ಮತ ಎಣಿಕೆಗೆ 2 ದಿನಾ ಬೇಕಾ? ಎಂದಿದ್ದಕ್ಕೆ ಅದೆಷ್ಟು ಕಾಮೆಂಟ್; ಕುದುರೆ ವ್ಯಾಪಾರದ ಬಗ್ಗೆ ಮಾತಾಡಿ ನೋಡೋಣ ಎಂದ ಉಪೇಂದ್ರ
ಮತದಾನ ಹಾಗೂ ಮತ ಎಣಿಕೆಗೆ 2 ದಿನಗಳ ಅಂತರ ಇರುವ ಬಗ್ಗೆ ನಟ ಉಪೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಬರೆದಿರುವುದು ವ್ಯಾಪಕ ಚರ್ಚೆಯಾಗುತ್ತಿದೆ.
Published: 29th March 2023 06:28 PM | Last Updated: 29th March 2023 07:48 PM | A+A A-

ಉಪೇಂದ್ರ
ಬೆಂಗಳೂರು: ಮತದಾನ ಹಾಗೂ ಮತ ಎಣಿಕೆಗೆ 2 ದಿನಗಳ ಅಂತರ ಇರುವ ಬಗ್ಗೆ ನಟ ಉಪೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಬರೆದಿರುವುದು ವ್ಯಾಪಕ ಚರ್ಚೆಯಾಗುತ್ತಿದೆ.
ನಟ ಉಪೇಂದ್ರ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಸಾಕಷ್ಟು ಮಂದಿ, ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಕ್ರಿಯೆ ಇರುವುದೇ ಹೀಗೆ... ಮತದಾನದ ಬಳಿಕ ಮತ ಎಣಿಕೆಗೆ ಅಷ್ಟು ಸಮಯ ಅಗತ್ಯವಿದೆ ಎಂದು ಹೇಳಿದ್ದರೆ, ಇನ್ನೂ ಕೆಲವು ಮಂದಿ ಟೀಕಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ: ಒಂದೇ ಹಂತದಲ್ಲಿ ಮೇ 10 ರಂದು ಮತದಾನ, ಮೇ 13ಕ್ಕೆ ಫಲಿತಾಂಶ
ಡಿಜಿಟಲ್ ವೋಟಿಂಗ್ ಅಲ್ವಾ ?
— Upendra (@nimmaupendra) March 29, 2023
ಮತ ಎಣಿಕೆಗೆ 2 ದಿನಾ ಬೇಕಾ ? ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ….
ಅಬ್ಬಬ್ಬಾ ಏನು ಕಾಮೆಂಟ್ಸ್ ಗಳು ?!
ವಾರೆ ವಾಹ್ …
ವ್ಯಾಪಾರೀ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ ಮಾಡಿ ನೋಡೋಣ ಅತಿ ಬುದ್ವಂತ್ರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂ ಬಾಲಕರು….
ತಮ್ಮ ಪೋಸ್ಟ್ ಗೆ ಬರುತ್ತಿರುವ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪೇಂದ್ರ, 2 ದಿನ ಬೇಕಾ ? ಗೊತ್ತಿಲ್ಲ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೆಕ್ಕೇ ಏನು ಕಾಮೆಂಟ್ ಗಳು, ಇದೇ ರೀತಿ ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ ಮಾಡಿ ನೋಡೋಣ ಎಂದು ಬರೆದಿದ್ದಾರೆ.