ಅಸೆಂಬ್ಲಿ ಚುನಾವಣೆ: ಆದಿವಾಸಿ ಬುಡಕಟ್ಟು ಸಮುದಾಯದವರಿಗೆ 40 ಜನಾಂಗೀಯ ಮತಗಟ್ಟೆಗಳ ಸ್ಥಾಪನೆ

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಸಮುದಾಯದವರಿಗಾಗಿ 40 ಜನಾಂಗೀಯ (ಎಥ್ನಿಕ್ ) ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ.  ರಾಜ್ಯದಲ್ಲಿ ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಸಮುದಾಯದವರಿಗಾಗಿ 40 ಜನಾಂಗೀಯ (ಎಥ್ನಿಕ್ ) ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ರಾಜ್ಯದಲ್ಲಿ ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

"ಈ ಬೂತ್‌ಗಳ ಸ್ಥಳ, ನೋಟ ಮತ್ತು ಭಾವನೆ ವಿಭಿನ್ನವಾಗಿರುತ್ತದೆ. ಇದು ಬುಡಕಟ್ಟು ಜನಾಂಗದವರಿಗೆ ಹೆಚ್ಚು ಸಂದರ್ಭೋಚಿತವಾಗಿರುತ್ತದೆ. ಆದ್ದರಿಂದ ಅವರಲ್ಲಿ ಮನೆಯಲ್ಲಿರುವ ಭಾವನೆ ಮೂಡಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಜನಾಂಗೀಯ ಮತಗಟ್ಟೆ ಸ್ಥಾಪನೆ ಕಾರ್ಯಕ್ರಮದ ಮೂಲಕ ಬುಡಕಟ್ಟು ಸಮುದಾಯದವರು ಮನೆಯಿಂದ ಹೊರಗೆ ಬಂದು ಮತದಾನ ಮಾಡುವತ್ತಾ ಗಮನ ಕೇಂದ್ರೀಕರಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಹೇಳಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com