ಕೆಂಪೇಗೌಡರು ಮತ್ತು ಬಸವೇಶ್ವರರ ಆದರ್ಶಗಳ ಆಧಾರದಲ್ಲಿ ನಾವು ಆಡಳಿತ ಮಾಡುತ್ತಿದ್ದೇವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌

ನಾಡಪ್ರಭು ಕೇಂಪೆಗೌಡರು ಮತ್ತು ಬಸವೇಶ್ವರರ ಆದರ್ಶಗಳ ಆಧಾರದಲ್ಲಿ ನಾವು ಆಡಳಿತ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಹೇಳಿದರು.
ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮಿತ್ ಶಾ, ಸಿಎಂ ಬೊಮ್ಮಾಯಿ
ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮಿತ್ ಶಾ, ಸಿಎಂ ಬೊಮ್ಮಾಯಿ

ಬೆಂಗಳೂರು: ನಾಡಪ್ರಭು ಕೇಂಪೆಗೌಡರು ಮತ್ತು ಬಸವೇಶ್ವರರ ಆದರ್ಶಗಳ ಆಧಾರದಲ್ಲಿ ನಾವು ಆಡಳಿತ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಹೇಳಿದರು.

ಇಂದು ವಿಧಾನಸೌಧದ ಮುಂದೆ ಪ್ರತಿಮೆಗಳ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ನಾಡಿನ ಶ್ರೇಷ್ಠ ಆಡಳಿತಾಗಾರರು, ತತ್ವಜ್ಞಾನಿಗಳು, ಕಾಯಕದ ಮಹತ್ವ ತಿಳಿಸಿದವರು ಬಸವೇಶ್ವರರು. ಯಾವ ಬೆಂಗಳೂರಿನಲ್ಲಿ ಆಡಳಿತ ನಡೆಯುತ್ತದೆ. ಯಾವ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದೆ. ಯಾವ ನಗರ ಸಿಲಿಕಾನ್ ಸಿಟಿ ಅಂತ ಹೇಳಿದ್ದಾರೆ, ಅಂತ ನಗರದ ವಿದಾನಸೌಧದ ಮುಂದೆ ಈ ಇಬ್ಬರು ನಾಯಕರ ಪ್ರತಿಮೆ ಅನಾವರಣ ಬಹಳ ದಿನಗಳ ಹಿಂದೆ ಆಗಬೇಕಿತ್ತು. ಅದಕ್ಕೆ ನಾನು ಯಾರನ್ನು ದೂಷಿಸುವುದಿಲ್ಲ ಎಂದರು.

ಪ್ರಧಾನಿಯವರು ವಿಶ್ವಕ್ಕೆ ಬಸವೇಶ್ವರರ ಅನುಭವ ಮಂಟಪದ ಮೂಲಕ  ಸಮಾಜಕ್ಕೆ ಸಮಾನತೆಯ ಸಾರ ಸಾರಿದ್ದಾರೆ. ಬಸವೇಶ್ವರರ ಪ್ರತಿಮೆ ವಿಧಾನಸೌಧದ ಮುಂದೆ ಅಷ್ಟೆ ಅಲ್ಲ, ಹೈಕೋರ್ಟ್ ಎದುರಿಗಿದೆ. ನಾಡ ಪ್ರಭು ‌ಕೆಂಪೇಗೌಡರು ಯಾವುದೇ ನದಿ ಇಲ್ಲದ ಪ್ರದೇಶದಲ್ಲಿ ನಗರ ನಿರ್ಮಾಣ ಮಾಡಿದ್ದಾರೆ. ಎಲ್ಲ ಸಮುದಾಯಗಳಿಗೆ ಮಾರುಕಟ್ಟೆ ನಿರ್ಮಿಸಿ, ನಿಜವಾಗಿ ಬಸವಣ್ಣನವರ ಆದರ್ಶಗಳನ್ನು ಜಾರಿಗೆ ತಂದವರು ಕೆಂಪೇಗೌಡರು ಎಂದರು.

ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಇಡೀ ದೇಶವನ್ನು ಮತ್ತೆ ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ನಮ್ಮ ರಾಜ್ಯ, ಆಂಧ್ರಪ್ರದೇಶ, ಓರಿಸ್ಸಾಗಳಲ್ಲಿ ನಕ್ಸಲರ ಹಾವಳಿ ಇತ್ತು. ಅಲ್ಲದೇ ಅನೇಕ‌ ವಿಚಿದ್ರಕಾರಿ ಶಕ್ತಿಗಳನ್ನು ದಮನ ಮಾಡಿ ಇಡಿ ದೇಶವನ್ನು ಅಭಿವೃದ್ಧಿ ಪತದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಾ. ನಿರ್ಮಾಲಾನಂದ ಸ್ವಾಮೀಜಿ, ತುಮಕೂರು ಶಿವಕುಮಾರ ಸ್ವಾಮೀಜಿ, ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ಸಚಿವರಾದ ಆರ್. ಅಶೋಕ, ಗೋವಿಂದ ಕಾರಜೋಳ, ಮುರಗೇಶ ನಿರಾಣಿ, ಸಿ.ಸಿ ಪಾಟೀಲ, ಅಶ್ವಥ್ ನಾರಾಯಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com