ಕರ್ನಾಟಕ ವಿಧಾನಸಭೆ ಚುನಾವಣೆ: ಸಂಜೆ 5 ಗಂಟೆವರೆಗೆ ಶೇ 65.69 ರಷ್ಟು ಮತದಾನ, ಮತ್ತೆ ರಾಮನಗರದಲ್ಲಿ ಅತಿಹೆಚ್ಚು!
224 ವಿಧಾನಸಭಾ ಕ್ಷೇತ್ರಗಳಿಗೆ ರಾಜ್ಯದಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯುತ್ತಿದ್ದು, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಾಗಿದೆ. ಸಂಜೆ 5 ಗಂಟೆಯವರೆಗೆ ಶೇ 65.69 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
Published: 10th May 2023 05:59 PM | Last Updated: 10th May 2023 07:39 PM | A+A A-

ಚನ್ನಪಟ್ಟಣದಲ್ಲಿನ ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತ ಮತದಾರರು
ಬೆಂಗಳೂರು: 224 ವಿಧಾನಸಭಾ ಕ್ಷೇತ್ರಗಳಿಗೆ ರಾಜ್ಯದಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯುತ್ತಿದ್ದು, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಾಗಿದೆ. ಸಂಜೆ 5 ಗಂಟೆಯವರೆಗೆ ಶೇ 65.69 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಸಂಜೆಯಾಗುತ್ತಲೇ ರಾಜ್ಯದ ಬಹುತೇಕ ಮತಗಟ್ಟೆಗಳಿಗೆ ಹೆಚ್ಚಿನ ಸಂಖ್ಯೆಯ ಮತದಾರರು ಆಗಮಿಸುತ್ತಿದ್ದು, ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬರುತ್ತಿದೆ. ಮತದಾನ ಅಂತ್ಯಕ್ಕೆ ಕೆಲವೇ ನಿಮಿಷಗಳಿದ್ದರೂ, ಮತದಾರರ ಸಂಖ್ಯೆ ಮಾತ್ರ ಜಾಸ್ತಿಯಾಗಿದೆ.
ಈ ಪೈಕಿ, ರಾಮನಗರದಲ್ಲಿ ಅತಿ ಹೆಚ್ಚು ಅಂದರೆ ಶೇ 78.22 ರಷ್ಟು ಮತದಾನವಾಗಿದೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ ಶೇ 48.63ರಷ್ಟು ಮತದಾನವಾಗಿದೆ.
#KarnatakaPollsWithTNIE
— TNIE Karnataka (@XpressBengaluru) May 10, 2023
Voter turnout till 5 pm
Approximate turnout - 65.69%
Highest voter turnout in #Ramanagara
BBMP (Central) - 50.1%
BBMP (North) - 48.78%
BBMP (South) - 48.63%
Bangalore Rural - 76.1%
Bangalore Urban - 52.19%
ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನದ ಮೊದಲ ಆರು ಗಂಟೆಗಳಲ್ಲಿ ಶೇ 37.25ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಅತಿ ಹೆಚ್ಚು ಅಂದರೆ ಶೇ 47.79 ರಷ್ಟು ಮತದಾನವಾಗಿತ್ತು.
Gadag - 68.30%
— TNIE Karnataka (@XpressBengaluru) May 10, 2023
Gulbarga - 57.99%
Hassan - 74.67%
Haveri - 73.25%
Kodagu - 70.46%
Kolar - 72.23%
Koppal - 70.49%
Mandya - 75.9%
Mysore - 67.99%
Raichur - 63.87%
Ramanagara - 78.22%
Shivamogga - 70.43%
Tumkur - 75.24%
Udupi - 73.8%
Uttara Kannada - 68.06%
Vijayanagara - 71.7%
ಬಳಿಕ ಮಧ್ಯಾಹ್ನ 3 ಗಂಟೆಯ ವೇಳೆಗೆ ರಾಜ್ಯದಾದ್ಯಂತ 52.18 ರಷ್ಟು ಮತದಾನ ನಡೆದಿತ್ತು. ಆಗಲೂ ರಾಮನಗರದಲ್ಲಿಯೇ ಅತಿಹೆಚ್ಚು ಮತದಾನವಾಗಿತ್ತು.
