ಬೆಂಗಳೂರು: ಚಾಮರಾಜಪೇಟೆ ವಿನಾಯಕ ಥಿಯೇಟರ್ ಬಳಿ ಅಗ್ನಿ ಅವಘಡ, 8 ಮನೆ ಬೆಂಕಿಗಾಹುತಿ, ಇಬ್ಬರಿಗೆ ಗಾಯ
ಬೆಂಗಳೂರಿನಲ್ಲಿ ಅಗ್ನಿಅವಘಡವೊಂದು ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ 8 ಮನೆಗಳು ಬೆಂಕಿಗಾಹುತಿಯಾಗಿ ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
Published: 18th September 2023 04:08 PM | Last Updated: 18th September 2023 04:08 PM | A+A A-

ಚಾಮರಾಜಪೇಟೆ ವಿನಾಯಕ ಥಿಯೇಟರ್ ಬಳಿ ಅಗ್ನಿ ಅವಘಡ
ಬೆಂಗಳೂರು: ಬೆಂಗಳೂರಿನಲ್ಲಿ ಅಗ್ನಿಅವಘಡವೊಂದು ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ 8 ಮನೆಗಳು ಬೆಂಕಿಗಾಹುತಿಯಾಗಿ ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಚಾಮರಾಜಪೇಟೆಯ ಆನಂದಪುರದ ವಿನಾಯಕ ಚಿತ್ರಮಂದಿರ(vinayaka theater) ಬಳಿ ಇರುವ ಗೋದಾಮಿನಲ್ಲಿ ಅಗ್ನಿ(Fire) ಅವಘಡ ಸಂಭವಿಸಿದ್ದು, ಗೋದಾಮು ಹಾಗೂ 8 ಶೀಟ್ ಮನೆಗಳು ಬೆಂಕಿಗಾಹುತಿಯಾಗಿವೆ. ಘಟನೆಯಲ್ಲಿ ಒಬ್ಬರಿಗೆ ಗಾಯಗಳಾಗಿದ್ದು, ವಿಷಯ ತಿಳಿದು ಘಟನಾ ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆದಿದೆ.
ಇದನ್ನೂ ಓದಿ: ಮತ್ತೆ ಸುದ್ದಿಯಾದ ಬೆಂಗಳೂರು ಟ್ರಾಫಿಕ್ ಜಾಮ್; ಟ್ರಾಫಿಕ್ ಜ್ಯಾಮ್ ನಲ್ಲೇ ತರಕಾರಿ ಸಿಪ್ಪೆ ಸುಲಿದ ಮಹಿಳೆ: ಫೋಟೋ ವೈರಲ್
ಸಿಲಿಂಡರ್ ಸ್ಫೋಟದಿಂದ ಬೆಂಕಿ
ಗೋದಾಮಿನಲ್ಲಿ ಎರಡು ಸಿಲಿಂಡರ್ಗಳು ಸ್ಫೋಟಗೊಂಡು ಅಗ್ನಿ ದುರಂತ ಸಂಭವಿಸಿದೆ ಎಂದು ಹೇಳಲಾಗಿದ್ದು, ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅಗ್ನಿ ಅವಘಡದಲ್ಲಿ ಗಾಯೊಂಡಿರುವ ಓರ್ವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದುಬಂದಿದೆ.
ಇನ್ನು ಈ ಅಗ್ನಿ ಅವಘಡದ ಬಗ್ಗೆ ಪ್ರತ್ಯಕ್ಷದರ್ಶಿ ಸೈಯ್ಯದ್ ಟಿವಿ9ಗೆ ಪ್ರತಿಕ್ರಿಯಿಸಿದ್ದು, ಸಾಕೆಟ್ ಬೋರ್ಡ್ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಮನೆಯಲ್ಲಿದ್ದ ಮಹಿಳೆಯರು ಬೆಂಕಿ ಹೊತ್ತಿದ್ದ ಬಗ್ಗೆ ಮನೆಯಿಂದ ಹೊರಗೆ ಓಡಿ ಬಂದು ನನಗೆ ಮಾಹಿತಿ ನೀಡಿದರು. ಅಷ್ಟರಲ್ಲಿ ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟದ ಜೊತೆ ಬೆಂಕಿ ಹರಡಿತ್ತು. ತಕ್ಷಣ ಅಗ್ನಿಶಾಮಕ ಕಚೇರಿಗೆ ಕರೆ ಮಾಡಿ ಮಾಹಿತಿ ನೀಡಿದೆ. ಎಲ್ಲರೂ ಹೊರಗೆ ಓಡಿ ಬಂದಿದ್ದರಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ಮಾಹಿತಿ ನೀಡಿದರು.