ಪ್ರತಿಭಟನಾನಿರತ ಕುಸ್ತಿಪಟುಗಳಿಗೆ ರಾಜ್ಯದ ಮಾಜಿ ಕ್ರೀಡಾಪಟುಗಳ ಬೆಂಬಲ
ಜಂತರ್ ಮಂತರ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ಸಂಸದ ಮತ್ತು ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಅವರ ಲೈಂಗಿಕ ಕಿರುಕುಳದ ವಿರುದ್ಧ ಹೋರಾಟ ನಡೆಸುತ್ತಿರುವ ಕುಸ್ತಿಪಟುಗಳಿಗೆ ರಾಜ್ಯದ ಕ್ರೀಡಾಭಿಮಾನಿಗಳು ಹಾಗೂ ಮಾಜಿ ಕ್ರೀಡಾಪಟುಗಳು ಭಾನುವಾರ ಬೆಂಬಲ ವ್ಯಕ್ತಪಡಿಸಿದ್ದಾರೆ.
Published: 29th May 2023 10:56 AM | Last Updated: 29th May 2023 02:19 PM | A+A A-

ಭಾನುವಾರ ಫ್ರೀಡಂ ಪಾರ್ಕ್‌ನಲ್ಲಿ ಮಾಜಿ ಅಥ್ಲೀಟ್ ರೀತ್ ಅಬ್ರಹಾಂ ಮತ್ತು ಇತರರು ಕುಸ್ತಿಪಟುಗಳಿಗೆ ಬೆಂಬಲ ವ್ಯಕ್ತಪಡಿಸಿದರು.
ಬೆಂಗಳೂರು: ಜಂತರ್ ಮಂತರ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ಸಂಸದ ಮತ್ತು ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಅವರ ಲೈಂಗಿಕ ಕಿರುಕುಳದ ವಿರುದ್ಧ ಹೋರಾಟ ನಡೆಸುತ್ತಿರುವ ಕುಸ್ತಿಪಟುಗಳಿಗೆ ರಾಜ್ಯದ ಕ್ರೀಡಾಭಿಮಾನಿಗಳು ಹಾಗೂ ಮಾಜಿ ಕ್ರೀಡಾಪಟುಗಳು ಭಾನುವಾರ ಬೆಂಬಲ ವ್ಯಕ್ತಪಡಿಸಿದ್ದಾರೆ.
ನಗರದ ಫ್ರೀಡಂ ಪಾರ್ಕ್ ನಲ್ಲಿ ಒಗ್ಗೂಡಿದ ರಾಜ್ಯದ ಮಾಜಿ ಕ್ರೀಡಾಪಡುಗಳು, ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಬೆಂಬಲ ವ್ಯಕ್ತಪಡಿಸಿದರು.
ಬ್ರಿಜ್ ಭೂಷಣ್ ವಿರುದ್ಧ ಕೂಡಲೇ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಶಬೇಕು. ಅವರನ್ನು ಬಂಧನಕ್ಕೊಳಪಡಿಸಬೇಕು. ಈ ಕುರಿತ ತನಿಖಾ ವರದಿಯನ್ನು ಸಾರ್ವಜನಿಕಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈಜುಗಾರ್ತಿ ಮತ್ತು ಅರ್ಜುನ ಪ್ರಶಸ್ತಿ ವಿಜೇತೆ ನಿಶಾ ಮಿಲ್ಲೆಟ್ ಮಾತನಾಡಿ, ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರು ಭಾರತದ ಹೆಮ್ಮೆಯಾಗಿದ್ದು, ಯಾವುದೇ ಕ್ರೀಡಾಪಟು ಅಥವಾ ಮಹಿಳೆಗೆ ಇಂತಹ ಪರಿಸ್ಥಿತಿಗಳು ಬರಬಾರದು. ಕ್ರೀಡಾ ಕ್ಷೇತ್ರಗಳಲ್ಲಿ ಇಂತಹದ್ದಕ್ಕೆ ಅವಕಾಶ ನೀಡಬಾರದು. ಅಪರಾಧಿಗಳನ್ನು ಕೂಡಲೇ ಬಂಧನಕ್ಕೊಳಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ನೂತನ ಸಂಸತ್ ಭವನದ ಹೊರಗೆ ಪ್ರತಿಭಟನೆ: ಕುಸ್ತಿಪಟುಗಳು ಸೇರಿ ಹಲವರು ವಶಕ್ಕೆ
ಸ್ಟಾರ್ ಅಥ್ಲೀಟ್ ರೀತ್ ಅಬ್ರಹಾಂ ಅವರು ಮಾತನಾಡಿ, ಪ್ರತಿಭಟಿಸುತ್ತಿರುವ ಕುಸ್ತಿಪಟುಗಳು ದೇಶಕ್ಕೆ ಕೀರ್ತಿ ತಂದಿದ್ದು, ಪ್ರತಿಯೊಬ್ಬ ಭಾರತೀಯರು ಮುಂದೆ ಬಂದು ಅವರನ್ನು ಬೆಂಬಲಿಸಬೇಕು ಎಂದು ಹೇಳಿದ್ದಾರೆ.
