
ಸಂಗ್ರಹ ಚಿತ್ರ
ಶಿವಮೊಗ್ಗ: ತುಂಗಾ ನದಿಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಶಿವಮೊಗ್ಗ ನಗರದ ಕುರುಬರ ಪಾಳ್ಯ ಬಳಿ ನಡೆದಿದೆ.
ಮೃತರನ್ನು 18 ವರ್ಷದ ಫಯಾಜ್ ಅಹ್ಮದ್ ಮತ್ತು 19 ವರ್ಷದ ಅಂಜುಂ ಖಾನ್ ನೀರುಪಾಲಾದ ಯುವಕರಾಗಿದ್ದಾರೆ. ಯುವಕರ ಮೊಬೈಲ್ ಹಾಗೂ ಬಟ್ಟೆಗಳು ನದಿ ದಂಡೆಯ ಮೇಲೆ ಪತ್ತೆಯಾಗಿದೆ.
ಇದನ್ನೂ ಓದಿ: ಕಾವೇರಿ: ತಮಿಳುನಾಡಿಗೆ ಮತ್ತೆ ನೀರು ಬಿಡುವಂತೆ ಕರ್ನಾಟಕಕ್ಕೆ ಪ್ರಾಧಿಕಾರ ಆದೇಶ
ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ದೊಡ್ಡಪೇಟೆ ಠಾಣೆ ಪೊಲೀಸರು ಯುವಕರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.