ಸಿದ್ದರಾಮಯ್ಯ ಸಂಪುಟದಲ್ಲಿ ಸ್ಥಾನ: ಕಾಂಗ್ರೆಸ್‌ನಲ್ಲಿ ತಾನೊಬ್ಬ ಬಲಿಷ್ಠ ಎಂದು ಸಾಬೀತುಪಡಿಸಿದ ಕೆಎಚ್‌ ಮುನಿಯಪ್ಪ

ಕೆ.ಎಚ್. ಮುನಿಯಪ್ಪ ಅವರು ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಕಾಂಗ್ರೆಸ್‌ನಲ್ಲಿ ತಾನೊಬ್ಬ ಮಹತ್ವದ ಸದಸ್ಯ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಕೆ.ಹೆಚ್. ಮುನಿಯಪ್ಪ
ಕೆ.ಹೆಚ್. ಮುನಿಯಪ್ಪ

ಸತತ ಏಳು ಬಾರಿ ಸಂಸದರಾಗಿ, ಯುಪಿಎ ಸರ್ಕಾರದ ಅವಧಿಯಲ್ಲಿ ಹತ್ತು ವರ್ಷ ಕೇಂದ್ರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ ಅಪಾರ ಆಡಳಿತ ಅನುಭವ ಹೊಂದಿರುವ ಹಿರಿಯ ರಾಜಕಾರಣಿ ಕೆ.ಎಚ್. ಮುನಿಯಪ್ಪ ಮೊದಲ ಬಾರಿ ಶಾಸಕರಾಗಿ ಮಂತ್ರಿ ಮಂಡಲ ಸೇರಿಕೊಂಡಿದ್ದಾರೆ. ಮುನಿಯಪ್ಪ ಅವರು ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಕಾಂಗ್ರೆಸ್‌ನಲ್ಲಿ ತಾನೊಬ್ಬ ಮಹತ್ವದ ಸದಸ್ಯ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ತೀವ್ರ ಲಾಬಿಯ ನಡುವೆ, 75 ವರ್ಷ ವಯಸ್ಸಿನ ಪ್ರಮುಖ ದಲಿತ ನಾಯಕನನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನೀಡಿದ ಪತ್ರದಲ್ಲಿ ಮುನಿಯಪ್ಪ ಅವರ ಹೆಸರು ಸಚಿವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. ಆದರೆ, ಅವರ ಸಮುದಾಯದ  ಸದಸ್ಯರಾದ ಅವರ ಪುತ್ರಿ ರೂಪಕಲಾ ಎಂ ಶಶಿಧರ್ ಸೇರಿದಂತೆ ಆರು ಪರಿಶಿಷ್ಟ ಜಾತಿ (ಎಡ) ಶಾಸಕರು ವಿಧಾನಸಭೆಗೆ ಚುನಾಯಿತರಾಗಿರುವ ಕಾರಣ ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯ ಕೇಳಿಬಂದಿತ್ತು. ಕೆಜಿಎಫ್‌ನಿಂದ ರೂಪಕಲಾ ಸತತ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಮನವೊಲಿಸಲು ಸಮುದಾಯದ ಮುಖಂಡರ ನಿಯೋಗ ನವದೆಹಲಿಗೆ ತೆರಳಿತ್ತು, ಆದರೆ ವಿಫಲವಾಗಿದೆ.

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಆಯ್ಕೆ ಕುರಿತು ತೀವ್ರ ಚರ್ಚೆಯ ನಂತರ ವೇಣುಗೋಪಾಲ್ ಅವರು ಒಬ್ಬರೇ ಉಪ ಮುಖ್ಯಮಂತ್ರಿ ಇರುತ್ತಾರೆ ಎಂದು ಸ್ಪಷ್ಟಪಡಿಸಿದರು.

ಮುನಿಯಪ್ಪ ಅವರು ಸತತ ಏಳು ಲೋಕಸಭಾ ಚುನಾವಣೆಗಳನ್ನು ಗೆದ್ದು ಅಪೇಕ್ಷಣೀಯ ದಾಖಲೆ ಹೊಂದಿದ್ದಾರೆ. ಆದರೆ, 2019 ರ ಚುನಾವಣೆಯಲ್ಲಿ ಅವರು ಸೋತಾಗ, ಇದು ಅವರ ರಾಜಕೀಯ ಜೀವನಕ್ಕೆ ಅಂತ್ಯ ಎಂದು ಹಲವರು ಭಾವಿಸಿದ್ದರು. ಆದರೆ, ಅವರು ರಾಜ್ಯ ರಾಜಕಾರಣಕ್ಕೆ ಧುಮುಕುವ ಮೂಲಕ ತಾವು ರಾಜಕೀಯ ಜೀವನ ಅಂತ್ಯಗೊಳಿಸಿಲ್ಲ ಎನ್ನುವ ಸಂದೇಶವನ್ನು ನೀಡಿದರು. ಅವರು ದೇವನಹಳ್ಳಿ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿ ವಿಜಯಶಾಲಿಯಾಗಿ ಹೊರಹೊಮ್ಮಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com