ಕ್ಷುಲ್ಲಕ ವಿಚಾರಕ್ಕೆ ಕಾಲೇಜಿನಲ್ಲಿ ಗುಂಪುಗಳ ನಡುವೆ ಮಾರಾಮಾರಿ: ವಿದ್ಯಾರ್ಥಿಗೆ ಚೂರಿ ಇರಿತ

ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಈ ವೇಳೆ ವಿದ್ಯಾರ್ಥಿಯೋರ್ವನಿಗೆ ಚೂರಿ ಇರಿದಿರುವ ಘಟನೆಯೊಂದು ಕಾಡುಗೊಂಡನಹಳ್ಳಿಯ ಐಟಿಐ ಕಾಲೇಜಿನ ಪ್ರಯೋಗಾಲಯದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಈ ವೇಳೆ ವಿದ್ಯಾರ್ಥಿಯೋರ್ವನಿಗೆ ಚೂರಿ ಇರಿದಿರುವ ಘಟನೆಯೊಂದು ಕಾಡುಗೊಂಡನಹಳ್ಳಿಯ ಐಟಿಐ ಕಾಲೇಜಿನ ಪ್ರಯೋಗಾಲಯದಲ್ಲಿ ನಡೆದಿದೆ.

ಆಗಸ್ಟ್ 28 ರಂದು ಘಟನೆ ನಡೆದಿದೆ. ಕಾಲೇಜಿನ ಲ್ಯಾಬ್ ನಲ್ಲಿ ಎರಡು ಗುಂಪುಗಳ ನಡುವೆ ಕ್ಷುಲ್ಲಕ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದೆ. ಬಳಿಕ ಕಾಲೇಜಿನ ಕ್ಯಾಂಪಸ್ ಹೊರಗಿರುವ ಉದ್ಯಾನವನದಲ್ಲಿ ವಿದ್ಯಾರ್ಥಿಗಳು ಕೈ-ಕೈ ಮಿಲಾಯಿಸಿದ್ದಾರೆ. ಈ ವೇಳೆ ಅಹ್ಮದ್ ಎಂಬ ವಿದ್ಯಾರ್ಥಿಗೆ ಕೆಲವರು ಚೂರಿ ಇರಿದಿದ್ದಾರೆ.

ಅತೀವ್ರ ರಕ್ತಸ್ರಾವದಿಂದ ಅಹ್ಮದ್ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ವೈದ್ಯರು ತಿಳಿಸಿದ್ದಾರೆ.

ಘಟನೆ ಸಬಂಧ ಐಪಿಸಿ ಸೆಕ್ಷನ್ 324 (ಸ್ವಯಂಪ್ರೇರಿತವಾಗಿ ಆಯುಧ ಬಳಸಿ ನೋವುಂಟು ಮಾಡುವುದು), 341, ಮತ್ತು 504 ಅಡಿಯಲ್ಲಿ ಗಂಗಮ್ಮಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com