ಬೆಂಗಳೂರು: 90 ಕೋಟಿ ರೂ. ಮೌಲ್ಯದ ಮಾದಕ ವಸ್ತು ನಾಶ

ಮಾದಕ ದ್ರವ್ಯ ಕಳ್ಳಸಾಗಾಣೆ ಮತ್ತು ರಾಷ್ಟ್ರೀಯ ಭದ್ರತಾ ಸಮಾವೇಶದ ಅಂಗವಾಗಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಬರೋಬ್ಬರಿ 90 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ದಾಬಸ್ ಪೇಟೆ ಕೈಗಾರಿಕಾ ಪ್ರದೇಶದ ಸ್ಥಳದಲ್ಲಿ ನಾಶಪಡಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಾದಕ ದ್ರವ್ಯ ಕಳ್ಳಸಾಗಾಣೆ ಮತ್ತು ರಾಷ್ಟ್ರೀಯ ಭದ್ರತಾ ಸಮಾವೇಶದ ಅಂಗವಾಗಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಬರೋಬ್ಬರಿ 90 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ದಾಬಸ್ ಪೇಟೆ ಕೈಗಾರಿಕಾ ಪ್ರದೇಶದ ಸ್ಥಳದಲ್ಲಿ ನಾಶಪಡಿಸಲಾಗಿದೆ.

ನಾಶಪಡಿಸಿದ ಮಾದಕವಸ್ತುಗಳನ್ನು ಅಕ್ಟೋಬರ್ 2022 ಮತ್ತು ಮಾರ್ಚ್ 2023 ರ ನಡುವೆ ನಗರದಾದ್ಯಂತ ಪೊಲೀಸ್ ಠಾಣಾ ಮಿತಿಗಳಲ್ಲಿ ವಶಪಡಿಸಿಕೊಳ್ಳಲಾಗಿತ್ತು ಎಂದು ತಿಳಿದುಬಂದಿದೆ.

ಈ ಮಾದಕ ವಸ್ತುಗಳನ್ನು ಸುಪ್ರೀಂಕೋರ್ಟ್ ಮತ್ತು ಔಷಧ ವಿಲೇವಾರಿ ಸಮಿತಿಯ ನಿರ್ದೇಶನದಂತೆ ದಾಬಸ್‌ಪೇಟೆಯ ನಿಗದಿತ ಸ್ಥಳದಲ್ಲಿ ನಾಶಪಡಿಸಲಾಗಿದೆ.

4,110 ಕೆಜಿ ಗಾಂಜಾ, 11 ಕೆಜಿ ಗಾಂಜಾ ಆಯಿಲ್, 22 ಕೆಜಿ ಆಶಿಷ್ ಆಯಿಲ್, 8 ಕೆಜಿ ಅಫೀಮ್, 5.5 ಕೆಜಿ ಚರಸ್, 62.7 ಕೆಜಿ ಎಂಡಿಎಂಎ ಪೌಡರ್, 8073 ಟ್ಯಾಬ್ಲೆಟ್ ಸೇರಿದಂತೆ 90 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಾಯುಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಸಮಕ್ಷಮದಲ್ಲಿ ನಿಗದಿಯಾಗಿದ್ದ ದಾಬಸ್‍ಪೇಟೆಯ ಕೈಗಾರಿಕಾ ಸ್ಥಳದಲ್ಲಿ ದಹನಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com