ವಿಜಯಪುರ: ಹಿಡಿದ ಹಾವಿನೊಂದಿಗೆ ಮದುವೆ ಮನೆಗೆ ಬಂದು ವರನೊಂದಿಗೆ ಪೋಸ್ ಕೊಟ್ಟ ಉರಗ ರಕ್ಷಕ !

34 ವರ್ಷದ  ಹನುಮೇಶ್ ಕೈಯಲ್ಲಿ ಹಾವು ಹಿಡಿದು ಕೊಂಡು ಮದುವೆ ಮನೆಯಲ್ಲಿ ವರನ ಜೊತೆಗೆ ಫೋಟೋಗೆ ಪೋಸ್ ನೀಡಿದ ಘಟನೆ ವಿಜಯಪುರದಲ್ಲಿ ನಡೆದಿದೆ. ವರನೊಂದಿಗೆ ಹಸಿರು ಬಳ್ಳಿಯ ಹಾವನ್ನು ಹಿಡಿದಿರುವ ವ್ಯಕ್ತಿ ಫೋಟೋ ತೆಗೆಸಿಕೊಂಡಿದ್ದಾನೆ.
ವರನ ಜೊತೆ ಹಾವು ಹಿಡಿದು ಫೋಟೋ ತೆಗೆಸಿಕೊಂಡ ಉರಗ ರಕ್ಷಕ
ವರನ ಜೊತೆ ಹಾವು ಹಿಡಿದು ಫೋಟೋ ತೆಗೆಸಿಕೊಂಡ ಉರಗ ರಕ್ಷಕ

ವಿಜಯಪುರ: 34 ವರ್ಷದ  ಹನುಮೇಶ್ ಕೈಯಲ್ಲಿ ಹಾವು ಹಿಡಿದು ಕೊಂಡು ಮದುವೆ ಮನೆಯಲ್ಲಿ ವರನ ಜೊತೆಗೆ ಫೋಟೋಗೆ ಪೋಸ್ ನೀಡಿದ ಘಟನೆ ವಿಜಯಪುರದಲ್ಲಿ ನಡೆದಿದೆ. ವರನೊಂದಿಗೆ ಹಸಿರು ಬಳ್ಳಿಯ ಹಾವನ್ನು ಹಿಡಿದಿರುವ ವ್ಯಕ್ತಿ  ಫೋಟೋ ತೆಗೆಸಿಕೊಂಡಿದ್ದಾನೆ. ಇದು ಆತನಿಗೆ ಸಮಸ್ಯೆ ತಂದೊಡ್ಡಿದೆ.

ಅರಣ್ಯಾಧಿಕಾರಿಗಳು ಹನುಮೇಶನನ್ನು ಆತನ ಸಾಮಾಜಿಕ ಜಾಲತಾಣದ ಮೂಲಕ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅಧಿಕಾರಿಗಳು ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಹಾವುಗಳನ್ನು ಹಿಡಿಯುವುದು ಮತ್ತು ಅವುಗಳನ್ನು ಕಾಡಿಗೆ ಮರಳಿ ಬಿಡುವ ನೈತಿಕ ವಿಧಾನಗಳನ್ನು ವಿವರಿಸಿದ್ದಾರೆ.

ಹನುಮೇಶ್ ಎಂಬಾತ ನಗರ ವ್ಯಾಪ್ತಿಯಲ್ಲಿ ಹಾವು ರಕ್ಷಣೆಗೆ ಹೋಗಿದ್ದರು, ತನ್ನ ಸ್ನೇಹಿತನ ಮದುವೆಗೆ ವಿಳಂಬವಾಗುತ್ತಿತ್ತು, ಹಾಗಾಗಿ ಆತ ಹಾವಿನ ಜೊತೆಯೇ ಮದುವೆ ಮನೆಗೆ ಹೋಗಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.

ಹನುಮೇಶ್ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ ಜೊತೆಗೆ ತನಗೆ  ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಹೇಳಿದ್ದಾನೆ. ಹೀಗಾಗಿ ಅವನಿಗೆ ಎಚ್ಚರಿಕೆ ನೀಡಿದ್ದೇವೆ.  ನಾವು ಅವನಿಗೆ ಹಾವು ಹಿಡಿಯುವ ಕಿಟ್  ಸಹ ನೀಡಿದ್ದೇವೆ. ಕಿಟ್‌ನಲ್ಲಿ ಕೋಲು, ಸುರಕ್ಷತಾ ವಸ್ತು ಮತ್ತು ಹಾವನ್ನು ಸಾಗಿಸಲು ಕವರ್ ಇದೆ ಎಂದು  ವಿಜಯಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್  ಹೇಳಿದ್ದಾರೆ.

ವಿಜಯಪುರದಲ್ಲಿ ಉರಗ ರಕ್ಷಕರಿಗಾಗಿ ನಾವು ಆ್ಯಪ್ ಮತ್ತು ಸೋಶಿಯಲ್ ಮೀಡಿಯಾ ಗ್ರೂಪ್ ಮಾಡಿದ್ದೇವೆ. ಎಲ್ಲಾ ಉರಗ ರಕ್ಷಕರು ಗ್ರೂಪ್‌ನಲ್ಲಿದ್ದಾರೆ. ಅವರು ತಾವು ರಕ್ಷಿಸಿದ  ಹಾವುಗಳ ರಕ್ಷಣೆ ಮತ್ತು ಬಿಡುಗಡೆಯ ಬಗ್ಗೆ ಅಪ್ ಡೇಟ್ ನೀಡುತ್ತಾರೆ. ಹಾವುಗಳನ್ನು  ಹಿಡಿದ ನಂತರ ಹತ್ತಿರದ ಅರಣ್ಯ ಪ್ರದೇಶಗಳಲ್ಲಿ ಬೇಗ ಬಿಡುಗಡೆ ಮಾಡುವುದನ್ನು ಖಚಿತ ಪಡಿಸಿಕೊಳ್ಳುತ್ತೇವೆ ಎಂದು ಅಧಿಕಾರಿ ವಿವರಿಸಿದರು.

ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾವು ಕಡಿತ ಪ್ರಕರಣಗಳು ವರದಿಯಾಗುತ್ತಿದ್ದು, ಯಾವುದೇ ಧಾರ್ಮಿಕ ಕೇಂದ್ರಗಳಿಗೆ ಅಲ್ಲ, ಹತ್ತಿರದ ವೈದ್ಯರ ಬಳಿಗೆ ಹೋಗಬೇಕು ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು ಎಂದು ಅಧಿಕಾರಿ ಹೇಳಿದರು.

ಹಾವು ಕಡಿತಕ್ಕೆ ಒಳಗಾದವರನ್ನು ಸ್ವಾಮೀಜಿಗಳ ಬಳಿಗೆ  ಹಾಗೂ ಪ್ರಾರ್ಥನೆಗೆ ಕರೆದೊಯ್ಯುತ್ತಾರೆ. ವಿಷಕಾರಿ ಮತ್ತು ವಿಷಕಾರಿ ಹಾವುಗಳ ಕಚ್ಚಿದ ಕೂಡಲೇ  ವೈದ್ಯರ ಬಳಿಗೆ ಹೋಗುವಂತೆ ನಾವು ಜನರ ಬಳಿ ವಿನಂತಿಸುತ್ತಿದ್ದೇವೆ ಎಂದು ಅವರು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com