು ಮಾಡಿದರು. ಕೆಲವು ವೇಳೆ ಪ್ರಯಾಣಿಕರು ಕೂಡಾ ಪೂಜೆ ಸಲ್ಲಿಸುತ್ತಾರೆ. ಈ ವಿಚಾರವನ್ನು ಸ್ಥಳೀಯ ರೈಲ್ವೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಇದೀಗ ಸಂಸದರು ಈ ವಿಚಾರದ ಬಗ್ಗೆ ಪ್ರಶ್ನಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ತಿಳಿಸಿದರು.
ಈ ವಿಚಾರದ ಬಗ್ಗೆ ಗಮನ ಹರಿಸಲಾಗಿದೆ. ಈ ಸಮಸ್ಯೆಯನ್ನು ಶೀಘ್ರದಲ್ಲಿಯೇ ಪರಿಹರಿಸಲಾಗುವುದು ಎಂದು ನೈರುತ್ಯ ರೈಲ್ವೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.