ಧಾರವಾಡದಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ: ಇಬ್ಬರ ಸಾವು
ಧಾರವಾಡ ನಗರದ ಕಮಲಾಪುರ ಬಡಾವಣೆಯಲ್ಲಿ ಕಳೆದ ರಾತ್ರಿ ಜೋಡಿ ಕೊಲೆ ನಡೆದಿದೆ. ಮೊಹಮ್ಮದ್ ಸಾಬ್ ರೆಹಮಾನ್ ಸಾಬ್ ಕುಡಚಿ (45ವ) ಮತ್ತು ಗಣೇಶ ಕಮ್ಮಾರ್ (25ವ) ಎಂಬ ಇಬ್ಬರು ವ್ಯಕ್ತಿಗಳನ್ನು ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.
Published: 26th May 2023 01:06 PM | Last Updated: 26th May 2023 01:10 PM | A+A A-

ಸಾಂದರ್ಭಿಕ ಚಿತ್ರ
ಧಾರವಾಡ: ಧಾರವಾಡ ನಗರದ ಕಮಲಾಪುರ ಬಡಾವಣೆಯಲ್ಲಿ ಕಳೆದ ರಾತ್ರಿ ಜೋಡಿ ಕೊಲೆ ನಡೆದಿದೆ. ಮೊಹಮ್ಮದ್ ಸಾಬ್ ರೆಹಮಾನ್ ಸಾಬ್ ಕುಡಚಿ (45ವ) ಮತ್ತು ಗಣೇಶ ಕಮ್ಮಾರ್ (25ವ) ಎಂಬ ಇಬ್ಬರು ವ್ಯಕ್ತಿಗಳನ್ನು ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.
ಐದು ಜನರ ತಂಡವು ಮೊಹಮ್ಮದ್ ಕುಡಚಿಯ ಮೇಲೆ ಆಯುಧಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಗಣೇಶ್ ಕಮ್ಮಾರ್ ನಿಗೆ ಶಸ್ತ್ರಾಸ್ತ್ರಗಳಿಂದ ತೀವ್ರ ಗಾಯಗಳಾಗಿ ಮೃತಪಟ್ಟಿದ್ದಾರೆ. ಘಟನೆ ಕುರಿತು ಉಪನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಿನ್ನೆ ರಾತ್ರಿ 10.30 ರಿಂದ 11 ಗಂಟೆಯ ನಡುವೆ ಘಟನೆ ನಡೆದಿದ್ದು, ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಸ್ಥಳಕ್ಕೆ ಧಾವಿಸಿ ತನಿಖೆ ನಡೆಯುತ್ತಿದೆ.