ಬೆಂಗಳೂರಿನಲ್ಲಿ ಭಾರಿ ಮಳೆ; ಐದು ವಿಮಾನಗಳ ಮಾರ್ಗ ಬದಲಾವಣೆ

ಭಾನುವಾರ ಮಧ್ಯಾಹ್ನದಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭಾರಿ ಮಳೆ ಸುರಿದಿದ್ದು, ಐದು ವಿಮಾನಗಳ ಮಾರ್ಗವನ್ನು ಬದಲಿಸಲಾಗಿದೆ. 
ಕೆಂಪೇಗೌಡ ವಿಮಾನ ನಿಲ್ದಾಣ
ಕೆಂಪೇಗೌಡ ವಿಮಾನ ನಿಲ್ದಾಣ

ಬೆಂಗಳೂರು: ಭಾನುವಾರ ಮಧ್ಯಾಹ್ನದಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭಾರಿ ಮಳೆ ಸುರಿದಿದ್ದು, ಐದು ವಿಮಾನಗಳ ಮಾರ್ಗವನ್ನು ಬದಲಿಸಲಾಗಿದೆ. 

ಮೂರು ಇಂಡಿಗೋ ವಿಮಾನಗಳು ಮತ್ತು ಒಂದು ಏರ್ ಏಷ್ಯಾ ವಿಮಾನವನ್ನು ಚೆನ್ನೈಗೆ ತಿರುಗಿಸಲಾಯಿ. ಆದರೆ, ಒಂದು ಸ್ಟಾರ್ ಏರ್ ವಿಮಾನವನ್ನು ಹೈದರಾಬಾದ್‌ಗೆ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ಏರ್‌ಪೋರ್ಟ್ ಲಿಮಿಟೆಡ್ (BIAL) ವಕ್ತಾರರು ತಿಳಿಸಿದ್ದಾರೆ.

ಇಂಡಿಗೋ ವಕ್ತಾರರ ಪ್ರಕಾರ, ಚೆನ್ನೈನಿಂದ ಮಧ್ಯಾಹ್ನ 2.12 ಕ್ಕೆ ಟೇಕಾಫ್ ಆಗಿದ್ದ ವಿಮಾನವು ಬೆಂಗಳೂರಿನಲ್ಲಿನ ಕಳಪೆ ಹವಾಮಾನದಿಂದಾಗಿ ಮಧ್ಯದಲ್ಲಿಯೇ ಮತ್ತೆ ಚೆನ್ನೈಗೆ ಹಿಂತಿರುಗಿತು. ಕೋಲ್ಕತ್ತಾದಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನ ಮಧ್ಯಾಹ್ನ 12.59ಕ್ಕೆ ಮತ್ತು ಪುಣೆಯಿಂದ 1.57ಕ್ಕೆ ಹೊರಟಿದ್ದ ವಿಮಾನಗಳನ್ನು ಚೆನ್ನೈಗೆ ಮಾರ್ಗ ಬದಲಾವಣೆ ಮಾಡಲಾಯಿತು.

ಕಲಬುರಗಿಯಿಂದ ಬೆಂಗಳೂರಿನ ಟರ್ಮಿನಲ್ 2 ತಲುಪಬೇಕಿದ್ದ ಸ್ಟಾರ್ ಏರ್ ವಿಮಾನವನ್ನು ಹೈದರಾಬಾದ್‌ಗೆ ತಿರುಗಿಸಲಾಗಿದೆ ಎಂದು ವಿಮಾನಯಾನ ಮೂಲಗಳು ತಿಳಿಸಿವೆ.

ಚೆನ್ನೈನಿಂದ ಬಂದ ವಿಮಾನವನ್ನೂ ವಾಪಸ್ ಕಳುಹಿಸಬೇಕಾಯಿತು ಎಂದು ಏರ್ ಏಷ್ಯಾ ವಕ್ತಾರರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com