ಸಾರ್ವಜನಿಕ ವಿತರಣಾ ವ್ಯವಸ್ಥೆ ಬಗ್ಗೆ ತಿಳಿಯಲು ಸಚಿವ ಕೆಹೆಚ್ ಮುನಿಯಪ್ಪ ಭೇಟಿ ಮಾಡಿದ ಮಲೇಷ್ಯಾ ತಂಡ
ಕರ್ನಾಟಕದ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಲು ಮಲೇಷ್ಯಾದ ಅಧಿಕೃತ ನಿಯೋಗವು ತಮ್ಮನ್ನು ಭೇಟಿ ಮಾಡಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ಬುಧವಾರ ಹೇಳಿದ್ದಾರೆ.
Published: 21st September 2023 08:19 AM | Last Updated: 21st September 2023 08:36 AM | A+A A-

ಕೆ.ಹೆಚ್. ಮುನಿಯಪ್ಪ
ಬೆಂಗಳೂರು: ಕರ್ನಾಟಕದ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಲು ಮಲೇಷ್ಯಾದ ಅಧಿಕೃತ ನಿಯೋಗವು ತಮ್ಮನ್ನು ಭೇಟಿ ಮಾಡಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ಬುಧವಾರ ಹೇಳಿದ್ದಾರೆ.
ಇಲ್ಲಿನ ಕುಮಾರ ಕೃಪಾ ಅತಿಥಿ ಗೃಹದಲ್ಲಿ ನಿಯೋಗವನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಮುನಿಯಪ್ಪ, ನಿಯೋಗವು ಇದೇ ರೀತಿಯ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ತಮ್ಮ ದೇಶದಲ್ಲಿ ಅಳವಡಿಸಿಕೊಳ್ಳಲು ಬಯಸಿದೆ ಎಂದರು.
'ನಿಯೋಗವು ಸಂಗ್ರಹಣೆ ಮತ್ತು ವಿತರಣಾ ಕಾರ್ಯವಿಧಾನವನ್ನು ತಿಳಿಯಲು ಪ್ರಯತ್ನಿಸಿತು. ಜೊತೆಗೆ ನಾವು ಯೋಜನೆಗಾಗಿ ಫಲಾನುಭವಿಗಳನ್ನು ಹೇಗೆ ಗುರುತಿಸುತ್ತೇವೆ ಎಂಬುದರ ಬಗ್ಗೆಯು ತಿಳಿದುಕೊಂಡಿತು. ಸ್ಟೋರೇಜ್ ಕಾರ್ಯವಿಧಾನದ ಬಗ್ಗೆ ಅರ್ಥಮಾಡಿಕೊಳ್ಳಲು ನಿಯೋಗವು ಇನ್ನೂ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಉಳಿಯುತ್ತದೆ' ಎಂದು ಅವರು ಹೇಳಿದರು.