'ಬ್ರಾಂಡ್ ಬೆಂಗಳೂರು' ಪರಿಕಲ್ಪನೆ: ನಗರಕ್ಕೆ ಪ್ರವಾಸಿಗರನ್ನು ಆಕರ್ಷಿಸಲು 'ಹೂವು ಹಬ್ಬ', 'ಪೇಟೆ ಹಬ್ಬ' ಆಯೋಜನೆ!

ಐಎಎಸ್ ಅಧಿಕಾರಿ ಜಯರಾಮ್ ರಾಯಪುರ ನೇತೃತ್ವದ ‘ವೈಬ್ರೆಂಟ್ ಬೆಂಗಳೂರು’ ಸಮಿತಿಯು ತನ್ನ ಪರಿಕಲ್ಪನೆಯ ಅಂತಿಮ ಕರಡು ಪ್ರತಿಯನ್ನು ಹೊರತಂದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಡಿಯಲ್ಲಿ ಸಾಂಸ್ಕೃತಿಕ ವಿಭಾಗವನ್ನು ಪ್ರಸ್ತಾಪಿಸಿದೆ.
ಬಿಬಿಎಂಪಿ ಕಚೇರಿ(ಸಂಗ್ರಹ ಚಿತ್ರ)
ಬಿಬಿಎಂಪಿ ಕಚೇರಿ(ಸಂಗ್ರಹ ಚಿತ್ರ)

ಬೆಂಗಳೂರು: ಐಎಎಸ್ ಅಧಿಕಾರಿ ಜಯರಾಮ್ ರಾಯಪುರ ನೇತೃತ್ವದ ‘ವೈಬ್ರೆಂಟ್ ಬೆಂಗಳೂರು’ ಸಮಿತಿಯು ತನ್ನ ಪರಿಕಲ್ಪನೆಯ ಅಂತಿಮ ಕರಡು ಪ್ರತಿಯನ್ನು ಹೊರತಂದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಡಿಯಲ್ಲಿ ಸಾಂಸ್ಕೃತಿಕ ವಿಭಾಗವನ್ನು ಪ್ರಸ್ತಾಪಿಸಿದೆ.

ಬೆಂಗಳೂರಿನಲ್ಲಿ ಸಾಂಸ್ಕೃತಿಕ ಕ್ಯಾಲೆಂಡರ್ ಹೊರತುಪಡಿಸಿ ಎಲ್ಲವೂ ಇದೆ, ಆದ್ದರಿಂದ ಸಮಿತಿಯು ಋತುಗಳು ಮತ್ತು ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಸಾಂಸ್ಕೃತಿಕ ಕ್ಯಾಲೆಂಡರ್ ಅನ್ನು ಹೊಂದಲು ಪ್ರಸ್ತಾಪಿಸಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಜಯರಾಮ್ ರಾಯ್ ಪುರ ತಿಳಿಸಿದ್ದಾರೆ.

ಜನವರಿಯಿಂದ ಮಾರ್ಚ್ ವರೆಗೆ ಕೆರೆ ಮತ್ತು ಹೂವಿನ ಉತ್ಸವದ ಮೇಲೆ ಕೇಂದ್ರೀಕರಿಸಲಾಗುತ್ತದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 150ಕ್ಕೂ ಹೆಚ್ಚು ಕೆರೆಗಳಿರುವುದರಿಂದ ಕೆರೆ ಉತ್ಸವ ನಡೆಯಲಿದೆ. ಮಾರ್ಚ್- ವಸಂತಕಾಲದ ಆರಂಭದಲ್ಲಿ, ಹೂವುಗಳ ಹಬ್ಬವಾದ ‘ಹೂವು ಹಬ್ಬ’ಕ್ಕೆ ಸಾಕ್ಷಿಯಾಗಲಿದೆ, ಏಕೆಂದರೆ ನಗರದಲ್ಲಿ 1,000 ಕ್ಕೂ ಹೆಚ್ಚು ಉದ್ಯಾನವನಗಳಿವೆ ಮತ್ತು ಅದನ್ನು ಹೊರತುಪಡಿಸಿ, ಎಲ್ಲೆಲ್ಲಿ ಮರಗಳು ಮತ್ತು ಸಸಿಗಳು ಇವೆ, ಅಲ್ಲಿ ನೀವು ವಿವಿಧ ಹೂವುಗಳನ್ನು ನೋಡುತ್ತೀರಿ ಎಂದು ಹೇಳಿದ್ದಾರೆ.

