ಹಾಸನದಲ್ಲಿ ಆಲ್ಕೋಹಾಲ್ ಚಾಲೆಂಜ್: ಅರ್ಧಗಂಟೆಯಲ್ಲಿ 900 ಎಂಎಲ್ ಮದ್ಯ ಸೇವಿಸಿದ್ದ ವ್ಯಕ್ತಿ ಸಾವು!
ಅರ್ಧ ಗಂಟೆಯಲ್ಲಿ 90 ಎಂಲ್‌ನ 10 ಪ್ಯಾಕೆಟ್ ಮದ್ಯ ಕುಡಿಯುವ ಚಾಲೆಂಜ್ ನಲ್ಲಿ ಹೆಚ್ಚು ಮದ್ಯ ಸೇವಿಸಿದ್ದ ವ್ಯಕ್ತಿ ಮೃತಪಟ್ಟ ಪ್ರಕರಣ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕು ಸಿಗರನಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.
Published: 20th September 2023 10:31 AM | Last Updated: 20th September 2023 06:57 PM | A+A A-

ಸಾಂದರ್ಭಿಕ ಚಿತ್ರ
ಹೊಳೆನರಸೀಪುರ: ಅರ್ಧ ಗಂಟೆಯಲ್ಲಿ 90 ಎಂಲ್‌ನ 10 ಪ್ಯಾಕೆಟ್ ಮದ್ಯ ಕುಡಿಯುವ ಚಾಲೆಂಜ್ ನಲ್ಲಿ ಹೆಚ್ಚು ಮದ್ಯ ಸೇವಿಸಿದ್ದ ವ್ಯಕ್ತಿ ಮೃತಪಟ್ಟ ಪ್ರಕರಣ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕು ಸಿಗರನಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.
ತಿಮ್ಮೇಗೌಡ (60) ಮೃತ ವ್ಯಕ್ತಿ. ಗ್ರಾಮದ ಬಸ್ ನಿಲ್ದಾಣದಲ್ಲಿ ದೇವರಾಜು ಹಾಗೂ ತಿಮ್ಮೇಗೌಡರ ನಡುವೆ ಮೂವತ್ತು ನಿಮಿಷದಲ್ಲಿ 90 ಎಂಲ್‌ನ ಹತ್ತು ಪ್ಯಾಕೆಟ್ ಮದ್ಯ ಕುಡಿಯುವ ಪಂಥ ಕಟ್ಟಿದ್ದರು. ಇಬ್ಬರಿಗೂ ಕೃಷ್ಣೇಗೌಡ ಮದ್ಯದ ಪ್ಯಾಕೆಟ್‌ಗಳನ್ನು ನೀಡಿದ್ದ ಎಂದು ಆರೋಪಿಸಲಾಗಿದೆ.
ಚಾಲೆಂಜ್‌ಗಾಗಿ ಮದ್ಯ ಕುಡಿದು ರಕ್ತ ವಾಂತಿ ಮಾಡಿಕೊಂಡ ತಿಮ್ಮೇಗೌಡ ವಾಂತಿ ಮಾಡುತ್ತಲೇ ಬಸ್ ನಿಲ್ದಾಣದಲ್ಲೇ ಬಿದ್ದಿದ್ದ. ಈ ವೇಳೆ ಸ್ಥಳದಿಂದ ದೇವರಾಜು ಮತ್ತು ಕೃಷ್ಣೇಗೌಡ ಪರಾರಿಯಾಗಿದ್ದರು ಎಂದು ದೂರಲಾಗಿದೆ. ಕುಡಿದು ಬಿದ್ದಿದ್ದ ತಿಮ್ಮೇಗೌಡನ ಶವವನ್ನು ಗ್ರಾಮಸ್ಥರು ಆತನ ಮನೆಗೆ ತಂದಿದ್ದಾರೆ.
ಇದನ್ನೂ ಓದಿ: ಅಲ್ಪಸಂಖ್ಯಾತ ಸಮುದಾಯ ವಿದ್ಯಾರ್ಥಿಗಳ ಮೇಲೆ ಧರ್ಮ ನಿಂದನೆ ಹಲ್ಲೆ ಆರೋಪ: ಹಾಸನದ ಸರ್ಕಾರಿ ವಸತಿ ಶಾಲೆ ವಿರುದ್ಧ ದೂರು
ಕೃಷ್ಣಗೌಡ ಮತ್ತು ದೇವರಾಜು ಸ್ಥಳದಿಂದ ಪರಾರಿಯಾಗಿದ್ದಾರೆ. ತಲೆಮರೆಸಿಕೊಂಡಿರುವ ಅವರ ವಿರುದ್ಧ ಹೊಳೆನರಸೀಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.