ಕರ್ನಾಟಕ ಚುನಾವಣೆ: ಮತ ಚಲಾಯಿಸಿ ಬಂದವರಿಗೆ ಉಚಿತ ತಿಂಡಿ-ತಿನಿಸುಗಳಿಗೆ ನಿರ್ಬಂಧ ಹೇರಿದ BBMP ಕ್ರಮಕ್ಕೆ ಹೈಕೋರ್ಟ್ ತಡೆ

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿ ಬಂದವರಿಗೆ ಉಚಿತವಾಗಿ ತಿಂಡಿ-ತಿನಿಸು ನೀಡಲು ಮುಂದಾಗಿದ್ದ ಬೆಂಗಳೂರಿನ ಎರಡು ಹೋಟೆಲ್​ಗಳ ನಿರ್ಧಾರಕ್ಕೆ ನಿರ್ಬಂಧ ವಿಧಿಸಿದ್ದ ಬಿಬಿಎಂಪಿ ಕ್ರಮಕ್ಕೆ ಹೈಕೋರ್ಟ್ ತಡೆ ನೀಡಿದೆ. 
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿ ಬಂದವರಿಗೆ ಉಚಿತವಾಗಿ ತಿಂಡಿ-ತಿನಿಸು ನೀಡಲು ಮುಂದಾಗಿದ್ದ ಬೆಂಗಳೂರಿನ ಎರಡು ಹೋಟೆಲ್​ಗಳ ನಿರ್ಧಾರಕ್ಕೆ ನಿರ್ಬಂಧ ವಿಧಿಸಿದ್ದ ಬಿಬಿಎಂಪಿ ಕ್ರಮಕ್ಕೆ ಹೈಕೋರ್ಟ್ ತಡೆ ನೀಡಿದೆ. 

ಹೋಟೆಲ್ ಮಾಲೀಕರ ಸಂಘಟನೆ ಬಿಬಿಎಂಪಿ ಕ್ರಮದ ವಿರುದ್ಧ ಹೈಕೋರ್ಟ್ ಮೊರೆ ಹೋಗಿತ್ತು. ವಿಚಾರಣೆ ವೇಳೆ ಮತದಾನ ಪ್ರಮಾಣ ಹೆಚ್ಚಿಸುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೆವು. ಇದಕ್ಕೆ ನಿರ್ಬಂಧ ಹೇರುವುದು ಸರಿಯಲ್ಲ ಎಂದು ಹೋಟೆಲ್ ಮಾಲೀಕರ ಸಂಘದ ಮನವಿ ಮಾಡಿದ್ದು ಇದಕ್ಕೆ ಹೈಕೋರ್ಟ್ ಸಮ್ಮತಿಸಿದೆ.

ನಗರದ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಮತ್ತು ಚಾಲುಕ್ಯ ಸಾಮ್ರಾಟ್ ಹೋಟೆಲ್​ಗಳು ಮತದಾನ ಮಾಡಿದ ಬಂದವರಿಗೆ ಉಚಿತವಾಗಿ ಬೆಣ್ಣೆ ದೋಸೆ, ಮೈಸೂರು ಪಾಕ್ ಮತ್ತು ತಂಪು ಪಾನೀಯಗಳನ್ನು ನೀಡುವುದಾಗಿ ಪ್ರಕಟಣೆ ನೀಡಿದ್ದವು. ಆದರೆ, ಇದಕ್ಕೆ ಬಿಬಿಎಂಪಿ ಆಕ್ಷೇಪ ವ್ಯಕ್ತಪಡಿಸಿತ್ತು. 

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಬಿಎಂಪಿ ಆಯುಕ್ತ ತುಷಾರ್​ ಗಿರಿನಾಥ್, ಇಂತಹ ಆಫರ್​​ಗಳನ್ನು ಹೋಟೆಲ್​​ ಮಾಲೀಕರು ನೀಡಬಾರದು. ಇದಕ್ಕೆ ನಾವು ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದರು. ನಂತರ, ಇಂತಹ ಆಫರ್​​ಗಳನ್ನು ಹೋಟೆಲ್​​ ಮಾಲೀಕರು ನೀಡಬಾರದು ಎಂದು ಸೂಚನೆಯನ್ನೂ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com