ಬೆಂಗಳೂರು: ಸಲೂನ್ ನಲ್ಲಿ ಕೆಲಸ ಮಾಡುವ ಸಲುವಾಗಿ ನವದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ 31 ವರ್ಷದ ವ್ಯಕ್ತಿಯೊಬ್ಬರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಯೋಗೀಶ್‌ಕುಮಾರ್ ರೋಜಾನಾ ನಾಪತ್ತೆಯಾಗಿರುವ ವ್ಯಕ್ತಿಯಾಗಿದ್ದಾರೆ. ಈ ಸಂಬಂಧ ಯೋಗೀಶ್ ಸ್ನೇಹಿತ ಅನೀಸ್ ಅವರು ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಯೋಗೀಶ್ ನಗರದ ಕಮ್ಮನಹಳ್ಳಿಯಲ್ಲಿರುವ ತಮ್ಮ ಸ್ನೇಹಿತ ಅನೀಸ್ ಅವರನ್ನು ಭೇಟಿ ಮಾಡಲು ದೆಹಲಿಯಿಂದ ಸೆಪ್ಟೆಂಬರ್ 15 ರಂದು ಟರ್ಮಿನಲ್ 1ಕ್ಕೆ ಬಂದಿದ್ದರು. ಅನೀಸ್ ಸಲೂನ್ ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಇವರ ಸಲೂನ್ ನಲ್ಲಿ ಕೆಲಸ ಮಾಡುವ ಸಲುವಾಗಿ ವ್ಯಕ್ತಿ ನಗರಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.
ಯೋಗೀಶ್ ದೆಹಲಿ ಮೂಲದವರಾಗಿದ್ದು, ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ದೆಹಲಿಯಲ್ಲಿ ಸ್ವಂತ ಸಲೂನ್ ನಡೆಸುತ್ತಿದ್ದ ಅವರಿಗೆ ಬರುತ್ತಿದ್ದ ಆದಾಯ ಅವರಿಗೆ ಸಾಕಾಗುತ್ತಿರಲಿಲ್ಲ. ಕಳೆದ ಮೂರು ವರ್ಷಗಳಿಂದ ಅವರು ನನಗೆ ತಿಳಿದ ವ್ಯಕ್ತಿಯಾಗಿದ್ದರು. ಅವರ ಕೌಶಲ್ಯ ತಿಳಿದಿದ್ದರಿಂದ ಬೆಂಗಳೂರಿನಲ್ಲಿ ಹೆಚ್ಚಿನ ಹಣ ಗಳಿಸಬಹುದು ಎಂದು ತಿಳಿಸಿದ್ದೆ. ಸಲೂನ್ ನಲ್ಲಿ ನೇಮಕ ಮಾಡಿಕೊಳ್ಳುವಂತೆ ಮಾಲೀಕರಿಗೂ ಮನವಿ ಮಾಡಿದ್ದೆ. ಕೆಲಸಕ್ಕೆ ಸೇರಲು ನಗರಕ್ಕೆ ಬಂದಿದ್ದರು.
ಯೋಗೀಶ್ ಮಾನಸಿಕವಾಗಿಯೂ ನೊಂದಿದ್ದ. ನಗರಕ್ಕೆ ಬಂದ ಬಳಿಕ ಕೆಲಸ ಸೇರುವುದಿಲ್ಲ ಎಂದು ಹೇಳುತ್ತಿದ್ದರು. ಅವರ ಪತ್ನಿಯೊಂದಿಗೂ ಮಾತನಾಡಿದ್ದರು. ಬಳಿಕ ಅವರು ದೆಹಲಿಗೆ ವಾಪಸ್ ತೆರಳಲು ಟಿಕೆಟ್ ಕಾಯ್ದಿರಿಸಲು ನಿರ್ಧರಿಸಿದ್ದರು ಆದರೆ, ತಕ್ಷಣಕ್ಕೆ ಟಿಕೆಟ್ ಲಭ್ಯವಾಗಿರಲಿಲ್ಲ. ಮರುದಿನ ಬೆಳಿಗ್ಗೆ (ಸೆಪ್ಟೆಂಬರ್ 16) ಟಿಕೆಟ್ ಬುಕ್ ಆಗಿತ್ತು. ರಾತ್ರಿ ವಿಮಾನ ನಿಲ್ದಾಣದಲ್ಲಿ ಕಾದು ಬೆಳಗಿನ ವಿಮಾನ ಹತ್ತುವುದಾಗಿ ಹೇಳಿದ್ದರು. ನಾನು ಅವರನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟು ಮನೆಗೆ ಹೋಗಿದ್ದೆ. ಆದರೆ, ವಿಮಾನ ಹತ್ತಿಯೇ ಇಲ್ಲ.
ಯೋಗೀಶ್ ಅವರ ಪತ್ನಿ ಪತಿ ಬಂದಿಲ್ಲ ಎಂದು ಹೇಳಿದ್ದರ. ಪತಿಯನ್ನು ಪತ್ತೆ ಹಚ್ಚಲು ಸಹಾಯ ಮಾಡುವಂತೆ ಕೇಳಿದ್ದರು. ಯೋಗೀಶ್ ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ, ಫೋನ್ ಸ್ವಿಚ್ ಆಫ್ ಆಗಿತ್ತು. ಬಳಿಕ ಸಹಾಯಕ್ಕಾಗಿ ವಿಮಾನ ನಿಲ್ದಾಣದ ಪೊಲೀಸರನ್ನು ಸಂಪರ್ಕಿಸಿದ್ದೆ ಮ್ಯಾನ್ ಮಿಸ್ಸಿಂಗ್ ವಿಭಾಗದ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದೇನೆ. ನಿನ್ನೆ ಕೂಡ ಪೊಲೀಸರನ್ನು ಸಂಪರ್ಕಿಸಿದ್ದೆ. ಆದರೆ, ಪೊಲೀಸರು ವಿಮಾನ ನಿಲ್ದಾಣದಿಂದ 20 ಕಿಲೋ ಮೀಟರ್ ದೂರದಲ್ಲಿ ಅವರ ಸಂಪರ್ಕ ಕಡಿತಗೊಂಡಿದೆ ಎಂದು ಹೇಳಿದ್ದರು. ಯೋಗೀಶ್ ವಿಮಾನ ನಿಲ್ದಾಣದಿಂದ ಹೊರಬಂದಿದ್ದು, ಬೆಂಗಳೂರಿನಲ್ಲಿ ಏಲ್ಲೋ ಇದ್ದಾನೆಂಬ ಶಂಕೆಯಿದೆ ಎಂದು ಅನೀಸ್ ಹೇಳಿದ್ದಾರೆ. ಈ ಸಂಬಂಧ ತನಿಖೆ ಮುಂದುವರೆದಿದೆ.
Advertisement