
ಸಾಂದರ್ಭಿಕ ಚಿತ್ರ
ಕೋಲಾರ: ಇತ್ತೀಚಿಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದು, ಕೋಲಾರ-ಆಂಧ್ರ ಪ್ರದೇಶ ಗಡಿಯಲ್ಲಿಒಂದೇ ದಿನ ಆನೆ ದಾಳಿಗೆ ಇಬ್ಬರು ಬಲಿಯಾದ ಘಟನೆ ನಡೆದಿದೆ.
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ ಕುಪ್ಪಂ ತಾಲೂಕಿನ ಮಲ್ಲನೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪತಿಚೇನು ಗ್ರಾಮದ ಮಹಿಳೆ ಹಾಗೂ ಮಲ್ಲನೂರು ಪಂಚಾಯಿತಿಯ ಸಪ್ಪನಿಕುಂಟಾ ಗ್ರಾಮದ ಶಿವಲಿಂಗಂ ಎಂಬುವ ವ್ಯಕ್ತಿ ಆನೆ ದಾಳಿಗೆ ಬಲಿಯಾಗಿದ್ದಾರೆ.
ಇದನ್ನು ಓದಿ: ಕೊಡಗಿನಲ್ಲಿ ಕಾಡಾನೆ ದಾಳಿ; ಬೆಳೆ ಉಳಿಸಿಕೊಳ್ಳಲು ಹೋದ ರೈತನಿಗೆ ಗಂಭೀರ ಗಾಯ
ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂದು ಮಲ್ಲನೂರು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಎರಡು ರಾಜ್ಯಗಳ ಗಡಿ ಗ್ರಾಮಗಳಲ್ಲಿ ಆನೆ ಹಾವಳಿಯಿಂದಾಗಿ ಗ್ರಾಮಸ್ಥರು ಮನೆಯಿಂದ ಆಚೆ ಬರಲು ಕೂಡ ಆತಂಕ ಪಡುವಂತಾಗಿದೆ.