ಅದೇ ರೀತಿ ಅಕ್ಟೋಬರ್‌ನಲ್ಲಿ ಹಳೆ ಮತ್ತು ಹೊಸ ಮಾರುಕಟ್ಟೆಗಳ ರಚನೆಯನ್ನು 'ಪೇಟೆ ಹಬ್ಬ' ಪರಿಕಲ್ಪನೆಯಡಿಯಲ್ಲಿ ಆಚರಿಸಲಾಗುವುದು.' ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಬೆಂಗಳೂರಿನ ಪ್ರತಿಯೊಂದು ಪ್ರದೇಶದಲ್ಲಿ ಆಚರಿಸುವ ಹಬ್ಬಗಳನ್ನು ಗುರುತಿಸಿ ಊರು ಮತ್ತು ಗ್ರಾಮದೇವತೆಗಳ ಹಬ್ಬ ನಡೆಯಲಿದೆ ಎಂದರು.

ಕಲೆ, ಸಾಹಿತ್ಯ, ಕೆರೆ ಉತ್ಸವಗಳು, ಪಾರಂಪರಿಕ ನಡಿಗೆಗಳು ಮತ್ತು ಸಾಂಪ್ರದಾಯಿಕ ಮಾರುಕಟ್ಟೆಗಳು, ಪ್ರವಾಸಿಗರನ್ನು ಸೆಳೆಯುವ ಅಪಾರ ಸಾಮರ್ಥ್ಯವನ್ನು ಹೊಂದಿರುವ ನಗರದ ಎಲ್ಲಾ ಪ್ರಮುಖ ಅಂಶಗಳು ಪ್ರಾಮುಖ್ಯತೆಯನ್ನು ಪಡೆಯುತ್ತವೆ. ‘ಬ್ರಾಂಡ್ ಬೆಂಗಳೂರು’ ಪರಿಕಲ್ಪನೆಯ ಭಾಗವಾದ ‘ವೈಬ್ರೆಂಟ್ ಬೆಂಗಳೂರು’ಗೆ ಇದೇ ಬ್ರಾಂಡ್ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

ಇದಲ್ಲದೆ, ಈ ಪರಿಕಲ್ಪನೆಯು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕಲ್ಪನೆಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪೂರ್ಣ ಬೆಂಬಲವಿದೆ ಎಂದು ಅವರು ಹೇಳಿದರು. ವಿವಿಧ ಕ್ಷೇತ್ರಗಳ ತಜ್ಞರನ್ನೊಳಗೊಂಡ ಸಮಿತಿಯು ಅಂತಿಮ ಕರಡು ಪ್ರತಿಯನ್ನು ಹೊರತರುವ ಮೊದಲು ಸಾರ್ವಜನಿಕರ ಸಲಹೆಗಳ ಮೇಲೆ ಚರ್ಚೆ ನಡೆಸಿತು. ಸಾರ್ವಜನಿಕರಿಂದ ಸುಮಾರು 10,000 ಸಲಹೆಗಳನ್ನು ಸ್ವೀಕರಿಸಲಾಗಿದೆ ಮತ್ತು ಸೃಷ್ಟಿ ಸ್ಕೂಲ್ ಆಫ್ ಆರ್ಟ್, ಡಿಸೈನ್ ಮತ್ತು ಟೆಕ್ನಾಲಜಿ ಸಹಭಾಗಿತ್ವದಲ್ಲಿ ಕರಡು ಸಿದ್ಧಪಡಿಸಲಾಗಿದೆ.

ಈ ಯೋಜನೆ ವೇಗ ಪಡೆಯುವುದನ್ನು ನೋಡಲು ಮತ್ತು ಅವುಗಳನ್ನು ಸರಿಯಾಗಿ ಸಂಘಟಿಸಿ ಕಾರ್ಯಗತಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು, ಬಿಬಿಎಂಪಿಯಲ್ಲಿ ‘ಸಾಂಸ್ಕೃತಿಕ ವಿಭಾಗ' ಸ್ಥಾಪನೆಯನ್ನು ಸಹ ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದರು.

ಇದಲ್ಲದೆ, ನಗರದ ವಿವಿಧ ಮೂಲೆಗಳಲ್ಲಿ ನಾಲ್ಕು ಸಭಾಂಗಣಗಳನ್ನು ಕಲೆಗೆ ಉತ್ತೇಜನ ನೀಡಲು ಮತ್ತು CBD ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಪಾಲಿಕೆಯ ಒಡೆತನದ ಸಾಂಸ್ಕೃತಿಕ ಸಭಾಂಗಣಗಳಲ್ಲಿ ನಡೆಸಲಾಗುವುದು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com