ವಿಧಾನಸಭೆ ಚುನಾವಣೆ: ಪ್ರಯಾಣಿಕರ ಅನುಕೂಲಕ್ಕೆ ಮೇ 10ಕ್ಕೆ ಮೆಟ್ರೊ ರೈಲು ಸಂಚಾರ ಅವಧಿ ವಿಸ್ತರಣೆ
ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಪ್ರಯುಕ್ತ ಮೇ 10ರಂದು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಮ್ಮ ಮೆಟ್ರೋ ರೈಲು ಸಂಚಾರದ ಅವಧಿಯನ್ನು ವಿಸ್ತರಿಸಿ ಪ್ರಕಟಣೆ ಹೊರಡಿಸಿದೆ.
Published: 08th May 2023 03:51 PM | Last Updated: 08th May 2023 08:47 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಪ್ರಯುಕ್ತ ಮೇ 10ರಂದು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಮ್ಮ ಮೆಟ್ರೋ ರೈಲು ಸಂಚಾರದ ಅವಧಿಯನ್ನು ವಿಸ್ತರಿಸಿ ಪ್ರಕಟಣೆ ಹೊರಡಿಸಿದೆ.
ಮತದಾನದ ಸಲುವಾಗಿ ಹೆಚ್ಚು ಜನ ಓಡಾಡುವವರು ಇರುತ್ತಾರೆ. ಈ ಕಾರಣದಿಂದ ಬೆಂಗಳೂರು ಮೆಟ್ರೋ ರೈಲು ನಿಗಮವು ಅಂದು ಮಧ್ಯರಾತ್ರಿವರೆಗೆ ಮೆಟ್ರೋ ರೈಲು ಸೇವೆ ಸಿಗುವಂತೆ ಸಮಯವನ್ನು ವಿಸ್ತರಣೆ ಮಾಡಿದೆ.
ನಮ್ಮ ಮೆಟ್ರೋದ ಟರ್ಮಿನಲ್ ನಿಲ್ದಾಣಗಳಾದ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ರೇಷ್ಮೆ ಸಂಸ್ಥೆ, ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ಗಳಿಂದ ಕೊನೆಯ ರೈಲು ಓಡಾಡಲಿವೆ. ಈ ಮಾರ್ಗದ ರೈಲುಗಳು ಗುರುವಾರ ಮೇ 11 ರಂದು ಬೆಳಗ್ಗೆ 5 ಗಂಟೆಗೆ ಹೊರಡಲಿದೆ.
ನಾಡಪ್ರಭು ಕೆಂಪೇಗೌಡ ನಿಲ್ದಾಣ ಮಜೆಸ್ಟಿಕ್‌ನಿಂದ ಕೊನೆಯ ರೈಲಿನ ಸೇವೆಯು ಮೇ 11ರಂದು ಗುರುವಾರ ಮಧ್ಯರಾತ್ರಿ 12.35ಕ್ಕೆ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ರೇಷ್ಮೆ, ಸಂಸ್ಥೆಯಿಂದ ಹೊರಡಲಿದೆ ಎಂದು ನಿಗಮ ತಿಳಿಸಿದೆ.