
ಸಂಗ್ರಹ ಚಿತ್ರ
ಬೆಂಗಳೂರು: ಅಕ್ರಮ ಸಂಬಂಧ ಹೊಂದಿದ್ದಾನೆಂದು ಶಂಕಿಸಿ ಯುವಕನೊಬ್ಬನ ಬೆನ್ನಟ್ಟಿ ಹತ್ಯೆ ಮಾಡಿರುವ ಘಟನೆ ವಿಶ್ವನಾಥಪುರದಲ್ಲಿ ನಡೆದಿದೆ.
ಪ್ರದೀಪ್ (27) ಮೃತ ಯುವಕನಾಗಿದ್ದಾನೆ. ವೆಂಕಟೇಶ್ ಹತ್ಯೆ ಮಾಡಿದ ಆರೋಪಿ. ತನ್ನ ಪತ್ನಿಯೊಂದಿಗೆ ಪ್ರದೀಪ್ ಅಕ್ರಮ ಹೊಂದಿದ್ದಾನೆಂದು ವೆಂಕಟೇಶ್ ಶಂಕಿಸಿದ್ದು, ಪೊಲೀಸರಿಗೂ ದೂರು ನೀಡಿದ್ದ. ಇದನ್ನು ಲೆಕ್ಕಿಸದೆ ಪ್ರದೀಪ್ ತನ್ನ ಪತ್ನಿಯನ್ನು ಹಿಂಬಾಲಿಸುತ್ತಿದ್ದ ಎಂದು ವೆಂಕಟೇಶ್'ಗೆ ತಿಳಿದುಬಂದಿದೆ.
ಇದರಂತೆ ಗುರವಾರ ಬೆಳಕಿನ ಜಾವ ಮಾತನಾಡಬೇಕೆಂದು ಪ್ರದೀಪ್ ನನ್ನು ತಾನಿದ್ದ ಸ್ಥಳಕ್ಕೆ ವೆಂಕಟೇಶ್ ಕರೆಸಿಕೊಂಡಿದ್ದಾನೆ. ಈ ವೇಳೆ ತನ್ನ ಸ್ನೇಹಿತ ಕೋಳಿ ನಾಗೇಶ್ ಜೊತೆ ಸೇರಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ನಡಸಿದ್ದಾನೆ. ಬಳಿಕ ಪ್ರದೀಪ್ ಓಡಲು ಆರಂಭಿಸಿದ್ದು, ಸುಮಾರು 1 ಕಿ.ಮೀ ವರೆಗೆ ಬೆನ್ನಟ್ಟಿದ ಆರೋಪಿಗಳು, ಪ್ರದೀಪ್ ಕೈಕಾಲು ಕಟ್ಟಿ ಹತ್ಯೆ ಮಾಡಿದ್ದಾರೆ. ಈ ಸಂಬಂಧ ವಿಶ್ವನಾಥಪುರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.