
ಸಂಗ್ರಹ ಚಿತ್ರ
ಬೆಂಗಳೂರು: ನಾಯಂಡಹಳ್ಳಿ ಜಂಕ್ಷನ್‌ನಿಂದ ಹೆಬ್ಬಾಳಕ್ಕೆ ಹೆಚ್ಚುವರಿ ಬಸ್‌ಗಳ(ಮಾರ್ಗ ಸಂಖ್ಯೆ 501) ಸೇವೆಯನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕಲ್ಪಿಸಿದೆ.
ಗುರುವಾರದಿಂದಲೇ ಬಸ್‌ಗಳು ಸಂಚಾರ ಆರಂಭಿಸಲಿವೆ. ನಾಯಂಡಹಳ್ಳಿ ಜಂಕ್ಷನ್‌ನಿಂದ ಹೊರಡುವ ಬಸ್ ನಾಗರಭಾವಿ ವೃತ್ತ, ಮಾಳಗಾಳ, ಸುಮನಹಳ್ಳಿ ಜಂಕ್ಷನ್, ಲೂರ್ದಬಾಯಿ ಸಮುದಾಯ ಭವನ, ಬಿಡಿಎ ಬಸ್ ಬೇ/ಸ್ವಾತಂತ್ರ್ಯ ಹೋರಾಟಗಾರರ ಕಾಲೋನಿ, ಗೊರಗುಂಟೆಪಾಳ್ಯ, ಅಲಿಸ್ಡ್ ಫ್ಯಾಕ್ಟರಿ, ಬಿಇಎಲ್ ಸರ್ಕಲ್ ಮತ್ತು ದೇವಿನಗರ ಕ್ರಾಸ್ ಮಾರ್ಗವಾಗಿ ಈ ಬಸ್ ಗಳು ಕಾರ್ಯಾಚರಣೆ ಮಾಡಲಿವೆ.
ಇದನ್ನೂ ಓದಿ: ನಿಯಮ ಉಲ್ಲಂಘಿಸಿ ಪ್ರಯಾಣಿಸುತ್ತಿದ್ದವರಿಗೆ ಶಾಕ್: ಏಪ್ರಿಲ್ ಒಂದೇ ತಿಂಗಳಲ್ಲಿ 6.56 ಲಕ್ಷ ರೂ. ದಂಡ ಸಂಗ್ರಹಿಸಿದ ಬಿಎಂಟಿಸಿ
ಇದಲ್ಲದೆ, ಕೆಂಗೇರಿ ಟಿಟಿಎಂಸಿಯಿಂದ ಕೊಮ್ಮಘಟ್ಟ ಕ್ರಾಸ್, ವಿಶ್ವೇಶ್ವರಯ್ಯ ಬಡಾವಣೆ, ಉಪಕಾರ್ ಬಡಾವಣೆ ಕ್ರಾಸ್, ಮುದ್ದಯ್ಯನಪಾಳ್ಯ ಜಂಕ್ಷನ್, ಸುಂಕದಕಟ್ಟೆ, ಪೀಣ್ಯ 2ನೇ ಹಂತದ ಮಾರ್ಗವಾಗಿ ಜಾಲಹಳ್ಳಿ ಕ್ರಾಸ್‍ಗೆ ಕಾರ್ಯಾಚರಣೆ ಮಾಡುತ್ತಿರುವ ಮಾರ್ಗ ಸಂಖ್ಯೆ 515ರಲ್ಲಿ ಹೆಚ್ಚುವರಿಯಾಗಿ ಐದು ಬಸ್‌ಗಳು ಗುರುವಾರದಿಂದ ಪರಿಚಯಿಸಲಾಗುತ್ತಿದೆ.
ಇದರಿಂದಾಗಿ ಈ ಮಾರ್ಗಗಳಲ್ಲಿ ಪ್ರತಿ 15 ನಿಮಿಷಗಳ ಅಂತರದಲ್ಲಿ ಬಸ್‌ಗಳು ಸಂಚರಿಸಲಿವೆ ಎಂದು ಬಿಎಂಟಿಸಿ ತಿಳಿಸಿದೆ.