ಬೆಳಗಾವಿ: ಸುವರ್ಣಸೌಧದಲ್ಲಿ ತಮ್ಮ ನೆನಪಿಗಾಗಿ ಗಿಡ ನೆಡಲಿದ್ದಾರೆ 300 ಶಾಸಕರು!

ಬೆಳಗಾವಿಯಲ್ಲಿ ಸೋಮವಾರದಿಂದ ಆರಂಭವಾಗಲಿರುವ ಜಂಟಿ ವಿಧಾನಮಂಡಲದ ಅಧಿವೇಶನದಲ್ಲಿ  300 ಶಾಸಕರು ತಲಾ ಒಂದೊಂದು ಗಿಡ ನೆಡಲಿದ್ದಾರೆ ಎಂದು ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ.
ಯು.ಟಿ ಖಾದರ್
ಯು.ಟಿ ಖಾದರ್

ಬೆಂಗಳೂರು: ಬೆಳಗಾವಿಯಲ್ಲಿ ಸೋಮವಾರದಿಂದ ಆರಂಭವಾಗಲಿರುವ ಜಂಟಿ ವಿಧಾನಮಂಡಲದ ಅಧಿವೇಶನದಲ್ಲಿ  300 ಶಾಸಕರು ತಲಾ ಒಂದೊಂದು ಗಿಡ ನೆಡಲಿದ್ದಾರೆ ಎಂದು ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ.

ಈ ಸಂಬಂಧ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಯು ಟಿ ಖಾದರ್, ಬೆಳಗಾವಿಯ ಸುವರ್ಣ ವಿಧಾನಸೌಧದ ಸುತ್ತಮುತ್ತ 300 ಸಸಿಗಳನ್ನು ನೆಡಲು ವ್ಯವಸ್ಥೆ ಮಾಡಿದ್ದೇವೆ. ಪ್ರತಿ ಸಸಿಯು ಶಾಸಕರ ಹೆಸರಿನೊಂದಿಗೆ ಸೊಗಸಾದ ವಿನ್ಯಾಸದ ಫಲಕವನ್ನು ಹೊಂದಿರುತ್ತದೆ ಎಂದಿದ್ದಾರೆ.

ಇದು ಶಾಶ್ವತ ಸ್ಮಾರಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಶಾಸಕರು ಹಲವು ವರ್ಷಗಳ ನಂತರವೂ ಬಂದು ಈ ಕ್ಷಣಗಳನ್ನು ನೆನಪಿಸಿಕೊಳ್ಳಬಹುದು. ಸರ್ಕಾರಿ ನರ್ಸರಿಯಿಂದ ಸಸಿಗಳನ್ನು ಆಯ್ಕೆ ಮಾಡಿ ಸುವರ್ಣ ವಿಧಾನಸೌಧದ ಬಳಿಯ ಜಾಗದಲ್ಲಿ ಸಂಗ್ರಹಿಸಲಾಗುವುದು, ಕಾರ್ಯದರ್ಶಿ ಸಿಬ್ಬಂದಿ ಸಸಿಗಳನ್ನು ನೆಡಲು ಸ್ಥಳ ಗುರುತಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಎಲ್ಲಾ 34 ಸಚಿವರು ಮತ್ತು ಶಾಸಕರು  ಹಾಗೂ  ಪರಿಷತ್ತಿನ 75 ಮತ್ತು ವಿಧಾನಸಭೆಯಿಂದ ಆಯ್ಕೆಯಾದ 225 ಶಾಸಕರು ಸಸಿಗಳನ್ನು ನೆಡಲಿದ್ದಾರೆ. ಸುವರ್ಣ ವಿಧಾನಸೌಧವನ್ನು ಹಸಿರಾಗಿಸುವ ಕ್ರಮಗಳಲ್ಲಿ ಇದೂ ಒಂದು ಎಂದು ಮಾಹಿತಿ ನೀಡಿದ್ದಾರೆ.

ಈ ಅಧಿವೇಶನದಿಂದ ಇಡೀ ಸುವರ್ಣ ವಿಧಾನಸೌಧ ಶಾಶ್ವತವಾಗಿ ಬೆಳಗಲಿದೆ ಎಂದು ಖಾದರ್ ಹೇಳಿದರು. ಈ ಹಿಂದೆ ಅಧಿವೇಶನದ ಸಮಯದಲ್ಲಿ  ಮಾತ್ರ ಕಟ್ಟಡವನ್ನು ಬೆಳಗಿಸಲು  1.25 ಕೋಟಿ ರೂಪಾಯಿಗಳನ್ನು  ಖರ್ಚು ಮಾಡಲಾಗುತ್ತಿತ್ತು. ಈಗ, ಲೇಸರ್  ಬೆಳಕಿನಿಂದ ವಾರಾಂತ್ಯದಲ್ಲಿ ಸುವರ್ಣ ಸೌಧ ಜಗಮಗಿಸಲಿದೆ.

ಬೆಳಗಾವಿ ನಗರದಿಂದ ಕಾಫಿ ತರಲು ಹೋದ ಸಿಬ್ಬಂದಿ ಅದೇ ದಿನ ಹಿಂತಿರುಗುವುದಿಲ್ಲ ಎಂದು ಆಗಾಗ್ಗೆ ಹೇಳಲಾಗುತ್ತಿದೆ, ಹೀಗಾಗಿ ಸಂಪೂರ್ಣ ಫುಡ್ ಕೋರ್ಟ್ ಸ್ಥಾಪಿಸಲಾಗುವುದು ಎಂದು ಖಾದರ್ ಹೇಳಿದರು.  ಇದರಲ್ಲಿ ನಾವು ಹಟ್ಟಿ ಕಾಪಿ ಮತ್ತು ಇತರ ಸೌಲಭ್ಯಗಳು ಇರಲಿವೆ ಎಂದು ಹೇಳಿದ್ದಾರೆ.

ಬೆಂಗಳೂರಿನಿಂದ ಬೆಳಗಾವಿಗೆ ಬೃಹತ್ ಆಡಳಿತ ಯಂತ್ರ ತೆರಳಲು ಸಿದ್ಧತೆ ಆರಂಭವಾಗಿದೆ. ವಾರಾಂತ್ಯದಲ್ಲಿ ಹೆಚ್ಚಿನ ಸಚಿವಾಲಯದ ಸಿಬ್ಬಂದಿ ಹೊರಡುತ್ತಾರೆ, ಆದರೆ ಬೆರಳೆಣಿಕೆಯಷ್ಟು ಜನರು ಈಗಾಗಲೇ ಬೆಳಗಾವಿ ತಲುಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com