ಕೊಡಗಿನಲ್ಲಿ ಚಿರತೆ ಹಾವಳಿ: ಮನೆ ಮುಂದೆ ಮಲಗಿದ್ದ 3 ನಾಯಿ ಮರಿಗಳ ಸಾವು, ಸಿಸಿಟಿವಿಯಲ್ಲಿ ದೃಶ್ಯ ಸೆರೆ!

ಕರ್ನಾಟಕದ ಪ್ರವಾಸಿಗರ ಸ್ವರ್ಗ ಮಡಿಕೇರಿಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಕೊಡಗಿನಲ್ಲಿ ಚಿರತೆ ದಾಳಿಯಲ್ಲಿ ಮನೆ ಮುಂದೆ ಮಲಗಿದ್ದ ಮೂರು ನಾಯಿಮರಿಗಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಚಿರತೆ ದಾಳಿ ದೃಶ್ಯ
ಚಿರತೆ ದಾಳಿ ದೃಶ್ಯ

ಮಡಿಕೇರಿ: ಕರ್ನಾಟಕದ ಪ್ರವಾಸಿಗರ ಸ್ವರ್ಗ ಮಡಿಕೇರಿಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಕೊಡಗಿನಲ್ಲಿ ಚಿರತೆ ದಾಳಿಯಲ್ಲಿ ಮನೆ ಮುಂದೆ ಮಲಗಿದ್ದ ಮೂರು ನಾಯಿಮರಿಗಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ದಕ್ಷಿಣ ಕೊಡಗಿನ ಬೆಳೆಲೆಯ ಮಲೂರಿನ ಮನೆಯೊಂದರ ಬಳಿ ರಾತ್ರಿ ಈ ಘಟನೆ ನಡೆದಿದ್ದು, ಮನೆ ಮುಂದೆ ಮಲಗಿದ್ದ ನಾಯಿ ಮರಿ ಮೇಲೆ ಚಿರತೆಯೊಂದು ದಾಳಿ ಮಾಡಿ ಕೊಂದು ಹಾಕಿದೆ. ಈ ಕುರಿತ ದೃಶ್ಯಾವಳಿಗಳು ಮನೆಗೆ ಹಾಕಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.

ಬೆಳೆಲೆಯಲ್ಲಿ ಚಿರತೆ ದಾಳಿಗೆ ಒಂದಲ್ಲ ಮೂರು ನಾಯಿ ಮರಿಗಳು ಸಾವನ್ನಪ್ಪಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಅಲ್ಲದೆ ಚಿರತೆ ಹಾವಳಿಯಿಂದಾಗಿ ಈ ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿದ್ದು, ಜನರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಜೀವನ ನಡೆಸಬೇಕಿದೆ. ಕೂಡಲೇ ಅರಣ್ಯ ಇಲಾಖೆ ಚಿರತೆ ಸೆರೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com