ಆರ್ ಟಿಇ ಅಡಿ ವಿದ್ಯಾರ್ಥಿಗಳ ನೋಂದಣಿಗೆ ಗಡುವು ದಿನಾಂಕ ವಿಸ್ತರಣೆ

ಶಾಲಾ ಶಿಕ್ಷಣ ಇಲಾಖೆ ಆರ್ ಟಿಇ ಅಡಿ ದಾಖಲಾತಿ ದಿನಾಂಕದ ಗಡುವನ್ನು ವಿಸ್ತರಿಸಿದೆ.
ಶಾಲೆಗೆ ತೆರಳುತ್ತಿರುವ ಮಕ್ಕಳು (ಸಂಗ್ರಹ ಚಿತ್ರ)
ಶಾಲೆಗೆ ತೆರಳುತ್ತಿರುವ ಮಕ್ಕಳು (ಸಂಗ್ರಹ ಚಿತ್ರ)

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆ ಆರ್ ಟಿಇ ಅಡಿ ದಾಖಲಾತಿ ದಿನಾಂಕದ ಗಡುವನ್ನು ವಿಸ್ತರಿಸಿದೆ.

ಇಲಾಖೆ ಆರಂಭದಲ್ಲಿ ತನ್ನ ಕ್ಯಾಲೆಂಡರ್ ಆಫ್ ಇವೆಂಟ್ಸ್ ನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಮೊದಲ ಮೆರಿಟ್ ಪಟ್ಟಿಯನ್ನು ಮೇ 3 ರಂದು ಬಿಡುಗಡೆ ಮಾಡಬೇಕಿತ್ತು. ಆದರೆ ಇದರಲ್ಲಿ ವಿಳಂಬವಾಗಿ,  ಮೊದಲ ಮೆರಿಟ್ ಪಟ್ಟಿಯನ್ನು ಮೇ.18 ರಂದು ಬಿಡುಗಡೆ ಮಾಡಲಾಗಿತ್ತು. ಈ ಬಳಿಕ ಕಾರ್ಯಕ್ರಮಗಳ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು.

ಪರಿಷ್ಕೃತ ಪಟ್ಟಿಯ ಪ್ರಕಾರ, ವಿದ್ಯಾರ್ಥಿಗಳ ಮೊದಲ ಸುತ್ತಿನ ದಾಖಲಾತಿ ಮತ್ತು ವಿವರಗಳ ಅಪ್‌ಲೋಡ್ ಗಡುವು ಮೇ 29 ರಂದು ಕೊನೆಗೊಳ್ಳಲಿದೆ. ಎರಡನೇ ಸೀಟುಗಳ ಪಟ್ಟಿಯನ್ನು ಜೂನ್ 6 ರಂದು ಪ್ರಕಟಿಸಲಾಗುತ್ತದೆ ಮತ್ತು ಜೂನ್ 7 ರಿಂದ ಜೂನ್ 15 ರವರೆಗೆ ದಾಖಲಾತಿ ನಡೆಯಲಿದೆ. ಈ ಅವಧಿಯಲ್ಲಿ, ದಾಖಲಾದ ವಿದ್ಯಾರ್ಥಿಗಳ ವಿವರಗಳನ್ನು ಶಾಲೆಗಳ ಸಾಫ್ಟ್‌ವೇರ್‌ನಲ್ಲಿಯೂ ನವೀಕರಿಸಲಾಗುತ್ತದೆ. 

ಮೊದಲ ಪಟ್ಟಿಯನ್ನು ಮೇ 3 ರಂದು ಪ್ರಕಟಿಸಲಾಗಿದ್ದರೆ, ಪರಿಷ್ಕೃತ ವೇಳಾಪಟ್ಟಿಯಲ್ಲಿ ಅರ್ಜಿ ಸಲ್ಲಿಸಲು ಮೇ 10 ಕೊನೆಯ ದಿನಾಂಕವಾಗಿರುತ್ತಿತ್ತು. ಈ ಮಧ್ಯೆ ಶಾಲೆಗಳಿಂದ ಶುಲ್ಕ ಮರುಪಾವತಿಗೆ ಪ್ರಸ್ತಾವನೆಗಳ ಮರುಸಲ್ಲಿಕೆಗೆ ಸಂಬಂಧಿಸಿದಂತೆ. ಇಲಾಖೆ ಸುತ್ತೋಲೆ ಹೊರಡಿಸಿದ್ದು,  ಇದರ ಪ್ರಕಾರ, ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶಾಲಾ ವೆಚ್ಚಗಳಲ್ಲಿ ಬದಲಾವಣೆಗಳಾದಲ್ಲಿ  ಶಾಲೆಗಳು 2021-22 ಶೈಕ್ಷಣಿಕ ವರ್ಷದಿಂದ ಶುಲ್ಕ ಮರುಪಾವತಿಗಾಗಿ ಮತ್ತೊಂದು ಪ್ರಸ್ತಾವನೆಯನ್ನು ಸಲ್ಲಿಸಬಹುದಾಗಿದೆ. ಏತನ್ಮಧ್ಯೆ, ಪ್ರಸ್ತಾವನೆಗಳನ್ನು ತಿರಸ್ಕರಿಸಲು ಕಾರಣಗಳನ್ನು ಸರಿಯಾಗಿ ದಾಖಲಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಇಲಾಖೆ ಅಧಿಕಾರಿಗಳು ಮತ್ತು ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com