ಮತಗಟ್ಟೆಯಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ: ಬಳ್ಳಾರಿಯಲ್ಲೊಂದು ಅಪರೂಪದ ಘಟನೆ!
16ನೇ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಮತದಾನ ಮುಕ್ತಾಯವಾಗಲು ಇನ್ನು ಕೆಲವೇ ನಿಮಿಷಗಳು ಬಾಕಿ ಉಳಿದಿವೆ. ಇಂದು ಮತದಾನ ವೇಳೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕುತೂಹಲಕಾರಿ ಘಟನೆಗಳು ನಡೆದಿದೆ.
Published: 10th May 2023 05:21 PM | Last Updated: 10th May 2023 05:36 PM | A+A A-

ಶಿಶುವಿಗೆ ಜನ್ಮನೀಡಿದ ಮಹಿಳೆ ಜೊತೆ ಸಿಬ್ಬಂದಿ
ಕೊರ್ಲಗುಂಡಿ(ಬಳ್ಳಾರಿ): 16ನೇ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಮತದಾನ ಮುಕ್ತಾಯವಾಗಲು ಇನ್ನು ಕೆಲವೇ ನಿಮಿಷಗಳು ಬಾಕಿ ಉಳಿದಿವೆ. ಇಂದು ಮತದಾನ ವೇಳೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕುತೂಹಲಕಾರಿ ಘಟನೆಗಳು ನಡೆದಿದೆ.
ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲ್ಲೂಕಿನ ಕೊರ್ಲಗುಂಡಿ ಎಂಬಲ್ಲಿ ಅಪರೂಪದ ಘಟನೆ ಸಾಕ್ಷಿಯಾಯಿತು. 23 ವರ್ಷದ ತುಂಬು ಗರ್ಭಿಣಿ ಮತಗಟ್ಟೆಯಲ್ಲಿ ಶಿಶುವಿಗೆ ಜನ್ಮನೀಡಿದ ಘಟನೆ ನಡೆದಿದೆ.
ಗರ್ಭಿಣಿಗೆ ಮತಗಟ್ಟೆ ಬಳಿ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಾಗ ಅಲ್ಲಿದ್ದ ಮಹಿಳಾ ಸಿಬ್ಬಂದಿ ಮತ್ತು ಮಹಿಳಾ ಮತದಾರರು ನೆರವಿಗೆ ಬಂದಿದ್ದಾರೆ. ಮಹಿಳೆಗೆ ಸುಖ ಪ್ರಸವ ಮಾಡಿಸಿದ್ದಾರೆ.
#KarnatakaPollsWithTNIE
— TNIE Karnataka (@XpressBengaluru) May 10, 2023
Rare incident reported in #Kurlagindi village of #Ballari.
A 23 year-old woman gave birth to baby in polling booth. Female officials and women voters helped to delivery the baby.
Reports @KiranTNIE1 @NewIndianXpress pic.twitter.com/SmWMPhew0g