BMTC ಸಿಬ್ಬಂದಿಗೆ 1 ಕೋಟಿ ರೂ. ಅಪಘಾತ ವಿಮೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನೌಕರರು 1 ಕೋಟಿ ರೂ.ವರೆಗಿನ ಅಪಘಾತ ವಿಮೆಗೆ ಅರ್ಹರಾಗಿರುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
Published: 26th September 2023 01:00 PM | Last Updated: 26th September 2023 07:48 PM | A+A A-

ಅಪಘಾತ ವಿಮೆ (ಸಂಗ್ರಹ ಚಿತ್ರ)
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನೌಕರರು 1 ಕೋಟಿ ರೂ.ವರೆಗಿನ ಅಪಘಾತ ವಿಮೆಗೆ ಅರ್ಹರಾಗಿರುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ ನಡೆದ ಬಿಎಂಟಿಸಿ ರಜತ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ನೌಕರರಿಗೆ ಲಭ್ಯವಿರುವ ಒಂದು ಕೋಟಿ ಅಪಘಾತ ವಿಮೆಯನ್ನು ಈಗ ಬಿಎಂಟಿಸಿ ನೌಕರರಿಗೂ ವಿಸ್ತರಿಸಲಾಗುವುದು. ಬಿಎಂಟಿಸಿ ಉದ್ಯೋಗಿಯೊಬ್ಬರು ಸಾವನ್ನಪ್ಪಿದರೆ, ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಅಪಘಾತ ವಿಮಾ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.
ಇದನ್ನೂ ಓದಿ: ರಜತ ಮಹೋತ್ಸವದ ಸಂಭ್ರಮದಲ್ಲಿ ಬಿಎಂಟಿಸಿ: 'ನಮ್ಮ ಬಿಎಂಟಿಸಿ ಆ್ಯಪ್'ಗೆ ಇಂದು ಅಧಿಕೃತ ಚಾಲನೆ
ಇದೇ ವೇಳೆ ಅನುಕಂಪದ ಆಧಾರದ ಮೇಲೆ ಅಪಘಾತದಿಂದ ಸಾವನ್ನಪ್ಪುವ ನೌಕರರ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡಲಾಗುವುದು. 'ಕೆಲವು ತಾಂತ್ರಿಕ ಕಾರಣಗಳಿಂದ 8 ವರ್ಷಗಳಿಂದ ಉದ್ಯೋಗಗಳನ್ನು ಒದಗಿಸಲಾಗಿಲ್ಲ. ಕೂಡಲೇ ಹಂತಹಂತವಾಗಿ ಕುಟುಂಬ ಸದಸ್ಯರಿಗೆ ನೇಮಕಾತಿ ಆದೇಶ ನೀಡುವಂತೆ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಅವರಿಗೆ ಆದೇಶ ನೀಡಿದ್ದೇನೆ ಎಂದು ಹೇಳಿದರು.