ಪಿಜಿ ವಸತಿ ಗೃಹದ ಮಾಲೀಕರನ್ನು ಗುರಿಯಾಗಿಸಿ ದರೋಡೆ ಮಾಡುತ್ತಿದ್ದ ಇಬ್ಬರು ಎಂಜಿನಿಯರ್‌ಗಳು, ವಕೀಲರ ಬಂಧನ

ಕುಮಾರಸ್ವಾಮಿ ಲೇಔಟ್ ಪೊಲೀಸರು ದರೋಡೆ ಆರೋಪದ ಮೇಲೆ ವಕೀಲ ಹಾಗೂ ಇಬ್ಬರು ಇಂಜಿನಿಯರಿಂಗ್ ಪದವೀಧರರನ್ನು ಬಂಧಿಸಿದ್ದಾರೆ. ಸ್ವರೂಪ್ (27), ಆತ್ಮಾನಂದ ಜಂಬಗಿ (27) ಮತ್ತು ಶಾಲಿಂ ರಾಜ್ (21) ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗೃಹದಲ್ಲಿ ವಾಸವಿದ್ದು, ಪಿಜಿ ವಸತಿಗೃಹ ಮಾಲೀಕರನ್ನು ಗುರಿಯಾಗಿಸಿಕೊಂಡು ದರೋಡೆ ನಡೆಸುತ್ತಿದ್ದರು.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಪೊಲೀಸರು ದರೋಡೆ ಆರೋಪದ ಮೇಲೆ ವಕೀಲ ಹಾಗೂ ಇಬ್ಬರು ಇಂಜಿನಿಯರಿಂಗ್ ಪದವೀಧರರನ್ನು ಬಂಧಿಸಿದ್ದಾರೆ. 

ಸ್ವರೂಪ್ (27), ಆತ್ಮಾನಂದ ಜಂಬಗಿ (27) ಮತ್ತು ಶಾಲಿಂ ರಾಜ್ (21) ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗೃಹದಲ್ಲಿ ವಾಸವಿದ್ದು, ಪಿಜಿ ವಸತಿಗೃಹ ಮಾಲೀಕರನ್ನು ಗುರಿಯಾಗಿಸಿಕೊಂಡು ದರೋಡೆ ನಡೆಸುತ್ತಿದ್ದರು.

ಈ ಮೂವರು, ಅವರ ವ್ಯಾಪಾರವನ್ನು ವಿಸ್ತರಿಸಲು ಕಟ್ಟಡವನ್ನು ಹುಡುಕಲು ಸಹಾಯ ಮಾಡುವ ನೆಪದಲ್ಲಿ ಆ ಪ್ರದೇಶದಲ್ಲಿನ ಪಿಜಿ ವಸತಿ ಮಾಲೀಕರಿಗೆ ಕರೆ ಮಾಡುತ್ತಿದ್ದರು. ಬಳಿಕ ನಿರ್ಮಾಣ ಹಂತದ ಕಟ್ಟಡಗಳಿಗೆ ಮಾಲೀಕರನ್ನು ಆಹ್ವಾನಿಸುತ್ತಿದ್ದರು. ಪಾರ್ಶ್ವವಾಯುವಿಗೆ ಕಾರಣವಾಗುವಂತಹ ರಾಸಾಯನಿಕಗಳನ್ನು ಅವರ ದೇಹಕ್ಕೆ ಚುಚ್ಚುವುದಾಗಿ ಬೆದರಿಕೆ ಹಾಕುತ್ತಿದ್ದರು. ಭಯದಿಂದ ಮಾಲೀಕರು ತಮ್ಮ ಬಳಿ ಇದ್ದ ಮೊಬೈಲ್, ಚಿನ್ನಾಭರಣ, ನಗದನ್ನು ಅವರಿಗೆ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅವರಿಗೆ ಪರಿಚಯವಿರುವ ಜನರ ಮನೆಗಳನ್ನು ಸಹ ಅವರು ಗುರಿಯಾಗಿಸಿಕೊಂಡಿದ್ದಾರೆ. ಈ ಮೂವರು ತಾವು ಟಾರ್ಗೆಟ್ ಮಾಡಲಿರುವ ಮನೆಯಲ್ಲಿರುವ ಜನರ ದೈನಂದಿನ ಚಟುವಟಿಕೆಗಳನ್ನು ತಿಳಿದುಕೊಳ್ಳುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ವೀಸಾ ದಾಖಲೆಗಳನ್ನು ಪರಿಶೀಲಿಸುವ ನೆಪದಲ್ಲಿ ಸಿವಿಲ್ ಗುತ್ತಿಗೆದಾರ ಮುರಳೀಧರ್ ಮನೆಗೆ ಹೋಗಿದ್ದರು. ಕಳ್ಳತನಕ್ಕಾಗಿ ಮನೆ ಪ್ರವೇಶಿಸುವ ಮುನ್ನ ಮುರಳೀಧರ್ ಮನೆಯಲ್ಲಿ ಒಬ್ಬರೇ ಇದ್ದುದನ್ನು ಖಚಿತಪಡಿಸಿಕೊಂಡಿದ್ದಾರೆ. ಮುಖಕ್ಕೆ ಮಾಸ್ಕ್ ಧರಿಸಿ, ತಮ್ಮ ಗುರುತನ್ನು ಮರೆಮಾಚಿ, ಗುತ್ತಿಗೆದಾರನನ್ನು ಕಟ್ಟಿಹಾಕಿ 15 ಲಕ್ಷ ರೂಪಾಯಿ ಮೌಲ್ಯದ ನಗದು, ಚಿನ್ನ ಮತ್ತು ಆಭರಣಗಳನ್ನು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಗುತ್ತಿಗೆದಾರರು ನೀಡಿದ ದೂರಿನ ಮೇರೆಗೆ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com