ಬೆಂಗಳೂರು: ಆಪ್ತ ಸಹಾಯಕನಿಂದ ವಂಚನೆಗೊಳಗಾದ ವೈದ್ಯ!

ನಗರ ಮೂಲದ ವೈದ್ಯರೊಬ್ಬರು, ತನ್ನ ಮಾಜಿ ಆಪ್ತ ಸಹಾಯಕನಿಂದ ವಂಚನೆಗೊಳಗಾಗಿದ್ದು, ಕಷ್ಟಪಟ್ಟು ಸಂಪಾದಿಸಿದ ಆಸ್ತಿಯನ್ನು ಮರು ಪಡೆಯಲು ಠಾಣೆ ಮೆಟ್ಟಿಲೇರಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರ ಮೂಲದ ವೈದ್ಯರೊಬ್ಬರು, ತನ್ನ ಮಾಜಿ ಆಪ್ತ ಸಹಾಯಕನಿಂದ ವಂಚನೆಗೊಳಗಾಗಿದ್ದು, ಕಷ್ಟಪಟ್ಟು ಸಂಪಾದಿಸಿದ ಆಸ್ತಿಯನ್ನು ಮರು ಪಡೆಯಲು ಠಾಣೆ ಮೆಟ್ಟಿಲೇರಿದ್ದಾರೆ.

ಕೋರಮಂಗಲ 6ನೇ ಬ್ಲಾಕ್ ನಿವಾಸಿ ಡಾ. ಐ.ನವೀನ್ ಕುಮಾರ್ ವಂಚನೆಗೊಳಗಾದ ವೈದ್ಯ. ಇವರಿಗೆ ಹೊಂಗಸಂದ್ರದಲ್ಲಿ ಮೂರು ಅಂತಸ್ತಿನ ವಸತಿ ಕಟ್ಟಡವಿದ್ದು, ಅದರಲ್ಲಿ ಎರಡು ಮನೆಗಳು ಖಾಲಿಯಾಗಿತ್ತು. ಕೋವಿಡ್ ಸಾಂಕ್ರಾಮಿಕ ಮತ್ತಿತರ ಕಾರಣಗಳಿಂದ ಅವರು ಆಸ್ತಿ ಬಗ್ಗೆ ನಿರ್ಲಕ್ಷಿಸಿದ್ದರು.  

ಮೂರು ವರ್ಷಗಳ ನಂತರ ಕಟ್ಟಡಕ್ಕೆ ಭೇಟಿ ನೀಡಿದಾಗ ಎರಡೂ ಮನೆಗಳನ್ನು ಆಕ್ರಮಿಸಿಕೊಂಡಿರುವುದನ್ನು ಕಂಡುಬಂದಿದೆ. ನಂತರ ಬಾಡಿಗೆದಾರರನ್ನು ವಿಚಾರಿಸಿದಾಗ ಮಾಜಿ ಆಪ್ತ ಸಹಾಯಕ ರವಿಕುಮಾರ್ ವೈದ್ಯನಂತೆ ನಟಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಎರಡು ಫ್ಲಾಟ್‌ಗಳನ್ನು ಬಾಡಿಗೆಗೆ ಪಡೆದಿರುವುದು ಕಂಡುಬಂದಿದೆ. ಗುತ್ತಿಗೆ ಒಪ್ಪಂದವನ್ನು ಪರಿಶೀಲಿಸಿದಾಗ ನಕಲಿ ಸಹಿ ನೋಡಿ ಆಘಾತಕ್ಕೊಳಗಾಗಿದ್ದಾರೆ.  ಬಾಡಿಗೆದಾರರು ಆತನೇ ನಿಜವಾದ ಮಾಲೀಕನೆಂದು ನಂಬಲು ನಿರಾಕರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದಾಗ ನವೀನ್ ಬಂಡೆಪಾಳ್ಯ ಠಾಣೆಗೆ ತೆರಳಿ ರವಿಕುಮಾರ್ ಹಾಗೂ ಬಾಡಿಗೆದಾರರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದಾರೆ.

ಆರೋಪಿಯು 2020 ರಿಂದ ಏಪ್ರಿಲ್ 2023 ರವರೆಗೆ ಇಬ್ಬರು ಬಾಡಿಗೆದಾರರಿಗೆ ಮನೆಗಳನ್ನು ಗುತ್ತಿಗೆಗೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ವಿವರಣೆ ಕೋರಿ ಇಬ್ಬರು ಬಾಡಿಗೆದಾರರಿಗೆ ನೊಟೀಸ್ ನೀಡಲಾಗಿದೆ ಎಂದು ತನಿಖೆ ನಡೆಸುತ್ತಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com