ವಿದ್ಯುತ್ ದರ ಏರಿಕೆ: ಪರಿಷ್ಕೃತ ದರ ಏಪ್ರಿಲ್ ನಿಂದ ಪೂರ್ವಾನ್ವಯ

ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (Karnataka Electricity Regulatory Commission -KERC) ಹೈಟೆನ್ಷನ್ (HT)​ ಮತ್ತು ಲೋಟೆನ್ಷನ್ (LT) ವಿಭಾಗಗಳಿಗೆ ಸರಾಸರಿ ವಿದ್ಯುತ್ ದರ ಏರಿಕೆ ಮಾಡಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (Karnataka Electricity Regulatory Commission -KERC) ಹೈಟೆನ್ಷನ್ (HT)​ ಮತ್ತು ಲೋಟೆನ್ಷನ್ (LT) ವಿಭಾಗಗಳಿಗೆ ಸರಾಸರಿ ವಿದ್ಯುತ್ ದರ ಏರಿಕೆ ಮಾಡಿದೆ. 

ಪ್ರತಿ ಯೂನಿಟ್​ಗೆ ಸರಾಸರಿ 70 ಪೈಸೆ ಹೆಚ್ಚಳಕ್ಕೆ (Electricity Tariff Hike) ಅನುಮೋದನೆ ನೀಡಿದೆ. ಇದು ಒಟ್ಟಾರೆ ಶೇ. 8.31ರಷ್ಟು ಹೆಚ್ಚಳಕ್ಕೆ ಕಾರಣವಾಗಿದ್ದು, ಹೊಸ ಶುಲ್ಕವು ಏಪ್ರಿಲ್​ ತಿಂಗಳಿಂದ ಪೂರ್ವಾನ್ವಯವಾಗಲಿದೆ.

ರಾಜ್ಯಾದ್ಯಂತ ವಿದ್ಯುತ್ ಸರಬರಾಜು ಕಂಪನಿಗಳು ಕಳೆದ ನವೆಂಬರ್ ನಲ್ಲಿ ಆಯೋಗಕ್ಕೆ ಶುಲ್ಕ ಪರಿಷ್ಕರಣೆ ಪ್ರಸ್ತಾವನೆಗಳನ್ನು ಸಲ್ಲಿಸಿದ್ದವು. 70 ಪೈಸೆ ಹೆಚ್ಚಳದಲ್ಲಿ 57 ಪೈಸೆಯನ್ನು ಫಿಕ್ಸೆಡ್ ಚಾರ್ಜ್ ಮೂಲಕ ಮತ್ತು ಉಳಿದ 13 ಪೈಸೆಯನ್ನು ಇಂಧನ ಶುಲ್ಕವಾಗಿ ಪಡೆಯಲಾಗುತ್ತಿದೆ.

ಇವಿ ಚಾರ್ಜಿಂಗ್ ಸ್ಟೇಷನ್ ವೆಚ್ಚ ಪ್ರತಿ ಯೂನಿಟ್ ಗೆ 4.5 ಕಡಿಮೆಯಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com