ಸಂಜೆ 5 ಗಂಟೆಯ ವೇಳೆಗೆ, ಬೆಂಗಳೂರು ಸೆಂಟ್ರಲ್‌ನಲ್ಲಿ ಶೇ 50.10, ಬೆಂಗಳೂರು ಉತ್ತರದಲ್ಲಿ ಶೇ 50.02ರಷ್ಟು, ಬೆಂಗಳೂರು ಗ್ರಾಮಾಂತರದಲ್ಲಿ ಶೇ 79.10ರಷ್ಟು, ಬೆಂಗಳೂರು ನಗರದಲ್ಲಿ ಶೇ 52.19, ಬಾಗಲಕೋಟೆ ಜಿಲ್ಲೆಯಲ್ಲಿ ಶೇ 70.04ರಷ್ಟು, ಬೆಳಗಾವಿಯಲ್ಲಿ ಶೇ 67.44, ಬಳ್ಳಾರಿಯಲ್ಲಿ ಶೇ 67.68, ಬೀದರ್‌ನಲ್ಲಿ ಶೇ 61.93, ವಿಜಯಪುರದಲ್ಲಿ ಶೇ 62.54, ಚಾಮರಾಜನಗರದಲ್ಲಿ ಶೇ 69.31, ಚಿಕ್ಕಬಳ್ಳಾಪುರ ಶೇ 76.64, ಚಿಕ್ಕಮಗಳೂರು ಶೇ 72.06, ಚಿತ್ರದುರ್ಗ ಶೇ 70.74, ದಕ್ಷಿಣ ಕನ್ನಡ ಶೇ 69.88, ದಾವಣಗೆರೆ ಶೇ 70.71, ಧಾರವಾಡ ಶೇ 62.98 ಮತ್ತು ಗದಗದಲ್ಲಿ ಶೇ 68.30 ರಷ್ಟು ಮತದಾನವಾಗಿದೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ: ಮಧ್ಯಾಹ್ನ 3 ಗಂಟೆವರೆಗೆ ಶೇ 52.18 ರಷ್ಟು ಮತದಾನ, ರಾಮನಗರದಲ್ಲಿ ಅತಿಹೆಚ್ಚು!
ಇನ್ನುಳಿದಂತೆ, ಕಲಬುರಗಿಯಲ್ಲಿ ಶೇ 57.99ರಷ್ಟು, ಹಾಸನದಲ್ಲಿ ಶೇ 74.67ರಷ್ಟು, ಹಾವೇರಿಯಲ್ಲಿ ಶೇ 73.25ರಷ್ಟು, ಕೊಡಗಿನಲ್ಲಿ ಶೇ 70.46, ಕೋಲಾರದಲ್ಲಿ ಶೇ 72.23, ಕೊಪ್ಪಳದಲ್ಲಿ ಶೇ 70.49, ಮಂಡ್ಯದಲ್ಲಿ ಶೇ 75.90, ಮೈಸೂರಿನಲ್ಲಿ ಶೇ 67.99, ರಾಯಚೂರಿನಲ್ಲಿ ಶೇ 63.87, ಶಿವಮೊಗ್ಗದಲ್ಲಿ ಶೇ 70.43, ತುಮಕೂರಿನಲ್ಲಿ ಶೇ 75.24, ಉಡುಪಿಯಲ್ಲಿ ಶೇ 73.80, ಉತ್ತರ ಕನ್ನಡದಲ್ಲಿ ಶೇ 68.06, ವಿಜಯನಗರ ಜಿಲ್ಲೆಯಲ್ಲಿ ಶೇ 71.70 ಮತ್ತು ಯಾದಗಿರಿಯಲ್ಲಿ ಶೇ 59.25ರಷ್ಟು ಮತದಾನವಾಗಿದೆ.