ಈ ನಡುವೆ ನೂತನ ಸಂಸತ್ ಭವನಕ್ಕೆ ಘೇರಾವ್ ಹಾಕಲು ಹೊರಟ ಕುಸ್ತಿಪಟುಗಳನ್ನು ವಶಕ್ಕೆ ಪಡೆದ ಪೊಲೀಸರ ಕ್ರಮವನ್ನುಲೇಖಕ-ಇತಿಹಾಸಕಾರ ರಾಮಚಂದ್ರ ಗುಹಾ ಅವರು ಖಂಡಿಸಿದ್ದಾರೆ.
ಇತರ ಕ್ರೀಡಾಪಟುಗಳು ಕುಸ್ತಿಪಟುಗಳಿಗೆ ಬೆಂಬಲ ವ್ಯಕ್ತಪಡಿಸಬೇಕು.ಇದು ಕೇವಲ ಒಂದು ನಿರ್ದಿಷ್ಟ ಕ್ರೀಡೆಗೆ ಸಂಬಂಧಿಸಿದ್ದಲ್ಲ, ಕ್ರೂರತೆಯ ಹೊರತಾಗಿಯೂ ಹಿಂಸಾಚಾರವನ್ನು ಆಶ್ರಯಿಸದ ಅವರ ಧೈರ್ಯ ಮತ್ತು ಶೌರ್ಯವನ್ನು ಜನರು ಮೆಚ್ಚಬೇಕು. ಸರ್ಕಾರವು ಕ್ರೀಡಾಪಟುಗಳನ್ನು ರಕ್ಷಿಸುವ ಬದಲು ಅಪರಾಧಿಗಳನ್ನು ರಕ್ಷಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಹೊಸ ಸಂಸತ್ ಭವನದ ಒಳಗೆ ಆರೋಪಿ ಬಿಜೆಪಿ ಸಂಸದ ಬ್ರಿಜ್ ಭೂಷಣ್, ಹೊರಗೆ ಕುಸ್ತಿಪಟುಗಳ ಬಂಧನ!
ದೇಶಕ್ಕೆ ಚಿನ್ನದ ಪದಕಗಳನ್ನು ಗೆದ್ದು ತಂದ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆ ನ್ಯಾಯಯುತವಾಗಿದೆ. ಆದರೆ ಸರಕಾರ ಕುಸ್ತಿಪಟುಗಳನ್ನು ಕಡೆಗಣಿಸುತ್ತಿರುವ ಖಂಡನೀಯ ಎಂದು ಅವರು ಟೀಕಿಸಿದರು.
ವನ್ಯಜೀವಿ ಕಾರ್ಯಕರ್ತ ಜೋಸೆಫ್ ಹೂವರ್ ಮಾತನಾಡಿ, ಸಂಸದ ಮತ್ತು ಕುಸ್ತಿ ಅಸೋಸಿಯೇಶನ್ ಅಧ್ಯಕ್ಷ ಬ್ರಿಜ್ ಬೂಷನ್ ಸಿಂಗ್ ಅವರನ್ನು ತಕ್ಷಣ ಬಂಧಿಸಬೇಕು. ವಿಚಾರಣೆಯ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಲೈಂಗಿಕ ಕಿರುಕುಳದ ವಿರುದ್ಧ ದೂರುಗಳನ್ನು ದಾಖಲಿಸಲು ಕ್ರೀಡಾ ಫೆಡರೇಶನ್‍ಗಳಲ್ಲಿ ಸಮಿತಿಗಳನ್ನು ಸ್ಥಾಪಿಸಲು ಕಾನೂನು ಅಥವಾ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಬೇಕಾಗಿದೆ ಎಂದರು.