ಮತದಾನಕ್ಕೆ ಬಂದವರು ಮಸಣಕ್ಕೆ: ಮತದಾನಕ್ಕೂ ಮುನ್ನ ವೃದ್ಧೆ ಸಾವು; ಮತ್ತೊಂದೆಡೆ ವೋಟ್ ಹಾಕಿದ ನಂತರ ವ್ಯಕ್ತಿ ನಿಧನ
ಮತ ಚಲಾಯಿಸಲು ಬಂದಿದ್ದ ವೃದ್ಧೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ಯಲ್ಲಮ್ಮ ಕ್ಷೇತ್ರ ವ್ಯಾಪ್ತಿಯ ಯರಝರ್ವಿಯಲ್ಲಿ ನಡೆದಿದೆ.
Published: 10th May 2023 02:10 PM | Last Updated: 10th May 2023 02:18 PM | A+A A-

ಚಿಕ್ಕೋಲೆ ಮತ್ತು ಪಾರವ್ವ ಸಿದ್ನಾಳ
ಬೆಳಗಾವಿ: ಮತ ಚಲಾಯಿಸಲು ಬಂದಿದ್ದ ವೃದ್ಧೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ಯಲ್ಲಮ್ಮ ಕ್ಷೇತ್ರ ವ್ಯಾಪ್ತಿಯ ಯರಝರ್ವಿಯಲ್ಲಿ ನಡೆದಿದೆ.
ಯರಝರ್ವಿ ಗ್ರಾಮದ 70 ವರ್ಷದ ಪಾರವ್ವ ಸಿದ್ನಾಳ ಮತದಾನಕ್ಕೂ ಮುನ್ನ ಮತಗಟ್ಟೆ ಆವರಣದಲ್ಲಿ ಲೋ ಬಿಪಿಯಿಂದ ಕುಸಿದು ಬಿದ್ದು ನಿಧನರಾಗಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತೊಂದೆಡೆ, ಹಾಸನದಲ್ಲಿ ಮತದಾನ ಮಾಡಿ ಹೊರ ಬಂದ ಬಳಿಕ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜಿಲ್ಲೆ ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ನಡೆದಿದೆ. ಚಿಕ್ಕೋಲೆ ಗ್ರಾಮದ ಜಯಣ್ಣ(49) ಮೃತ ದುರ್ದೈವಿ. ಚಿಕ್ಕೋಲೆ ಗ್ರಾಮದಲ್ಲಿ ಮತ ಚಲಾಯಿಸಿ ಹೊರಗೆ ಬಂದ ಬಳಿಕ ಹೃದಯಾಘಾತ ಮತಗಟ್ಟೆ ಆವರಣದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
Sad news: Paravva Ishwarappa Sidnal age 70 years died due to Low bp while she was coming to vote in Yarzarvi booth no 48 at Saundatti constituency in #Belagavi died within compound wall. she collapsed at 10.30 am today. Her relatives took body to house. #KarnatakaPollsWithTNIE pic.twitter.com/rJLuDoJe7S
— Sunil Patil (@sunilpatilbgv) May 10, 2023