ನೀತಿ ಸಂಹಿತೆ ಜಾರಿ: ಬೃಹತ್ ನೀರಾವರಿ ಯೋಜನೆ ಉದ್ಘಾಟನೆ ರದ್ದು; ಕೊಪ್ಪಳ ಜಿಲ್ಲಾಡಳಿತಕ್ಕೆ 50 ಲಕ್ಷ ರೂ. ನಷ್ಟ!

ರಾಜ್ಯ ವಿಧಾನಸಭೆ ಚುನಾವಣೆಗೆ ಕೇಂದ್ರು ಚುನಾವಣಾ ಆಯೋಗ ಮತದಾನದ ದಿನಾಂಕ ಪ್ರಕಟಿಸಿದ ನಂತರ ಕರ್ನಾಟಕದಲ್ಲಿ ಮಾದರಿ ನೀತಿ ಸಂಹಿತೆ (ಎಂಸಿಸಿ) ಅನುಷ್ಠಾನಗೊಂಡಿದ್ದು, ಕೊಪ್ಪಳ ಜಿಲ್ಲೆಯ ಗ್ರಾಮಸ್ಥರಿಗೆ ಬಹುಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಉದ್ಘಾಟನೆ ರದ್ದಾಗಿದೆ.
ಸಿಎಂ ಕಾರ್ಯಕ್ರಮಕ್ಕಾಗಿ ಸಜ್ಜುಗೊಂಡಿದ್ದ ವೇದಿಕೆ
ಸಿಎಂ ಕಾರ್ಯಕ್ರಮಕ್ಕಾಗಿ ಸಜ್ಜುಗೊಂಡಿದ್ದ ವೇದಿಕೆ

ಕೊಪ್ಪಳ: ರಾಜ್ಯ ವಿಧಾನಸಭೆ ಚುನಾವಣೆಗೆ ಕೇಂದ್ರು ಚುನಾವಣಾ ಆಯೋಗ ಮತದಾನದ ದಿನಾಂಕ ಪ್ರಕಟಿಸಿದ ನಂತರ ಕರ್ನಾಟಕದಲ್ಲಿ ಮಾದರಿ ನೀತಿ ಸಂಹಿತೆ (ಎಂಸಿಸಿ) ಅನುಷ್ಠಾನಗೊಂಡಿದ್ದು, ಕೊಪ್ಪಳ ಜಿಲ್ಲೆಯ ಗ್ರಾಮಸ್ಥರಿಗೆ ಬಹುಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಉದ್ಘಾಟನೆ ರದ್ದಾಗಿದೆ.

ಯಲಬುರ್ಗಾ ತಾಲೂಕಿನ 20 ಗ್ರಾಮಗಳಿಗೆ ಕೃಷ್ಣಾ ನದಿಯಿಂದ ಕುಡಿಯುವ ನೀರು ಒದಗಿಸುವ ಉದ್ದೇಶದ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಚಾಲನೆ ನೀಡಬೇಕಿತ್ತು. ಆದರೆ ನೀತಿ ಸಂಹಿತೆ ಜಾರಿಗೆ ಬಂದ ನಂತರ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು. ಕಾರ್ಯಕ್ರಮ ರದ್ದು ಮಾಡಿದ್ದರಿಂದ ಜಿಲ್ಲಾಡಳಿತಕ್ಕೂ ನಷ್ಟವಾಗಿದೆ.

ಕಾರ್ಯಕ್ರಮಕ್ಕಾಗಿ ಸ್ಥಳ ಮತ್ತು ವೇದಿಕೆ ಸಿದ್ಧಪಡಿಸಿದ್ದಕ್ಕಾಗಿ ಗುತ್ತಿಗೆದಾರರಿಗೆ ಹೆಚ್ಚಿನ ಹಣ ಪಾವತಿಸಬೇಕಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮೂಲಗಳು  ದೃಢಪಡಿಸಿವೆ.

ಚುನಾವಣಾ ಆಯೋಗವು ಮತದಾನದ ದಿನಾಂಕವನ್ನು ಘೋಷಿಸಿದ್ದರಿಂದ, ಕಾರ್ಯಕ್ರಮಕ್ಕೆ ಬರದಂತೆ ಆಹ್ವಾನಿತರಿಗೆ ಜಿಲ್ಲಾಡಳಿತ ತಿಳಿಸಬೇಕಾಗಿತ್ತು. ಕೊಪ್ಪಳ, ಬಳ್ಳಾರಿ, ಹೊಸಪೇಟೆಯ ವಿವಿಧೆಡೆಯಿಂದ ಬರಲು ಮುಂದಾಗಿದ್ದ ಬಿಜೆಪಿ ಕಾರ್ಯಕರ್ತರು ಸ್ಥಳೀಯ ಮುಖಂಡರ ಸೂಚನೆ ಮೇರೆಗೆ ಪ್ರವಾಸ ರದ್ದುಗೊಳಿಸಬೇಕಾಯಿತು.

ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳಲು ನಾವು ಕಾಯುತ್ತಿದ್ದೆವು. ಯೋಜನೆ ಕಾಮಗಾರಿ ಆರಂಭಿಸಲು ಸರ್ಕಾರ ಕನಿಷ್ಠ ಉದ್ಘಾಟನೆಯಾದರೂ ಮಾಡಬೇಕಿತ್ತು. ಈಗ ಮಳೆಗಾಲ ಆರಂಭವಾದರೆ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಮುಂದಿನ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ಹಾಗೂ ಮುಂಗಾರು ಹಂಗಾಮು ಮುಗಿಯುವವರೆಗೆ ಕಾಯಬೇಕು. ಪ್ರತಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗುತ್ತಿದೆ. ಯಲಬುರ್ಗಾ ತಾಲೂಕಿನಲ್ಲಿ ಕನಿಷ್ಠ 20 ಗ್ರಾಮಗಳಿದ್ದು, ಏತ ನೀರಾವರಿ ಯೋಜನೆ ಕಾರ್ಯಾರಂಭಗೊಂಡ ನಂತರ ಪ್ರಯೋಜನವಾಗಲಿದೆ ಎಂದು ಹಗೇದಾಳ ಗ್ರಾಮಸ್ಥರು ಹೇಳಿದರು.

ಹೆಚ್ಚಿನ ರೈತರು ಈಗ ಬೋರ್‌ವೆಲ್‌ಗಳನ್ನು ಹೊಂದಿದ್ದಾರೆ, ಅವರು ಹೇಗಾದರೂ ನಿರ್ವಹಿಸುತ್ತಿದ್ದಾರೆ. ಆದರೆ ವರ್ಷದಿಂದ ವರ್ಷಕ್ಕೆ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚುತ್ತಿದೆ ಮತ್ತು ನಂತರದ ಸರ್ಕಾರಗಳು ಯೋಜನೆಯನ್ನು ವಿಳಂಬಗೊಳ್ಳುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com