ಬಿಜೆಪಿ ದುಷ್ಕೃತ್ಯಗಳಲ್ಲಿ ತೊಡಗಿದೆ, ಕೋಮುಗಲಭೆಯನ್ನು ಪ್ರಚೋದಿಸುತ್ತದೆ: ಸಚಿವ ರಾಮಲಿಂಗಾ ರೆಡ್ಡಿ
ಬಿಜೆಪಿ ವೇಷ ಬದಲಿಸಿಕೊಂಡು ದುಷ್ಕೃತ್ಯಗಳಲ್ಲಿ ತೊಡಗುತ್ತದೆ. ಕೋಮುಗಲಭೆಯನ್ನು ಪ್ರಚೋದಿಸುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
Published: 04th October 2023 06:37 PM | Last Updated: 04th October 2023 08:02 PM | A+A A-

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ
ಶಿವಮೊಗ್ಗ: ಬಿಜೆಪಿ ವೇಷ ಬದಲಿಸಿಕೊಂಡು ದುಷ್ಕೃತ್ಯಗಳಲ್ಲಿ ತೊಡಗುತ್ತದೆ. ಕೋಮುಗಲಭೆಯನ್ನು ಪ್ರಚೋದಿಸುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ಸಚಿವರ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರದ ವೈಫಲ್ಯ ಮರೆಮಾಚಲು ರಾಮಲಿಂಗಾರೆಡ್ಡಿ ಈ ರಾಜಕೀಯ ಪ್ರೇರಿತ ಹೇಳಿಕೆ ನೀಡಿದ್ದಾರೆ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಅಧಿಕಾರದಲ್ಲಿ ಇಲ್ಲದೇ ಇದ್ದಾಗ ಹಿಂಸಾಚಾರ, ಕೋಮು ಹಿಂಸಾಚಾರವನ್ನು ಪ್ರಚೋದಿಸುತ್ತದೆ. ಕಾಂಗ್ರೆಸ್ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತದೆ. ಮೊದಲಿನಿಂದಲೂ ಇದು ಬಿಜೆಪಿಯ ಕಾರ್ಯವೈಖರಿಯಾಗಿದೆ ಎಂದು ಶಿವಮೊಗ್ಗದಲ್ಲಿ ಈದ್ ಮಿಲಾದ್ ವೇಳೆ ನಡೆದ ಗಲಭೆ ಪ್ರಕರಣದ ಬಗ್ಗೆ ಮಾತನಾಡಿರುವ ಸಚಿವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಕುಮ್ಮಕ್ಕಿನಿಂದಲೇ ಶಿವಮೊಗ್ಗ ಗಲಭೆ ನಡೆದಿದೆ: ಶೋಭಾ ಕರಂದ್ಲಾಜೆ ಆರೋಪ
ಬಿಜೆಪಿ ಅಧಿಕಾರದಲ್ಲಿದ್ದಾಗ ನೈತಿಕ ಪೊಲೀಸ್‌ಗಿರಿಯನ್ನು ಬೆಂಬಲಿಸುತ್ತದೆ, ಉದ್ವಿಗ್ನತೆಯನ್ನು ಉಂಟುಮಾಡುತ್ತದೆ ಮತ್ತು ಹಲ್ಲೆ ಮತ್ತು ಕೋಮುಗಲಭೆಯ ಘಟನೆಗಳ ಹಿಂದೆ ಅವರ ಕೈವಾಡವಿದೆ ಎಂದು ಆರೋಪಿಸಿದರು.
"ಬಿಜೆಪಿ ಕಾರ್ಯಕರ್ತರು ಮಾರುವೇಷದಲ್ಲಿ ತಮ್ಮ ರೂಪ ಮತ್ತು ಹೆಸರನ್ನು ಬದಲಾಯಿಸುವ ಮೂಲಕ ಕಿಡಿಗೇಡಿತನದಲ್ಲಿ ತೊಡಗುತ್ತಾರೆ. ಇದು ಅವರ ಹುಟ್ಟಿನಿಂದ ಅವರ ಸ್ವಭಾವ, ಅದು ಅವರ ರಕ್ತದಲ್ಲಿದೆ" ಎಂದು ರಾಮಲಿಂಗಾ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ ಗಲಭೆಗೆ ಸಿದ್ದರಾಮಯ್ಯನವರೇ ಕಾರಣ, ರಾಕ್ಷಸರ ರಾಜ್ಯಭಾರ ಈಗ ನಡೆಯುತ್ತಿದೆ: ಸಂಸದ ಪ್ರತಾಪ್ ಸಿಂಹ
ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರ ಹೇಳಿಕೆ ಸಂಪೂರ್ಣವಾಗಿ ತಪ್ಪುದಾರಿಗೆಳೆಯುವ ಆರೋಪವಾಗಿದೆ ಎಂದು ಹೇಳಿದ್ದಾರೆ. ‘‘ಗಲಭೆಕೋರರನ್ನು ಬಂಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿರುವ ಸರ್ಕಾರ ಗಲಭೆ ಅಂತಹವರಿಗೆ ಈ ರೀತಿ ಕ್ಲೀನ್ ಚಿಟ್ ನೀಡಿದರೆ ರಾಜ್ಯಾದ್ಯಂತ ಇಂತಹ ಘಟನೆಗಳು ನಡೆಯುತ್ತವೆ. ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇಂತಹ ರಾಜಕೀಯ ಹೇಳಿಕೆಗಳನ್ನು ನೀಡುತ್ತಿದ್ದಾರೆ,’’ ಎಂದು ಬೊಮ್ಮಾಯಿ ಆರೋಪಿಸಿದ್ದಾರೆ.
ಇಂತಹ ಕೆಳಮಟ್ಟಕ್ಕೆ ಇಳಿಯಬೇಡಿ ಎಂದು ಹೇಳಿರುವ ಬಿಜೆಪಿ ಹಿರಿಯ ಮುಖಂಡ ಸಿಟಿ ರವಿ, ‘ನಿಮಗೆ ಅಧಿಕಾರವಿದೆ ಹಾಗೆಯೇ... ಸಿಸಿಟಿವಿ ದೃಶ್ಯಾವಳಿಯೂ ಸಾಕ್ಷ್ಯವಾಗಿದೆ’ ಎಂದು ಹೇಳಿದ್ದಾರೆ.