ಉಡುಪಿ: 3 ವರ್ಷಗಳ ಬಳಿಕ ದುಬೈನಿಂದ ತವರಿಗೆ ಬಂದು ಅಮ್ಮನ ಬಳಿ ಅಪರಿಚಿತನಂತೆ ಮೀನು ಖರೀದಿಸಿ ಮಗನ ಸರ್ಪ್ರೈಸ್!
ಯಾರಿಗೂ ಮಾಹಿತಿ ನೀಡದೆ ಮೂರು ವರ್ಷಗಳ ಬಳಿಕ ಸ್ವದೇಶಕ್ಕೆ ಮರಳಿದ ಯುವಕನೋರ್ವ ಮೀನು ವ್ಯಾಪಾರಿಯಾದ ತನ್ನ ತಾಯಿಯ ಬಳಿಗೆ ಅಪರಿಚಿತನಂತೆ ತೆರಳಿ ಮೀನು ಖರೀದಿಸುವ ಮೂಲಕ ಅಮ್ಮನನ್ನು ಅಚ್ಚರಿಗೊಳಿಸಿದ್ದಾರೆ.
Published: 22nd September 2023 01:33 PM | Last Updated: 22nd September 2023 07:34 PM | A+A A-

ದುಬೈನಿಂದ ವಾಪಸಾದ ಮಗ
ಉಡುಪಿ: ಯಾರಿಗೂ ಮಾಹಿತಿ ನೀಡದೆ ಮೂರು ವರ್ಷಗಳ ಬಳಿಕ ಸ್ವದೇಶಕ್ಕೆ ಮರಳಿದ ಯುವಕನೋರ್ವ ಮೀನು ವ್ಯಾಪಾರಿಯಾದ ತನ್ನ ತಾಯಿಯ ಬಳಿಗೆ ಅಪರಿಚಿತನಂತೆ ತೆರಳಿ ಮೀನು ಖರೀದಿಸುವ ಮೂಲಕ ಅಮ್ಮನನ್ನು ಅಚ್ಚರಿಯಲ್ಲಿ ಕೆಡವಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗಂಗೊಳ್ಳಿ ನಿವಾಸಿ ರೋಹಿತ್ 3 ವರ್ಷಗಳ ಅನಂತರ ದುಬೈನಿಂದ ತಾಯ್ನಾಡಿಗೆ ಮರಳಿದ್ದರು. ಮನೆಯವರಿಗೆ, ದಿಢೀರ್ ಖುಷಿ ನೀಡುವ ಯೋಚನೆಯಿಂದ ತಾನು ಬರುವ ಮಾಹಿತಿಯನ್ನು ಯಾರಿಗೂ ನೀಡಿರಲಿಲ್ಲ. ಮನೆಗೆ ಬಂದಾಗ ಮನೆಮಂದಿ ರೋಹಿತ್‌ನನ್ನು ಅಚ್ಚರಿ, ಖುಶಿಯಿಂದ ಎದುರುಗೊಂಡರು. ತಾಯಿ ಸುಮಿತ್ರಾ ಅವರು ಮನೆಯಲ್ಲಿ ಇಲ್ಲದ್ದರಿಂದ ಬೇಸರಗೊಂಡ ರೋಹಿತ್ ನೇರವಾಗಿ ಗಂಗೊಳ್ಳಿ ಬಂದರಿನ ಬಳಿ ಆಕೆ ಮೀನು ಮಾರುವ ಸ್ಥಳಕ್ಕೆ ತೆರಳಿದರು.
ಇದನ್ನೂ ಓದಿ: ಪೊರಕೆಯಿಂದ ಹೊಡೆದು ಮಹಿಳೆಯಿಂದ ಜಾತಿ ನಿಂದನೆ; ನೊಂದ ವ್ಯಕ್ತಿ ಆತ್ಮಹತ್ಯೆಗೆ ಶರಣು
ಅಮ್ಮನಿಗೆ ಗುರುತು ಸಿಗಬಾರದೆಂದು ಟೋಪಿ ಮತ್ತು ಕನ್ನಡಕ ಧರಿಸಿ, ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಮೀನು ಖರೀದಿಯ ನಾಟಕವಾಡಿದರು. ಗ್ರಾಹಕನ ಹಾವಭಾವ, ಸ್ವರ ಗಮನಿಸಿದ ತಾಯಿಗೆ ಇದು ತನ್ನ ಮಗನೇ ಎಂದು ಹೆತ್ತ ಕರುಳು ಹೇಳಿತು. ತತ್‌ಕ್ಷಣ ಮಗನನ್ನು ಬಿಗಿದಪ್ಪಿ ಆನಂದಬಾಷ್ಪ ಹರಿಸಿ ಕಣ್ಣೊರೆಸುತ್ತಿರುವ ದೃಶ್ಯ ವೈರಲ್ ಆಗಿರುವ ವೀಡಿಯೋದಲ್ಲಿ ದಾಖಲಾಗಿದೆ.
Son of a fisherwoman who worked in Dubai returned to his native- Gangolli in #Uudpi, he did not reveal his identity initially, but mother sensed it was his son who played a prank#Mothersentiment @XpressBengaluru @vinndz_TNIE pic.twitter.com/XvS5XIGeKc
— Prakash (@prakash_TNIE) September 22, 2023