ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಬಿಜೆಪಿ ನಾಯಕನ ವ್ಯಂಗ್ಯ ಮಾತು; ಆಡಿಯೋ ಕ್ಲಿಪ್ ವೈರಲ್!
ರಾಯಚೂರು ಜಿಲ್ಲೆಯ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿರುವ ಆಡಿಯೋ ಕ್ಲಿಪ್ ಶುಕ್ರವಾರ ರಾಜ್ಯದಾದ್ಯಂತ ವೈರಲ್ ಆಗಿದೆ.
Published: 31st March 2023 01:02 PM | Last Updated: 31st March 2023 02:52 PM | A+A A-

ಶಿವರಾಜ್ ಪಾಟೀಲ್ - ನರೇಂದ್ರ ಮೋದಿ
ರಾಯಚೂರು: ರಾಯಚೂರು ಜಿಲ್ಲೆಯ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿರುವ ಆಡಿಯೋ ಕ್ಲಿಪ್ ಶುಕ್ರವಾರ ರಾಜ್ಯದಾದ್ಯಂತ ವೈರಲ್ ಆಗಿದೆ.
ಕ್ಲಿಪ್‌ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಾರೊಬ್ಬರೂ ತಮ್ಮನ್ನು ಪ್ರಶ್ನಿಸಲು ಸಾಧ್ಯವಿಲ್ಲ ಮತ್ತು ತಾನು ಯಾವುದೇ ಗೂಂಡಾಗಳ ಮಾತನ್ನು ಕೇಳುವುದಿಲ್ಲ ಎಂದು ಪಾಟೀಲ್ ಹೇಳಿದ್ದಾರೆ.
'ಮೋದಿ ಇಲ್ಲ, ಪಾದಿಯೂ ಇಲ್ಲ. ಇರೋದು ನಾನೊಬ್ಬನೇ ಶಿವರಾಜ್ ಪಾಟೀಲ್, ನಾನೇ ದೇವ್ರು, ನಾನಿದ್ರೆ ಜಗತ್ತು. ನಾನು ಯಾವುದೇ ವ್ಯಕ್ತಿಗಳ ಮಾತನ್ನು ಕೇಳುವುದಿಲ್ಲ. ಮೋದಿಯವರ ರೈಟ್ ಹ್ಯಾಂಡ್ ಬಗ್ಗೆನೂ ನಾನೇನೂ ತಲೆಕೆಡಿಸಿಕೊಂಡಿಲ್ಲ. ನನಗೆ ಯಾವುದೇ ಬಲ ಅಥವಾ ಎಡ ಇಲ್ಲ. ನನ್ನ ಕೈಯಿ, ನನ್ನ ಕಾಲು. ನಾನು ಸಿಂಗಲ್ ಮ್ಯಾನ್ ಆರ್ಮಿ. ನಾನೇ ಮೋದಿ, ನಾನೇ ಟ್ರಂಪ್. ನನ್ನೊಂದಿಗೆ ಯಾರೂ ಆಟವಾಡಲು ಸಾಧ್ಯವಿಲ್ಲ' ಎಂದು 3 ನಿಮಿಷಗಳ ಕ್ಲಿಪ್‌ನಲ್ಲಿ ಶಾಸಕರು ಹೇಳುತ್ತಿರುವುದು ಕೇಳಿಬರುತ್ತಿದೆ.
An alleged audio clip of #ShivarajPatil, the #BJP MLA in Karnataka's Raichur district, talking about PM #NarendraModi went viral across the state.
— IANS (@ians_india) March 31, 2023
In the clip, Patil alleges that no one, including the Prime Minister, can question him and he will not listen to any stooge. pic.twitter.com/1Ve6MycDIu
'ನಾನು ಚುನಾವಣೆಯಲ್ಲಿ ಸೋತರೂ ಗೆದ್ದರೂ ಪರವಾಗಿಲ್ಲ. ಮಲ್ಕೊಂಡ್ರು ಪರವಾಗಿಲ್ಲ, ಎದ್ದು ಕುಳಿತರೂ ಪರವಾಗಿಲ್ಲ. ಜಗತ್ತಿನಲ್ಲಿ ಚಿಂತೆಯಿಲ್ಲದ ವ್ಯಕ್ತಿ ಯಾರಾದರೂ ಇದ್ದರೆ ಅದು ಶಿವರಾಜ್ ಪಾಟೀಲ್. ನನ್ನನ್ನು ಯಾರೂ ಪ್ರಶ್ನಿಸುವಂತಿಲ್ಲ. ನಾನು ದೇವರಂತೆ, ಪ್ರತಿದಿನ ನನ್ನ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆಯಲು ನನ್ನ ಹುಡುಗರನ್ನು ಕೇಳುತ್ತೇನೆ' ಎಂದು ಅವರು ಹೇಳುತ್ತಾರೆ.
ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಈ ಬೆಳವಣಿಗೆ ರಾಜ್ಯದ ಆಡಳಿತ ಪಕ್ಷಕ್ಕೆ ಮುಜುಗರ ತಂದಿದೆ ಮತ್ತು ಇದು ಈಗಾಗಲೇ ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
ಈ ಆಡಿಯೋ ಕ್ಲಿಪ್ ಬಗ್ಗೆ ಪಾಟೀಲ್ ಇದುವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ.