ಬೆಂಗಳೂರು: ಮದ್ಯದ ಅಮಲು, ಅತಿವೇಗದ ಚಾಲನೆ; ಕಂಬಕ್ಕೆ BMW ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಯುವಕರ ಸಾವು
ಯಶವಂತಪುರದ ಆರ್ ಎಂಸಿ ಯಾರ್ಡ್ ಬಳಿ ಮುಂಜಾನೆ 3.30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಮೃತಪಟ್ಟವರನ್ನು 31 ವರ್ಷದ ಮನಮೋಹನ್ ಹಾಗೂ 25 ವರ್ಷದ ನಿಖಿಲ್ ಎಂದು ಗುರುತಿಸಲಾಗಿದೆ.
Published: 22nd September 2023 09:42 AM | Last Updated: 22nd September 2023 09:42 AM | A+A A-

ಅಪಘಾತಕ್ಕೊಳಗಾದ ಬೈಕ್
ಬೆಂಗಳೂರು: ಕಂಬಕ್ಕೆ ಬಿಎಂಡಬ್ಲ್ಯೂ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಯಶವಂತಪುರದ ಆರ್ ಎಂಸಿ ಯಾರ್ಡ್ ಬಳಿ ಮುಂಜಾನೆ 3.30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಮೃತಪಟ್ಟವರನ್ನು 31 ವರ್ಷದ ಮನಮೋಹನ್ ಹಾಗೂ 25 ವರ್ಷದ ನಿಖಿಲ್ ಎಂದು ಗುರುತಿಸಲಾಗಿದೆ.
ಯುವಕರು ಬಿಎಂಡಬ್ಲ್ಯೂ ಬೈಕ್ ಚಲಾಯಿಸುತ್ತಿದ್ದರು. ಯಶವಂತಪುರದಿಂದ ಆರ್‌ಎಮ್‌ಸಿ ಯಾರ್ಡ್ ರೋಡ್ ಕಡೆ ಡ್ರೈವ್ ಮಾಡುತ್ತಿದ್ದ ಇವರು ಮದ್ಯ ಸೇವಿಸಿದ್ದರು ಹಾಗೂ ಅತಿವೇಗದಿಂದ ಚಾಲನೆ ಮಾಡಿದ್ದುದು ಗೊತ್ತಾಗಿದೆ. ಇಬ್ಬರೂ ಹೆಲ್ಮೆಟ್ ಕೂಡ ಧರಿಸಿರಲಿಲ್ಲ. ಸ್ನೇಹಿತರ ಜೊತೆ ಪಾರ್ಟಿ ಮುಗಿಸಿ ಮನೆಗೆ ಮನಮೋಹನ್, ನಿಖಿಲ್ ವಾಪಸ್ ಬರುತ್ತಿದ್ದರು.
ಇದನ್ನೂ ಓದಿ: ಬೆಂಗಳೂರು: ಮಗಳ ಬಗ್ಗೆ ಅಶ್ಲೀಲ ಕಮೆಂಟ್; ಕುಡಿದ ಮತ್ತಿನಲ್ಲಿ ತಂದೆಯಿಂದ ಸ್ನೇಹಿತನ ಕೊಲೆ
ವೇಗದಿಂದಾಗಿ ನಿಯಂತ್ರಣ ಸಿಗದೆ ಬೈಕ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇಬ್ಬರೂ ಬೈಕ್‌ನಿಂದ ದೂರಕ್ಕೆ ಹಾರಿಬಿದ್ದಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ಮನಮೋಹನ್ ಬನಶಂಕರಿ ನಿವಾಸಿ ಎಂಬ ಮಾಹಿತಿ ದೊರೆತಿದೆ. ಇಬ್ಬರ ಮೃತದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಯಶವಂತಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.